»   » ಸಖತ್ ಸೌಂಡ್ ಮಾಡುತ್ತಿವೆ ಟಾಕಿಂಗ್ ಸ್ಟಾರ್ ಸೃಜನ್ 'ಹ್ಯಾಪಿ ಜರ್ನಿ' ಹಾಡುಗಳು

ಸಖತ್ ಸೌಂಡ್ ಮಾಡುತ್ತಿವೆ ಟಾಕಿಂಗ್ ಸ್ಟಾರ್ ಸೃಜನ್ 'ಹ್ಯಾಪಿ ಜರ್ನಿ' ಹಾಡುಗಳು

Posted By:
Subscribe to Filmibeat Kannada

ಟಾಕಿಂಗ್ ಸ್ಟಾರ್ ಸೃಜನ್ ಲೊಕೇಶ್ ಕಿರುತೆರೆ ಮಾತ್ರವಲ್ಲದೇ ಸದಾ ಬೆಳ್ಳಿತೆರೆಯಲ್ಲಿ ಸಿನಿಮಾದಲ್ಲಿ ನಟಿಸುವುದರಲ್ಲಿಯೂ ಬ್ಯುಸಿ ಆಗಿರುತ್ತಾರೆ. ಸೃಜನ್ ಲೋಕೇಶ್ ರವರು ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ನಂತರ ಅವರು ಅಭಿನಯಿಸಿರುವ 'ಹ್ಯಾಪಿ ಜರ್ನಿ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಅಂದಹಾಗೆ 'ಹ್ಯಾಪಿ ಜರ್ನಿ' ಚಿತ್ರದಲ್ಲಿ 6 ಹಾಡುಗಳಿದ್ದು, 'SAI Audio' ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಪಡ್ಡೆ ಹುಡುಗರಿಗೆ ಇಷ್ಟವಾಗುವ ಟಪಾಂಗುಚಿ ಹಾಡುಗಳು ಈ ಚಿತ್ರದಲ್ಲಿದ್ದು, ಈಗ ಹಾಡುಗಳು ಸಖತ್ ಸದ್ದು ಮಾಡುತ್ತಿದ್ದು ಯೂಟ್ಯೂಬ್ ಆಡಿಯೋ ಜ್ಯೂಕ್‌ಬಾಕ್ಸ್ ಮೂಲಕ 5 ಸಾವಿರಕ್ಕಿಂತ ಹೆಚ್ಚು ಬಾರಿ ಕೇಳಲಾಗಿದೆ. ವಿಜಯ್ ಪ್ರಕಾಶ್ ಮತ್ತು ಕುಶಲಾ ಖುಷಿ ಹಾಡಿರುವ ಚಿತ್ರದ ಮೊದಲ ಹಾಡು 'ಹವಯಾ.. ಬುಸ್ ಬಸ್..ಹವಯಾ.. ಬುಸ್ ಬುಸ್' ಎಂಬ ಹಾಡು ಪಡ್ಡೆ ಹುಡುಗರಿಗೆ ಹೆಚ್ಚು ಪ್ರಿಯವಾಗಿವೆ. ಅದರ ಜೊತೆಗೆ ರಾಜೇಶ್ ಕೃಷ್ಣನ್ ರವರ ಧ್ವನಿಯಲ್ಲಿನ 'ಹೂಗಳ ರಾಶಿ' ಮತ್ತು 'ಬದುಕು ನಿರಾಸೆ ಮಳೆ' ಎಂಬ ಫೀಲಿಂಗ್ ಹಾಡುಗಳು ಕೇಳಲು ಇಂಪಾಗಿವೆ.

Listen Srujan Lokesh Starrer 'Happy Journey' Movie songs

'ಹ್ಯಾಪಿ ಜರ್ನಿ' ಚಿತ್ರದಲ್ಲಿನ 5 ಹಾಡುಗಳಿಗೆ ಚಿತ್ರದ ನಿರ್ದೇಶಕ ಶ್ಯಾಮ್ ಶಿವಮೊಗ್ಗ ರವರೇ ಸಾಹಿತ್ಯ ಬರೆದಿದ್ದು, 'ಹುಸಾರ್ ಹುಸಾರ್ ನಿಂಗಿ' ಹಾಡಿಗೆ ಹೃದಯ ಶಿವ ಸಾಹಿತ್ಯ ಬರೆದಿದ್ದಾರೆ. ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಜೊತೆಗೆ ಕುಶಾಲ್ ಖುಷಿ ಮತ್ತು ವೃಂಧ ಹಾಡಿದ್ದಾರೆ. ಎಸ್.ಪಿ.ಚಂದ್ರಕಾಂತ್ ರವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಸೃಜನ್ ಲೋಕೇಶ್ ಗೆ ಜೊತೆಯಾಗಿ ಅಮೀತಾ ಸದಾಶಿವ್ ಕುಲಾಳ್ ಅಭಿನಯಿಸಿದ್ದಾರೆ. ಉಳಿದಂತೆ ಕುರಿ ಪ್ರತಾಪ್, ಪ್ರಿಯಾಂಕಾ ಮಲ್ನಾಡ್, ನವೀನ್ ಡಿ ಪಡಿಲ್, ರಿಯಾ ಮೇಘ್ನ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ.

ಕರಿಷ್ಮಾ ಆರ್ ಶೆಟ್ಟಿ ರವರು ನಿರ್ಮಾಣ ಮಾಡಿರುವ 'ಹ್ಯಾಪಿ ಜರ್ನಿ' ಚಿತ್ರಕ್ಕೆ ಎಂ.ಆರ್.ಸೀನು ರವರು ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರದ ಸೂಪರ್ ಹಿಟ್ ಹಾಡುಗಳನ್ನು ಕೇಳಲು ಕ್ಲಿಕ್ ಮಾಡಿ.

English summary
Listen Srujan Lokesh Starrer 'Happy Journey' Movie songs . The movie has directed by Shyam Shivamogga, features Ameeta Sadashiv Kulal, Kuri Prathap, Priyanka Malnad, Naveen D Padil, Riya Meghna and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada