For Quick Alerts
  ALLOW NOTIFICATIONS  
  For Daily Alerts

  ಧ್ವನಿಸುರುಳಿ ವಿಮರ್ಶೆ - ಶಿವಣ್ಣ ಅಭಿನಯದ "ಶಿವ"

  By *ಬಾಲರಾಜ್ ತಂತ್ರಿ
  |

  ಬ್ಯಾನರ್: ಆರ್ ಎಸ್ ಪ್ರೊಡಕ್ಷನ್
  ನಿರ್ಮಾಪಕರು: ಶ್ರೀಕಾಂತ್ ಕೆ.ಪಿ, ಕಾಂತರಾಜ್
  ನಿರ್ದೇಶನ: ಎನ್ ಓಂ ಪ್ರಕಾಶ್ ರಾವ್
  ಸಂಗೀತ: ಗುರುಕಿರಣ್

  1. ನೀ ಓಡಿಬಂದಾಗ
  ಹಾಡಿರುವವರು: ಬಾಬಾ ಸೇಗಲ್, ಚೈತ್ರಾ
  ಸಾಹಿತ್ಯ: ಯೋಗರಾಜ್ ಭಟ್

  ಸ್ಲೋ ಪಿಚ್ ನಲ್ಲಿ ಸಾಗುತ್ತಾ ಫಾಸ್ಟ್ ಬೀಟ್ ನಲ್ಲಿ ಸಾಗುವ ಡುಯೆಟ್ ಹಾಡು. ಪಡ್ಡೆ ಹೈಕ್ಳು ಮೆಚ್ಚುವಂತ ಸಾಹಿತ್ಯವಿದೆ. ಉ.ದಾ. ನೀ ಅಪ್ಪಿಕೊಂಡಾಗ ಈ ಮೆದುಳಲಿ, ತುಂಬಾ ಪ್ರೀತಿಸೋದು ಬೋರು, ಪೆಟ್ರೋಲ್ ಟ್ಯಾಂಕ್ ನಲ್ಲಿ ನೀ ಉಲ್ಟಾ ಕೂತ್ಕೊಂಡು. ಆದರೆ ಹಾಡಿನ ಟ್ಯೂನ್ ಅಷ್ಟಕಷ್ಟೇ.

  2. ಅಪ್ಪು.. ಅಪ್ಪು ಅನ್ನುತ್ತಾನೆ, ಪಪ್ಪಿ ಕೇಳುತ್ತಾನೆ
  ಹಾಡಿರುವವರು: ಮಮತಾ ಶರ್ಮಾ
  ಸಾಹಿತ್ಯ: ಗುರುಕಿರಣ್

  ಚಿತ್ರದ ಐಟಂ ಸಾಂಗ್. ಕೋರಸ್ ನೊಂದಿಗೆ ಫಾಸ್ಟ್ ಬೀಟ್ ನಲ್ಲಿ ಸಾಗುವ ಹಾಡಿನ ಟ್ಯೂನ್ ಮತ್ತು ಸಾಹಿತ್ಯ ಎರಡೂ ಕ್ಯಾಚಿಯಾಗಿದ್ದು. ಪ್ರಸಕ್ತ ಸಿನಿಮಾ ವಿದ್ಯಮಾನ ಇಟ್ಟುಕೊಂಡು ಗುರುಕಿರಣ್ ಉತ್ತಮವಾದ ಸಾಹಿತ್ಯ ನೀಡಿದ್ದಾರೆ. ಜೀ ಟೀವಿ ಸ್ವಯಂವರ, ಡರ್ಟಿ ಪಿಚ್ಚರ್ ಮೊದಲೇ ನನ್ನನ್ನೇ ಕೇಳಿದ್ದು, ರಮ್ಯಾ ಡೇಟ್ ಇಲ್ಲಾಂದ್ರು . ನಾನೆ ಹಿರೋಯಿನ್ ಮುಂದಿನ ಫಿಲಂಗೆ, ಕಿಚ್ಚ ನೋಡಿ ಹುಚ್ಚನಾದಲ್ಲೂ, ಮಾಜಿ ಸಿಎಂ ಬಂದ್ರಲ್ಲೋ.. ಈ ರೀತಿ ವಿಭಿನ್ನ ರೀತಿಯಲ್ಲಿ ಸಾಹಿತ್ಯವಿರುವ ಹಾಡು.

