For Quick Alerts
  ALLOW NOTIFICATIONS  
  For Daily Alerts

  'ಡಬಲ್ ಹಾರನ್' ಮಾಡಿದ ಬಿರಾದರ್ ಮಸ್ತ್ ಸಾಂಗ್‌ಗೆ 10 ಲಕ್ಷ ವೀವ್ಸ್

  |

  ವೈಜನಾಥ ಬಿರಾದರ್ ಅನ್ನೋದಕ್ಕಿಂತ ಬಿರಾದರ್ ಅಂತಲೇ ಜನಪ್ರಿಯ. ಹಾಸ್ಯ ಪಾತ್ರಗಳಿಂದಲೇ ಪ್ರೇಕ್ಷಕರನ್ನು ಸೆಳೆದಿರುವ ಬಿರಾದರ್ ಈಗ ಕಮರ್ಷಿಯಲ್ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ '90 ಹೊಡಿ ಮನೀಗ್ ನಡಿ'.

  ಎಪ್ಪತ್ತರ ವಯಸ್ಸಲ್ಲಿ ಬಿರಾದರ್ ಕಮರ್ಷಿಯಲ್ ಹೀರೊ ಆಗಿ ಕಾಣಿಸಿಕೊಳ್ಳಲಿದ್ದಾರೆ. '90 ಬಿಡಿ ಮನೀಗ್ ನಡಿ' ಬಿರಾದರ್ ಅಭಿನಯದ 500ನೇ ಸಿನಿಮಾ ಕೂಡ ಹೌದು. ಈ ಸಿನಿಮಾದ ಹಾಡೊಂದು ಈಗ ಸ್ಯಾಂಡಲ್‌ವುಡ್‌ನಲ್ಲಿ ಬೇಜಾನ್ ಸದ್ದು ಮಾಡಿದೆ.

  ಖ್ಯಾತ ಗಾಯಕ ಬಕಿಯಾ ನಿಧನ: ರೆಹಮಾನ್ ಸೇರಿ ಹಲವರ ಸಂತಾಪಖ್ಯಾತ ಗಾಯಕ ಬಕಿಯಾ ನಿಧನ: ರೆಹಮಾನ್ ಸೇರಿ ಹಲವರ ಸಂತಾಪ

  'ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..' ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡು ಬೇಜಾನ್ ಸದ್ದು ಮಾಡಿದೆ. 'ಪಕ್ಕಾ ಜವಾರಿ' ಶೈಲಿಯ ಹಾಡೊಂದು ಸಖತ್ ಸೌಂಡು ಮಾಡುತ್ತಿದೆ.

  ಹಿರಿಯ ಹಾಸ್ಯ ನಟ ವೈಜನಾಥ ಬಿರಾದಾರ್ ಅಭಿನಯದ ಇದೇ ಹಾಡು ಇದೀಗ ಹತ್ತು ಲಕ್ಷ ವೀವ್ಸ್ ಪಡೆದುಕೊಂಡು ವೈರಲ್ ಆಗಿದೆ. ತನ್ನ ಎಪ್ಪತ್ತರ ಇಳಿ ವಯಸ್ಸಲ್ಲೂ ಇಪ್ಪತ್ತರ ಯುವಕನಂತೆ ಸ್ಟೆಪ್ ಹಾಕಿ ಜನಮನ ಗೆದ್ದಿದ್ದಾರೆ. ಬಿರಾದಾರ್ ಎನರ್ಜಿ ಕಂಡು ಅವರ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ.

  ಕನ್ನಡಿಗರು 'ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..' ಹಾಡಿಗೆ ಫುಲ್ ಫಿದಾ ಅವರೂ ಬೇಜಾನ್ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲಿಗೆ ಉತ್ತರ ಕರ್ನಾಟಕ ಶೈಲಿಯ ಹಾಡಿಗೆ ಕರ್ನಾಟಕವೇ ಗ್ರೀನ್ ಸಿಗ್ನಲ್ ಕೊಟ್ಟಿದೆ.

  ಶಿವನ ಸ್ತುತಿಸಿದ 'ಮಂಗ್ಲಿ': 'ರಾಬರ್ಟ್' ಗಾಯಕಿ ಮೊದಲ ಕನ್ನಡ ಆಲ್ಬಮ್ ಸಾಂಗ್ ರಿಲೀಸ್ಶಿವನ ಸ್ತುತಿಸಿದ 'ಮಂಗ್ಲಿ': 'ರಾಬರ್ಟ್' ಗಾಯಕಿ ಮೊದಲ ಕನ್ನಡ ಆಲ್ಬಮ್ ಸಾಂಗ್ ರಿಲೀಸ್

  ಅಮ್ಮ ಟಾಕೀಸ್ ಬಾಗಲಕೋಟೆ ಸಂಸ್ಥೆಯ ರತ್ನಮಾಲಾ ಬಾದರದಿನ್ನಿ '90 ಬಿಡಿ ಮನೀಗ್ ನಡಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಎಂಬ ನಿರ್ದೇಶಕರು ಜಂಟಿಯಾಗಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

  Kannada Comedy Actor Vaijanath Biradar 500th Movie 90 hodi manege nadi New Song

  ಶಿವು ಭೇರ್ಗಿ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಈ ಜವಾರಿ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣವಿದೆ. ಈ ಹಾಡು ಸೊಗಸಾಗಿ ಮೂಡಿ ಬಂದಿದ್ದು, ಹಾಡಿನಲ್ಲಿ ಬಿರಾದಾರ್ ಜೊತೆ ನೀತಾ ಮೈಂರ್ಗಿ ಎಂಬ ರಂಗಭೂಮಿ ಕಲಾವಿದೆ ಮೈ ಬಳುಕಿಸಿದ್ದಾರೆ. ಸದ್ಯ 10 ಲಕ್ಷ ವೀವ್ಸ್ ಗಳಿಸಿದ ಹಾಡು ಹಿಟ್ ಆದ ಖುಷಿಯಲ್ಲಿ ಚಿತ್ರತಂಡವಿದೆ. ಸದ್ಯ ನೈಂಟಿ ತಂಡ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದೇ ತಿಂಗಳು ರಿಲೀಸ್ ಆಗುತ್ತಿದೆ.

  English summary
  Kannada Comedy Actor Vaijanath Biradar 500th Movie 90 hodi manege nadi New Song, Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X