For Quick Alerts
  ALLOW NOTIFICATIONS  
  For Daily Alerts

  ಲತಾ ಮಂಗೇಷ್ಕರ್ ಜೊತೆ ಹಜಾರಿಕಾಗೆ ಅಫೇರ್!

  By Rajendra
  |

  ಸಂಗೀತ ಲೋಕದ ಜೀವಂತ ದಂತಕಥೆ ಲತಾ ಮಂಗೇಷ್ಕರ್ ಅವರ ಮೇಲೆ ಇದೇ ಮೊದಲ ಬಾರಿಗೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಅಸ್ಸಾಮಿ ಮೂಲದ ಖ್ಯಾತ ಕವಿ, ದಾದಾ ಸಾಹೇಬ್‌ ಫಾಲ್ಕೆ ಪುರಸ್ಕೃತ ದಿವಂಗತ ಭೂಪೇನ್ ಹಜಾರಿಕಾ ಹಾಗೂ ಲತಾ ಮಂಗೇಷ್ಕರ್ ನಡುವೆ ಪ್ರಣಯ ಸಂಬಂಧವಿತ್ತು ಎಂದು ಸ್ವತಃ ಹಜಾರಿಕಾ ಅವರ ಮಾಜಿ ಪತ್ನಿ ಪ್ರಿಯಂವದಾ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

  ಅಸ್ಸಾಮಿ ಟಿವಿ ಚಾನಲ್ ಡಿವೈ 365 ನೀಡಿರುವ ಸಂದರ್ಶನದಲ್ಲಿ ಪ್ರಿಯಂವದಾ ಅವರು ಮಾತನಾಡುತ್ತಾ, "ತನ್ನ ಮಾಜಿ ಪತಿ ಭೂಪೇನ್ ಹಜಾರಿಕಾ ಜೊತೆ ಲತಾ ಮಂಗೇಷ್ಕರ್ ಅವರಿಗೆ ಸಂಬಂಧವಿತ್ತು" ಎಂದಿದ್ದಾರೆ. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧದ ಕಾರಣದಿಂದಾಗಿಯೇ ತಾನು ಅವರಿಂದ ದೂರಾದೆ ಎಂದಿದ್ದಾರೆ.

  ಐವತ್ತು ವರ್ಷಗ ಹಿಂದೆ ಭೂಪೇನ್ ಅವರಿಂದ ತಾವು ದೂರವಾದ ಸಂದರ್ಭವನ್ನು ನೆನಸಿಕೊಳ್ಳುತ್ತಾ ಅವರು ಈ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ. ಭೂಪೇನ್ ನಿಧನರಾಗಿ ನ.5ಕ್ಕೆ ಒಂದು ವರ್ಷ ಕಳೆಯುತ್ತಿರುವ ಸಂದರ್ಭದ ನಿಮಿತ್ತ ಟಿವಿ ವಾಹಿನಿ ಈ ವಿಶೇಷ ಸಂದರ್ಶನವನ್ನು ಆಯೋಜಿಸಿತ್ತು.

  ಸಂದರ್ಶನದಲ್ಲಿ ಪ್ರಿಯಂವದಾ ಅವರು ಮಾತನಾಡುತಾ, "ಲತಾ ಅವರು ಕೋಲ್ಕತ್ತಾಗೆ ಬಂದಾಗ ಟಾಲಿಗಂಜ್ ನಲ್ಲಿರುವ ಭೂಪೇನ್ ಹಜಾರಿಕಾ ಅವರಿಗೆ ಸೇರಿದ ಮೂರು ಬೆಡ್ ರೂಂ ಫ್ಲಾಟ್ ನಲ್ಲಿ ಉಳಿದುಕೊಳ್ಳುತ್ತಿದ್ದರು. ಒಂದು ಬೆಡ್ ರೂಮಿನಲ್ಲಿ ಹಜಾರಿಕಾ ರಾತ್ರಿಯಲ್ಲಾ ಲತಾ ಜೊತೆಗೇ ಇರುತ್ತಿದ್ದರು ಎಂದಿದ್ದಾರೆ.

  ಒಮ್ಮೆ ಈ ಬಗ್ಗೆ ತಮ್ಮ ಪತಿಯನ್ನು ಪ್ರಶ್ನಿಸಲಾಗಿ, ಕೆಲವೊಮ್ಮೆ ಹೀಗೆ ಮಾಡಬೇಕಾಗುತ್ತದೆ ಎಂದು ಹೇಳುತ್ತಿದ್ದರು ತನ್ನ ಬಾಯಿ ಮುಚ್ಚಿಸಿದ್ದರು. ಭಾರತದಲ್ಲಿ ಸಂಗೀತಗಾರರು ಬೆಳೆಯಬೇಕಾದರೆ ಅವರ ಹಾಡುಗಳನ್ನು ಲತಾ ಅವರಿಂದಲೇ ಹಾಡಿಸಬೇಕಾಗುತ್ತದೆ ಎಂದೂ ಹೇಳುತ್ತಿದ್ದರು...

  ಲತಾ ಅವರು ನಮ್ಮ ಮನೆಗೆ ಬಂದಾಗಲೆಲ್ಲಾ ಹಜಾರಿಕಾ ಜೊತೆ ಒಂದೇ ರೂಮಿನಲ್ಲಿ ಸೇರಿಕೊಂಡು ರಾತ್ರಿಯಲ್ಲಾ ಕಳೆಯುತ್ತಿದ್ದರು. ಈ ಕಾರಣಕ್ಕೆ ನಾನು ಅವರೊಂದಿಗಿನ 13 ವರ್ಷಗಳ ವೈವಾಹಿಕ ಜೀವನಕ್ಕೆ ಕೊನೆ ಹೇಳಿದೆ ಎಂದಿದ್ದಾರೆ.

  ಭಾರತ ಸರ್ಕಾರದಿಂದ ಹಲವು ಅತ್ಯುನ್ನತ ಪ್ರಶಸ್ತಿ, ಪುರಸ್ಕಾರಗಳನ್ನು ಲತಾ ಮಂಗೇಷ್ಕರ್ (83) ಭಾಜನರಾಗಿದ್ದಾರೆ. ಈ ವಯಸ್ಸಲ್ಲಿ ಅವರ ಮೇಲೆ ಈ ರೀತಿಯ ಗಂಭೀರ ಆರೋಪಗಳು ಕೇಳಿಬಂದಿರುವುದು ಆಕೆಯ ಅಭಿಮಾನಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.

  ಇನ್ನೊಂದು ಕಡೆ ಪ್ರಿಯಂವದಾ ಅವರ ಆರೋಪಗಳ ಬಗ್ಗೆ ಗರಂ ಆಗಿರುವ ಲತಾ ಮಂಗೇಷ್ಕರ್ ಕುಟುಂಬಿಕರು ಆಕೆಯ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ದಾರೆ. (ಏಜೆನ್ಸೀಸ್)

  English summary
  In an interview with an Assamese TV channel, late singer-composer Bhupen Hazarika estranged wife Priyamvada has claimed that Lata Mangeshkar "started a big affair with him".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X