»   » ಯೂಟ್ಯೂಬಲ್ಲಿ 8 ದಶಲಕ್ಷ ಡಾಲರ್ ಗಳಿಸಿದ ಹಾಡು

ಯೂಟ್ಯೂಬಲ್ಲಿ 8 ದಶಲಕ್ಷ ಡಾಲರ್ ಗಳಿಸಿದ ಹಾಡು

Posted By:
Subscribe to Filmibeat Kannada

ಸಾಮಾಜಿಕ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ನಲ್ಲಿ ಆಬಾಲವೃದ್ಧರಾಗಿ ಗಮನಸೆಳೆದ ಹಾಡು "ಗಂಗ್ನಮ್ ಸ್ಟೈಲ್". ಈ ಹಾಡು ಕೇಳುತ್ತಿದ್ದರೆ ಒಮ್ಮೆ ಕುಣಿದೇ ಬಿಡೋಣ ಎನ್ನಿಸುತ್ತದೆ. ಅಂಥಹ ಹಾಡು ಈಗ ಕೋಟ್ಯಾಂತರ ಡಾಲರ್ ಗಳಿಸಿ ಮತ್ತೊಂದು ದಾಖಲೆ ನಿರ್ಮಿಸಿದೆ. (ಗಂಗ್ನಮ್ ಸ್ಟೈಲ್ ವಿಡಿಯೋ)

ದಕ್ಷಿಣ ಕೊರಿಯಾದ ರ್‍ಯಾಪ್ ಗಾಯಕ ಪಾರ್ಕ್ ಜೇ ಸ್ಯಾಂಗ್ (ಪಿಎಸ್ ವೈ) ಮಾಡಿದ ಈ ಡಾನ್ಸ್ ಮೋಡಿ ವಿಶ್ವವ್ಯಾಪಿ ಜನಪ್ರಿಯವಾಯಿತು. ಈ ಹಾಡಗೆ 80 ಕೋಟಿಗೂ ಅಧಿಕ ಕ್ಲಿಕ್ಸ್ ಬರುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಜಾಹೀರಾತು ರೂಪದಲ್ಲಿ ಬಂತು ಲಕ್ಷಾಂತರ ಹಣ

ಇದುವರೆಗೂ ಈ ಹಾಡು 8 ದಶಲಕ್ಷ ಡಾಲರ್ ಹಣವನ್ನು ಜಾಹೀರಾತು ರೂಪದಲ್ಲಿ ಗಳಿಸಿದೆ ಎಂದು ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ತಿಳಿಸಿದೆ. ಯೂಟ್ಯೂಬ್ ಜಾಹೀರಾತು ವರಮಾನ ವಿಷಯಗಳ ಸಂಬಂಧ ಮಾತನಾಡುತ್ತಾ ಗೂಗಲ್ ಮುಖ್ಯ ಬಿಜಿನೆಸ್ ಆಫೀಸರ್ ನಿಕೇಶ್ ಅರೋರಾ ಈ ವಿಷಯವನ್ನು ಬಹಿರಂಗಪಡಿಸಿದರು.

ಗಂಗ್ನಮ್ ಸ್ಟೈಲ್ ಗೆ ಇದುವರೆಗೂ 1.23 ಶತಕೋಟಿ ಕ್ಲಿಕ್ಸ್

ಈ ವರ್ಷ ಡಿಸೆಂಬರ್ ವೇಳೆಗೆ ಗಂಗ್ನಮ್ ಸ್ಟೈಲ್ ಹಾಡು ಹತ್ತು ದಶಲಕ್ಷ ಕ್ಲಿಕ್ಸ್ ದಾಖಲಿಸಿದೆ. ಈ ಮೂಲಕ ಅಂತರ್ಜಾಲದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಅಂದರೆ 2012ರ ಜೂನ್ ತಿಂಗಳಲ್ಲಿ ಯೂಟ್ಯೂಬ್ ಗೆ ಹಾಕಿದ ಈ ಹಾಡು ಇದುವರೆಗೂ 1.23 ಶತಕೋಟಿ ಕ್ಲಿಕ್ಸ್ ಪಡೆದಿದೆ ಎಂದಿದ್ದಾರೆ.

