twitter
    For Quick Alerts
    ALLOW NOTIFICATIONS  
    For Daily Alerts

    ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡ್ತೀನಿ: ಮಾಜಿ ಪಾಕ್ ಗಾಯಕ

    |

    ಪಾಕಿಸ್ತಾನದಲ್ಲಿ ಕಲೆಗೆ ಕೆಲವು ನಿಬಂಧನೆಗಳಿವೆ. ಸಿನಿಮಾಗಳನ್ನು ಬ್ಯಾನ್ ಮಾಡಿದ್ದ ಪಾಕಿಸ್ತಾನ ಇತ್ತೀಚೆಗೆ ಮತ್ತೆ ಸಿನಿಮಾಗಳಿಗೆ ಅವಕಾಶ ನೀಡಿದೆಯಾದರೂ ಕಠಿಣವಾದ ಸೆನ್ಸಾರ್‌ಶಿಪ್‌ ಅಲ್ಲಿದೆ.

    ಸ್ವತಂತ್ರ್ಯ ಆಲೋಚನೆಗಳಿಗೆ, ಅಭಿವ್ಯಕ್ತಿಗೆ ಅವಕಾಶ ಕಡಿಮೆಯೆಂಬ ಕಾರಣಕ್ಕೆ ಹಲವು ಕಲಾವಿದರು, ಚಿಂತಕರು ಪಾಕ್‌ ಬಿಟ್ಟು ಬೇರೆ ದೇಶಗಳಲ್ಲಿ ಸೆಟಲ್ ಆದ ಉದಾಹರಣೆಗಳಿವೆ. ಅವುಗಳನ್ನು ಒಬ್ಬರು ಖ್ಯಾತ ಗಾಯಕ ಅದ್ನಾನ್ ಸಮಿ.

    ಆಸ್ಕರ್‌ಗೆ ಆಯ್ಕೆಯಾಗಿದ್ದ ಸಿನಿಮಾವನ್ನೇ ಬ್ಯಾನ್ ಮಾಡಿದ ಪಾಕಿಸ್ತಾನ! ಕಾರಣ?ಆಸ್ಕರ್‌ಗೆ ಆಯ್ಕೆಯಾಗಿದ್ದ ಸಿನಿಮಾವನ್ನೇ ಬ್ಯಾನ್ ಮಾಡಿದ ಪಾಕಿಸ್ತಾನ! ಕಾರಣ?

    ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಅದ್ನಾನ್ ಸಮಿ ಮೂಲತಃ ಪಾಕಿಸ್ತಾನಿ ಆದರೆ 2016 ರಲ್ಲಿ ಅರ್ಜಿ ಹಾಕಿ ಭಾರತದ ನಾಗರೀಕತೆ ಪಡೆದುಕೊಂಡು ಇಲ್ಲಿಯೇ ವಾಸವಿದ್ದಾರೆ. ಇದೀಗ ಅದ್ನಾನ್ ಸಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್‌ನಲ್ಲಿ ತಮ್ಮ ಮಾಜಿ ದೇಶ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ.

    I Will Expose Real Face Of Pakistan: Singer Adnan Sami

    ನೀನ್ಯಾಕೆ ಪಾಕಿಸ್ತಾನದ ವಿರುದ್ಧ ಮಾತನಾಡುತ್ತೀಯ ಎಂದು ಕೇಳುತ್ತಾರೆ. ಸತ್ಯವೇನೆಂದರೆ, ನಾನು ಪಾಕಿಸ್ತಾನದ ಜನರ ವಿರುದ್ಧ ಅಸಹನೆ ಹೊಂದಿಲ್ಲ. ಅವರು ಸದಾ ನನ್ನನ್ನು ಪ್ರೀತಿಸಿದ್ದಾರೆ. ನನ್ನ ಅಸಮಾಧಾನ ಇರುವುದು ಅಲ್ಲಿನ ವ್ಯವಸ್ಥೆ ಬಗ್ಗೆ. ಯಾರು ನನ್ನನ್ನು ಹತ್ತಿರದಿಂದ ಬಲ್ಲರೊ ಅವರಿಗೆ ಗೊತ್ತು, ನನ್ನೊಂದಿಗೆ ಅಲ್ಲಿನ ವ್ಯವಸ್ಥೆ ಹೇಗೆ ನಡೆದುಕೊಂಡಿತು ಎಂದು. ಸತತವಾಗಿ ನನಗೆ ಸಮಸ್ಯೆ ನೀಡುತ್ತಲೇ ಬಂದಿತು. ಹಾಗಾಗಿ ನಾನು ಪಾಕಿಸ್ತಾನವನ್ನು ತೊರೆಯಬೇಕಾಯಿತು'' ಎಂದಿದ್ದಾರೆ.