  3. ಶಿವ ಶಿವ.. ವಾರೆವ ಶಿವ
  ಹಾಡಿರುವವರು: ಗುರುಕಿರಣ್
  ಸಾಹಿತ್ಯ: ಯೋಗರಾಜ್ ಭಟ್

  ಚಿತ್ರದಲ್ಲಿ ನಾಯಕನ ಇಂಟ್ರಡಕ್ಷನ್ ಸಾಂಗ್. ಮಾಸ್ ಗಳಿಗಾಗಿ ಮೀಸಲಿಡ ಬಹುದಾದ ಹಾಡು. ನಾನು ಜೀರೋ ಬ್ಯಾಂಕ್ ಬ್ಯಾಲನ್ಸ್, ಹಳೆ ಲಾಂಗ್ ಜೀನ್ಸ್ ಎಲ್ಲಾ ತೂತು ಕಣ್ರೀ.. ನಾಯಕನ ಗುಣಗಾನ ಮಾಡುವ ಸಾಹಿತ್ಯವಿರುವ ಈ ಹಾಡು ಮತ್ತು ಸಾಹಿತ್ಯದ ಬಗ್ಗೆ ಅಂತ ಮೆಚ್ಚು ಕೊಳ್ಳುವಂತದ್ದು ಏನೂ ಇಲ್ಲ.

  4. ಊಸರವಳ್ಳಿ
  ಹಾಡಿರುವವರು: ವಿಜಯ್ ಪ್ರಕಾಶ್, ಐಶ್ವರ್ಯ
  ಸಾಹಿತ್ಯ: ಕವಿರಾಜ್

  ಆಲ್ಬಮ್ ನಲ್ಲಿರುವ ಮತ್ತೊಂದು ಡುಯೆಟ್ ಹಾಡು. ಚೆನ್ನಾಗಿ ಕಂಪೋಸ್ ಮಾಡಿರುವ ಹಾಡು. ಹಾಡಿನ ಮಧ್ಯೆ ಕೋರಸ್ ಬಳಸಿಕೊಂಡಿದ್ದು ಚೆನ್ನಾಗಿದ್ದು ಕೆಲವೊಂದು ಕಡೆ ಸಾಹಿತ್ಯ ಕೇಳದಷ್ಟು ಸಂಗೀತ ಅಬ್ಬರವಾಗಿದೆ. ಆದರೂ ಓಕೆ

  5. ಕೊಳ್ಳೆಗಾಲದಲ್ಲಿ
  ಹಾಡಿರುವವರು: ಪಿಚ್ಚಹಳ್ಳಿ ಶ್ರೀನಿವಾಸ್, ಮಾಲ್ಗುಡಿ ಶುಭಾ
  ಸಾಹಿತ್ಯ: ಮಹೇಶ್ ದೇವ್ ಶೆಟ್ಟಿ

  ಈ ಟ್ಯೂನ್ ಅನ್ನು ಈ ಹಿಂದೆ ಕನ್ನಡದಲ್ಲಿ ಬಳಸಿಕೊಳ್ಳಲಾಗಿದೆ. ಮೊದಲಸಾಲಿನಲ್ಲಿ ಯಥಾವತ್ತಾಗಿ ಬಟ್ಟಿ ಇಳಿಸಿಕೊಳ್ಳಲಾಗಿದೆ. ಜಾನಪದ ಶೈಲಿಯಲ್ಲಿನ ಸಾಹಿತ್ಯವಿರುವ ಹಾಡು ಸುಮಾರಾಗಿದೆ.

  ಐದು ಹಾಡುಗಳ ಪೈಕಿ ಎರಡು ಹಾಡು ಚೆನ್ನಾಗಿದ್ದು, ಅಲ್ಬಮ್ ಬಗ್ಗೆ ಒಟ್ಟಾರೆ ಮಾರ್ಕ್ಸ್ ಕೊಡಬಹುದಾದರೆ 10 ರಲ್ಲಿ ಐದೂವರೆ ಕೊಡಬಹುದೇನೋ ....

  English summary
  Shivaraj Kumar starrer much awaited movie Shiva music review. Album has five songs and two songs are catchy. Gurukiran has composed the music and movie directed by Om Prakash Rao

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X