ಜಾಹೀರಾತುಗಳ ಮೂಲಕ ಅತ್ಯಧಿಕ ವರಮಾನ

ಈ ಹಾಡು ತನ್ನ ಅತ್ಯಾಕರ್ಷಕ ಸಂಗೀತ ಹಾಗೂ ತಮ್ಮದೇ ಆದಂತಹ ಭಂಗಿಗಳಿಗೆ ಹೆಸರಾಗಿದ್ದು ಎಲ್ಲರನ್ನೂ ರಂಜಸಿದೆ. ಈ ಹಾಡನ್ನು ಅತ್ಯಧಿಕವಾಗಿ ಡೌನ್ ಲೋಡ್ ಮಾಡಿಕೊಳ್ಳಲಾಗಿದ್ದು, ಜಾಹೀರಾತಿನ ರೂಪದಲ್ಲಿ ಅತ್ಯಧಿಕ ವರಮಾನ ಗಳಿಸಿದೆ ಎಂದು ಯೂಟ್ಯೂಬ್ ತಾಣದ ಟ್ರೆಂಡ್ಸ್ ಮ್ಯಾನೇಜರ್ ಕೆವಿನ್ ಅಲ್ಲೋಕಾ ತಿಳಿಸಿದ್ದಾರೆ.

ಪಿಎಸ್ ವೈ ಅದೃಷ್ಟರೇಖೆಗಳನ್ನೇ ಬದಲಾಯಿಸಿದ ಹಾಡು

"ಗಂಗ್ನಮ್ ಸ್ಟೈಲ್" ಹಾಡಿನ ಮೂಲಕ ಪಿಎಸ್ ವೈ ಕೊರಿಯಾದ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಬದಲಾದರು. ಕುದುರೆಯೊಂದನ್ನು ಕಲ್ಪಿಸಿಕೊಂಡು ಅದರ ಮೇಲೆ ಸವಾರಿ ಮಾಡುವಂತೆ ಸಾಗುವ ಈ ಹಾಡಿನಲ್ಲಿ ಕೊರಿಯಾ ಜನರ ಕೊಳ್ಳುಬಾಕತನವನ್ನು, ಮಾಲ್ ಸಂಸ್ಕೃತಿಯನ್ನು ಪಿಎಸ್ ವೈ ಅಣಕಿಸಿದ್ದಾನೆ.

ಕೊರಿಯಾದ ಕೊಳ್ಳುಬಾಕತನವನ್ನು ಅಣಕಿಸಿದ ಹಾಡು

ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ನ ಉಪನಗರ ಗಂಗ್ನಮ್ ಹೆಸರನ್ನೇ ತನ್ನ ಹಾಡಿಗೆ ಬಳಸಿಕೊಂಡಿರುವುದು ವಿಶೇಷ. ಕೊರಿಯಾದ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈತ ಚಿಕ್ಕಂದಿನಲ್ಲೇ ಸಂಗೀತದ ಕಡೆಗೆ ಆಕರ್ಷಿತನಾಗಿದ್ದ. ಮಗ ದೊಡ್ಡ ಉದ್ಯಮಿಯಾಗಬೇಕು ಎಂದು ಪೋಷಕರು ಕನಸು ಕಂಡಿದ್ದರು.

ಪಿಎಸ್ ವೈ ಸಂಗೀತದ ಹುಚ್ಚು

ಆದರೆ ಈತನ ಮನಸ್ಸೆಲ್ಲಾ ಸಂಗೀತದ ಕಡೆಗೂ ಇತ್ತು. ಲಕ್ಷಾಂತರ ಹಣ ಖರ್ಚು ಮಾಡಿ ಈತನನ್ನು ಅಮೆರಿಕಾದ ಬಿಜಿನೆಸ್ ಸ್ಕೂಲ್ ಗೆ ಓದಲು ಕಳುಹಿಸಿದರೆ ಅಲ್ಲಿ ಈತ ಟ್ಯೂಷನ್ ಶುಲ್ಕದಲ್ಲಿ ಸಂಗೀತ ಸಲಕರಣೆಗಳನ್ನು ಕೊಳ್ಳುತ್ತಿದ್ದ. ಕಡೆಗೂ ಈತನ ಸಂಗೀತದ ಹುಚ್ಚನ್ನು ಬಿಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

English summary
The Gangnam Style video by South Korean rapper Psy has reaped more than $8 million in ad revenue reveals Google Chief Business Officer Nikesh Arora. Ad revenue from popular YouTube videos is shared with creators of the content.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada