»   » ಸಿಂಪಲ್ಲಾಗ್ ಮ್ಯೂಸಿಕ್ ಕೊಟ್ಟ ಭರತ್ ಗೆ ಕಾಮಿನಿ ಕಾಟ

ಸಿಂಪಲ್ಲಾಗ್ ಮ್ಯೂಸಿಕ್ ಕೊಟ್ಟ ಭರತ್ ಗೆ ಕಾಮಿನಿ ಕಾಟ

By: ಜೀವನರಸಿಕ
Subscribe to Filmibeat Kannada

ಇದು 'ಕಾಮಿನಿ' ಕಾಟದ ಕಥೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರಕ್ಕೆ ಸಂಗೀತ ಕೊಟ್ಟ ಬಿ.ಜೆ ಭರತ್ ಈಗ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. ಎರಡು ವಾರದ ಹಿಂದೆ ರಿಲೀಸಾದ 'ಕಾಮಿನಿ' ಚಿತ್ರದಲ್ಲಿ ಬಿ.ಜೆ ಭರತ್ ಸಂಗೀತ ನೀಡಿದ್ದ ಮೂರು ಹಾಡುಗಳನ್ನ ಯಥಾವತ್ತಾಗಿ ಬಳಸಿಕೊಂಡಿದ್ದಾರೆ.

ಆದರೆ ಬಳಸಿಕೊಳ್ಳೋ ಮೊದಲು ನಿರ್ದೇಶಕರು, ನಿರ್ಮಾಪಕರು ಅಥವಾ ಚಿತ್ರತಂಡದ ಯಾರೂ ಕೂಡ ಸಂಗಿತ ನಿರ್ದೇಶಕರಿಗೆ ತಿಳಿಸಿಲ್ಲ. 'ಕಾಮಿನಿ' ಚಿತ್ರ ರಿಲೀಸಾಗಿ ವಾರ ಕಳೆದಿದೆ. ಈಗಲಾದ್ರೂ ಏನಾದ್ರೂ ಉತ್ತರ ಕೊಡ್ತಾರಾ ಅಂದ್ರೆ ಆ ಕಡೆಯಿಂದ ಯಾವ ಪ್ರತಿಕ್ರಿಯೆಯೂ ಇರಲಿಲ್ಲ. [ಸಿಂಪಲ್ಲಾಗ್ ಚಿತ್ರವಿಮರ್ಶೆ]


ಸಿಕ್ಕ ಮೂರು ಹಾಡುಗಳನ್ನ ನೀಟಾಗಿ ಬಳಸಿಕೊಂಡ ಚಿತ್ರತಂಡ ಕೊನೆಗೆ ಫಿಲಂ ಚೇಂಬರ್ ನ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಸದ್ಯ ಚಿತ್ರತಂಡದವರ ಕೈಯ್ಯಲ್ಲಿ ಹಣವಿಲ್ಲವಂತೆ. ಅದಕ್ಕೆ ಅಡಿಯೋ ರೈಟ್ಸ್ ನ ಸಂಗೀತ ನಿರ್ದೇಶಕರಿಗೆ ಕೊಟ್ಟಿರೋ ಚಿತ್ರತಂಡ ಸೈಲೆಂಟಾಗೇ ಕ್ಷಮೆ ಕೇಳಿದೆ.

ಒಟ್ಟಾರೆ ಆಗಾಗ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡೋ ಇಂತಹಾ ವಿವಾದಗಳು ಮಾಧ್ಯಮಗಳಿಗೆ ಬಂದು ಪ್ರಚಾರ ಪಡ್ಕೊಳ್ತವೆ, ಆದ್ರೆ ಇದು ಸಿಂಪಲ್ಲಾಗಿ ಪರಿಹಾರವಾಗಿದ್ದು ಸದ್ಯ 'ಕಾಮಿನಿ' ಕಾಟದಿಂದ ದೂರವಾದ ಖುಷಿಯಲ್ಲಿದ್ದಾರೆ ಸಂಗೀತ ನಿರ್ದೇಶಕ ಬಿ.ಜೆ ಭರತ್.

English summary
Music director BJ Bharath, who scores music for the film Simple aag ondh love story (SOLS) alleges that, tunes from SOLS cleaverly lifts in recently released Kannada movie Kaamini.
Please Wait while comments are loading...