»   » ಉಪ್ಪಿ-2 ಚಿತ್ರದ 'ಭಂಗಿ ಹಾಡು' ಲೀಕ್.!?

ಉಪ್ಪಿ-2 ಚಿತ್ರದ 'ಭಂಗಿ ಹಾಡು' ಲೀಕ್.!?

Posted By:
Subscribe to Filmibeat Kannada

ಬೇಡ ಬೇಡ ಅಂದ್ರೂ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ 'ಉಪ್ಪಿ-2' ಚಿತ್ರಕ್ಕೆ ಭರ್ಜರಿ ಪ್ರಚಾರ ಸಿಗುತ್ತಲೇ ಇದೆ. ಪ್ರಮೋಷನ್ ಮಾಡದೇ ಸಿನಿಮಾ ರಿಲೀಸ್ ಮಾಡ್ಬೇಕು ಅನ್ನುವ ಪ್ಲಾನ್ ನಲ್ಲಿ ಉಪ್ಪಿ ಇದ್ದರೂ, ಅಭಿಮಾನಿಗಳು ಮಾತ್ರ 'ಉಪ್ಪಿಟ್ಟು'ಗೆ ಆಗಾಗ ಒಗ್ಗರಣೆ ಹಾಕುತ್ತಲೇ ಇದ್ದಾರೆ.

ಬಹುನಿರೀಕ್ಷಿತ 'ಉಪ್ಪಿ-2' ಚಿತ್ರದ ಆಡಿಯೋ ಜುಲೈ 17ಕ್ಕೆ ರಿಲೀಸ್ ಆಗಲಿದೆ. ಹಾಗಂತ ಖುದ್ದು ಉಪೇಂದ್ರ ಖಾಲಿ ಪೋಸ್ಟರ್ ನಲ್ಲಿ ಆಡಿಯೋ ರಿಲೀಸ್ ದಿನಾಂಕವನ್ನ ಅನೌನ್ಸ್ ಮಾಡಿದ್ದರು. ['ಉಪ್ಪಿ 2' ಪೋಸ್ಟರ್ ಯಾಕೆ ಖಾಲಿಯಾಗೈತೆ!]


ಇಲ್ಲಿವರೆಗೂ 'ಉಪ್ಪಿ-2' ಚಿತ್ರದ ಬಗ್ಗೆ ಉಪೇಂದ್ರ ಯಾವೊಂದು ಕ್ಲೂ ಕೂಡ ಬಿಟ್ಟುಕೊಟ್ಟಿಲ್ಲ. ಆಡಿಯೋ ರಿಲೀಸ್ ಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ, 'ಉಪ್ಪಿ-2' ಚಿತ್ರದ ಹಾಡೊಂದು ಲೀಕ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 'ಉಪ್ಪಿ-2' ಚಿತ್ರದ ಭಂಗಿ ಹಾಡು ಬಿಸಿ ದೋಸೆಯಂತೆ ಸೇಲ್ ಆಗ್ತಿದೆ. ಮುಂದೆ ಓದಿ.....


'ಉಪ್ಪಿ-2' ಚಿತ್ರದ ಹಾಡು ಲೀಕ್.?

'ರಿಯಲ್' ಅಭಿಮಾನಿಗಳು ಬಕಪಕ್ಷಿಗಳಂತೆ ಕಾದು ಕುಳಿತಿರುವುದು 'ಉಪ್ಪಿಟ್ಟು' ರುಚಿ ಸವಿಯೋಕೆ. ವರ್ಷದಿಂದ ಚಿತ್ರೀಕರಣದಲ್ಲೇ ಬಿಜಿಯಾಗಿರುವ 'ಉಪ್ಪಿ-2' ಚಿತ್ರದ ಆಡಿಯೋ ರಿಲೀಸ್ ಇದೇ ಶುಕ್ರವಾರಕ್ಕೆ ನಿಗದಿಯಾಗಿದೆ. ಅಷ್ಟರಲ್ಲೇ ಚಿತ್ರದ ಹಾಡೊಂದು ಯೂಟ್ಯೂಬ್ ನಲ್ಲಿ ಲೀಕ್ ಆಗಿದೆ. ಹಾಡನ್ನ ಕೇಳೋಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....


ಆ ಹಾಡು ಇದೇ..!

'ಉಪ್ಪಿ-2' ಚಿತ್ರದ್ದು ಅಂತ ಹೇಳಲಾಗಿರುವ 'ಭಂಗಿ ಎಳ್ಕೊಂಡು ನಗ್ತಾ ಇರು' ಅನ್ನುವ ಹಾಡು ಯೂಟ್ಯೂಬ್ ನಲ್ಲಿ ವೈರಲ್ ಆಗುತ್ತಿದೆ. Troll Haiklu ಅಪ್ ಲೋಡ್ ಮಾಡಿರುವ ಈ ಹಾಡು ಉಪ್ಪಿ ಅಭಿಮಾನಿಗಳನ್ನ ಅಟ್ರ್ಯಾಕ್ಟ್ ಮಾಡುತ್ತಿದೆ.


ಇದು 'ಉಪ್ಪಿ-2' ಚಿತ್ರದ್ದೇನಾ?