    ''ಖಂಡಿತ ಒಂದಲ್ಲ ಒಂದು ದಿನ ಪಾಕಿಸ್ತಾನದ ನಿಜ ಬಣ್ಣವನ್ನು ನಾನು ಬಯಲು ಮಾಡುತ್ತೀನಿ. ಅಲ್ಲಿನ ವ್ಯವಸ್ಥೆ ನನ್ನೊಂದಿಗೆ ಹೇಗೆ ನಡೆದುಕೊಂಡಿತು ಎಂದು ಹೇಳುತ್ತೇನೆ. ನಾನು ಹೇಳುವ ಆ ವಿಷಯ ಅಲ್ಲಿನ ಸಾಕಷ್ಟು ಜನರನ್ನು ಆಶ್ಚರ್ಯಕ್ಕೆ ದೂಡಬಹುದು. ಇಷ್ಟು ವರ್ಷ ನಾನು ಮೌನವಾಗಿಯೇ ಇದ್ದೆ. ಆದರೆ ಒಂದಲ್ಲ ಒಂದು ದಿನ ಖಂಡಿತ ಈ ಬಗ್ಗೆ ನಾನು ಮೌನ ಮುರಿಯುತ್ತೇನೆ'' ಎಂದಿದ್ದಾರೆ ಅದ್ನಾನ್ ಸಮಿ.

    ಅದ್ನಾನ್ ಸಮಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿದ್ದಾರೆ. ಅವರು ಪಾಕಿಸ್ತಾನದಲ್ಲಿದ್ದಾಗಲೂ ಅವರ ಹಾಡುಗಳು ಭಾರತದಲ್ಲಿ ಸೂಪರ್ ಹಿಟ್ ಆಗುತ್ತಿದ್ದವು. ಅವರಿಗೆ ಭಾರತದ ನಾಗರೀಕತೆ ದೊರಕುವ ಮೊದಲೂ ಸಹ ಇಲ್ಲಿನ ಹಲವು ಸಿನಿಮಾಗಳಿಗೆ ಅವರು ಹಾಡು ಹಾಡಿದ್ದರು.

    ಪಾಕಿಸ್ತಾನದ ಚಿಂತಕ ತಾರೆಖ್ ಫತಾಹ್ ಸೇರಿದಂತೆ ಹಲವರು ಭಾರತದ ನಾಗರೀಕತೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವೇ ಈ ಹಿಂದೆ ಕೊಟ್ಟಿರುವ ಮಾಹಿತಿಯಂತೆ 2015 ರಲ್ಲಿ 263 ಪಾಕಿಸ್ತಾನಿಯರಿಗೆ ಭಾರತದ ನಾಗರೀಕತೆ ನೀಡಲಾಗಿದೆ. 2016 ರಲ್ಲಿ 63 ಪಾಕಿಸ್ತಾನಿಯರಿಗೆ ಭಾರತದ ನಾಗರೀಕತೆ ನೀಡಲಾಗಿದೆ. 2014 ರಲ್ಲಿ 267 ಪಾಕಿಸ್ತಾನಿಯರಿಗೆ ಭಾರತದ ನಾಗರೀಕತೆ ನೀಡಲಾಗಿದೆ. ಇದರಲ್ಲಿ ಕಲಾವಿದರು, ಚಿಂತಕರು ಇದ್ದಾರೆ.

    English summary
    Singer Adnan Sami said I will expose real face of Pakistan. He once resident of Pakistan but in 2016 he get citizenship of India.
    Tuesday, November 15, 2022, 7:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X