For Quick Alerts
  ALLOW NOTIFICATIONS  
  For Daily Alerts

  'ತ್ರಿಬಲ್ ರೈಡಿಂಗ್' ಮಾಡ್ತಾನೇ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಅಂತ ಹೆಜ್ಜೆ ಹಾಕಿದ 'ಗೋಲ್ಡನ್ ಸ್ಟಾರ್'!

  |

  'ಗಾಳಿಪಟ 2' ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ. ಭಟ್ಟರ ಸಿನಿಮಾದಲ್ಲಿ ಅಳಿಸಿ- ನಗಿಸಿದ್ದ ಗಣೇಶ್ ಈ ಬಾರಿ 'ತ್ರಿಬಲ್ ರೈಡಿಂಗ್' ಹೊರಟಿದ್ದಾರೆ.

  ಅಷ್ಟಕ್ಕೂ ಅದಿತಿ ಪ್ರಭುದೇವಾ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ 'ತ್ರಿಬಲ್ ರೈಡಿಂಗ್' ಹೊರಟಿದ್ದಾರೆ. ಇಷ್ಟು ಸೈಲೆಂಟಾಗಿಯೇ ಇದ್ದ ಸಿನಿಮಾ ತಂಡ ಇದೀಗ ಬಿಡುಗಡೆಯ ದಿನ ಹತ್ತಿರ ಬರುತ್ತಿದ್ದಂತೆ ಭರ್ಜರಿ ಪ್ರಚಾರ ಮಾಡಲು ಮುಂದಾಗಿದೆ.

  ಈ ಹಿಂದೆ 'ತ್ರಿಪಲ್ ರೈಡಿಂಗ್' ಸಿನಿಮಾ ಎರಡು ಹಾಡುಗಳನ್ನು ರಿಲೀಸ್ ಮಾಡಲಾಗಿತ್ತು. ಆ ಎರಡೂ ಹಾಡುಗಳು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಬೆನ್ನಲ್ಲೇ ಮೂರನೇ ಸಾಂಗ್ ಅನ್ನು ರಿಲೀಸ್ ಮಾಡಲಾಗಿದೆ. "ಟ್ವಿಂಕಲ್ ಟ್ವಿಂಕಲ್ ಲಿಟಲ್‌ ಸ್ಟಾರ್..." ಅನ್ನೋ ಹಾಡನ್ನು ಡಾ. ವಿ.ನಾಗೇಂದ್ರ ಪ್ರಸಾದ್ ಬರೆದಿದ್ದು, ಈಗಾಗಲೇ ರಿಲೀಸ್ ಆಗಿದೆ.

  'ತ್ರಿಬಲ್ ರೈಡಿಂಗ್' ಸಿನಿಮಾಗೆ ಸಾಯಿಕಾರ್ತಿಕ್ ಟ್ಯೂನ್‌ಗಳನ್ನು ಹಾಕಿದ್ದು, "ಟ್ವಿಂಕಲ್ ಟ್ವಿಂಕಲ್ ಲಿಟಲ್‌ ಸ್ಟಾರ್..." ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ.‌ ಭೂಷಣ್ ನೃತ್ಯ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. "ತ್ರಿಬಲ್ ರೈಡಿಂಗ್ ಸಿನಿಮಾ ಕೊರೊನಾ ಸಮಯದಲ್ಲಿ ಆರಂಭ ಆಗಿತ್ತು. ಶೂಟಿಂಗ್‌ಗೆ ಅನುಮತಿ ಸಿಕ್ಕಿದ ಕೂಡಲೇ ಮೈಸೂರಿನಲ್ಲಿ ಶೂಟಿಂಗ್ ಆರಂಭ ಮಾಡಲಾಗಿತ್ತು. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಈಗ ಮೂರನೇ ಹಾಡು ರಿಲೀಸ್ ಆಗಿದೆ. ಇದೇ ನವೆಂಬರ್ 15ರಂದು ಟ್ರೈಲರ್ ರಿಲೀಸ್ ಆಗುತ್ತಿದೆ." ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ್ದಾರೆ.

  Golden star Ganesh Starrer Triple Riding Movie Twinkle Twinkle Song Released

  'ತ್ರಿಬಲ್ ರೈಡಿಂಗ್' ಸಿನಿಮಾವನ್ನು ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೇ ನವೆಂಬರ್ 25 ಚಿತ್ರ ಬಿಡುಗಡೆಯಾಗುತ್ತಿದೆ. "ಇಂದು ಬಿಡುಗಡೆಯಾದ "ಟ್ವಿಂಕಲ್ ಟ್ವಿಂಕಲ್ ಲಿಟಲ್‌ ಸ್ಟಾರ್..." ಸಾಂಗ್ ಅದ್ಭುತವಾಗಿದೆ. ಗಣೇಶ್ ಸರ್ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ಎರಡು ಜಡೆ ಒಟ್ಟಿಗೆ ಸೇರುವುದಿಲ್ಲ ಎನ್ನುತ್ತಾರೆ. ಆದರೆ ಈ ಚಿತ್ರದಲ್ಲಿ ನಾವು ಮೂವರು ನಾಯಕಿಯರು. ಸಿನಿಮಾ ಪೂರ್ತಿ ಖುಷಿಯಿಂದ ಕಾಲ ಕಳೆದಿದ್ದೇವೆ. ಈ ಸಿನಿಮಾಗೆ ಸಪೂರ್ಟ್ ಮಾಡಿ ಎನ್ನುತ್ತಾರೆ." ನಾಯಕಿ ಅದಿತಿ ಪ್ರಭುದೇವ.

  ಅಂದ್ಹಾಗೆ 'ತ್ರಿಬಲ್ ರೈಡಿಂಗ್' ಸಿನಿಮಾದಲ್ಲಿ ಅದಿತಿ ಪ್ರಭುದೇವಾ ಜೊತೆ ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮಜವಾದ ಕಥೆಯೊಂದಿಗೆ ಮ್ಯೂಸಿಕಲ್ ಸಿನಿಮಾ ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

  English summary
  Golden star Ganesh Starrer Triple Riding Movie Twinkle Twinkle Song Released, Know More.
  Wednesday, November 9, 2022, 23:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X