'ಉಪ್ಪಿ-2' ಚಿತ್ರಕ್ಕೆ ಅಭಿಮಾನಿಗಳಿಂದ ಸಿಗುತ್ತಿರುವ ಭರ್ಜರಿ ರೆಸ್ಪಾನ್ಸ್ ನೋಡಿದ್ರೆ, ಇದು ಮತ್ತದೇ ರಿಯಲ್ ಸ್ಟಾರ್ ಫ್ಯಾನ್ಸ್ ಸೃಷ್ಟಿಸಿರುವ ಹಾಡು ಅಂತ ಅನುಮಾನ ಮೂಡುವುದು ಸಹಜ.


'ಉಪ್ಪಿ-2' ಅಡ್ಡದಿಂದ ಲೀಕ್ ಆಗೋಕೆ ಸಾಧ್ಯವಿಲ್ಲ!

ಪ್ರಮೋಷನ್ ಪ್ಲಾನ್ ನಲ್ಲಿ ಎಲ್ಲರಿಗಿಂತ ರಿಯಲ್ ಸ್ಟಾರ್ ಉಪೇಂದ್ರ ಒಂದು ಹೆಜ್ಜೆ ಮುಂದು ಮತ್ತು ತುಂಬಾನೇ ಡಿಫರೆಂಟು. 'ಉಪ್ಪಿ-2' ಮುಹೂರ್ತದ ಇನ್ವಿಟೇಷನ್ ಕಾರ್ಡ್ ನಲ್ಲಿ ಕನ್ನಡಿ ಇಟ್ಟು ಎಲ್ಲರಿಗೂ ಆಹ್ವಾನ ನೀಡಿದ್ದ ಉಪ್ಪಿ, ಆಡಿಯೋ ರಿಲೀಸ್ ಗೆ ಖಾಲಿ ಪೋಸ್ಟರ್ ಬಿಟ್ಟಿದ್ದಾರೆ. ಹೀಗೆ, ಎಲ್ಲರ ತಲೆಗೂ ಹುಳ ಬಿಡುತ್ತಿರುವ ಉಪ್ಪಿ, ಹಾಡನ್ನ ಲೀಕ್ ಮಾಡುವುದಕ್ಕೆ ಬಿಡ್ತಾರಾ?


'ಉಪ್ಪಿ-2' ಗುರುತೇ ಸಿಕ್ಕಿಲ್ಲ.!

'ಉಪ್ಪಿ-2' ಚಿತ್ರದ ಅಫೀಶಿಯಲ್ ಪೋಸ್ಟರ್ ಮತ್ತು ವರ್ಕಿಂಗ್ ಸ್ಟಿಲ್ಸ್ ಗಿಂತ ಹೆಚ್ಚಾಗಿ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ಪೋಸ್ಟರ್ ಗಳೇ ಹೆಚ್ಚು ಜನಪ್ರಿಯವಾಗಿವೆ. ಅದೇ ರೀತಿ ಈ ಹಾಡು ಕೂಡ 'ಅಭಿಮಾನಿಗಳ ಪರಾಕಾಷ್ಟೆ' ಅಂತಷ್ಟೆ ಭಾವಿಸಬೇಕೇನೋ? [ಕೃತಿಚೌರ್ಯ ಆರೋಪಿಸಿದವರನ್ನು ಉಪ್ಪಿ ಬೆಂಡೆತ್ತಿದ್ದು ಹೀಗೆ]


ಗುರುಕಿರಣ್ ಸಂಗೀತ

'ಉಪ್ಪಿ-2' ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. 'ಉಪೇಂದ್ರ' ಚಿತ್ರದಲ್ಲಿ ಇದೇ ಗುರುಕಿರಣ್ ಮತ್ತು ಉಪ್ಪಿ ಕಾಂಬಿನೇಷನ್ ಕ್ಲಿಕ್ ಆಗಿತ್ತು. ಈಗ ಮತ್ತೆ ಇದೇ ಜೋಡಿ ಮ್ಯಾಜಿಕ್ ಮಾಡುತ್ತೆ ಅನ್ನೋ ನಂಬಿಕೆ ಅಭಿಮಾನಿಗಳದ್ದು. [ರಿಯಲ್ ಸ್ಟಾರ್ ಉಪೇಂದ್ರರ 'ಉಪ್ಪಿ 2' ರಿಲೀಸ್ ಡೇ ಘೋಷಣೆ]


ಸಾಂಗ್ಸ್ ಸ್ಪೆಷಾಲಿಟಿ

ಅಮೇರಿಕದ ಖ್ಯಾತ ರ್ಯಾಪ್ ಆರ್ಟಿಸ್ಟ್ ಎರಾಡ್ 'ಉಪ್ಪಿ-2' ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ 'ಉಪ್ಪಿ-2' ಚಿತ್ರದಲ್ಲಿ ಗಾನಸುಧೆ ಹರಿಸಿರುವುದು ಸ್ಪೆಷಲ್. ಹಲವು ವಿಶೇಷತೆಗಳಿರುವ 'ಉಪ್ಪಿ-2' ಆಡಿಯೋ ಇನ್ನೆರಡು ದಿನಗಳಲ್ಲಿ ನಿಮ್ಮ ಮುಂದೆ.


English summary
Kannada Actor Upendra directorial 'Uppi-2' Audio release in scheduled on July 17th. Meanwhile, A song from 'Uppi-2' is said to have been leaked in YouTube. Is it a Official song from 'Uppi-2'? is just a question as of now.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X