For Quick Alerts
ALLOW NOTIFICATIONS  
For Daily Alerts

  ಮಹೇಶ್ ಬಾಬು ಫಿಲಂ ಸಮಂತಾ-ಸಿದ್ದಾರ್ಥ್ ಟ್ವೀಟ್ ವಾರ್

  By ಜೇಮ್ಸ್ ಮಾರ್ಟಿನ್
  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಅಭಿಮಾನಿಗಳು ಮಾಡಿದ ಟ್ರಿಕ್ ವರ್ಕ್ ಔಟ್ ಆಗಿದೆ. ಮಹೇಶ್ ಬಾಬು ಅವರ ಮುಂಬರುವ ಚಿತ್ರ 1:ನೆನೊಕ್ಕಡಿನೇ ಚಿತ್ರದ ಆಡಿಯೋ ವಿಶಿಷ್ಟವಾಗಿ ರಿಲೀಸ್ ಆಗಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕಳೆದ ಎರಡು ಮೂರು ದಿನಗಳಿಂದ ನಟಿ ಸಮಂತಾ ಹಾಗೂ ಸಿದ್ದಾರ್ಥ್ ವಿರುದ್ಧ ಪ್ರಿನ್ಸ್ ಮಹೇಶ್ ಅಭಿಮಾನಿಗಳು ತಿರುಗಿಬಿದ್ದಿದ್ದರು.

  ಒಟ್ಟಾರೆ ಮಹೇಶ್ ಬಾಬು ಅಭಿಮಾನಿಗಳು ಶುರು ಮಾಡಿದ ಹೊಸ ಮಾರ್ಕೆಟಿಂಗ್ ತಂತ್ರಗಾರಿಕೆನತ್ತ ಟಾಲಿವುಡ್ ಬೆರಗು ಕಣ್ಣಿಂದ ನೋಡಿದೆ. ಹೈದರಾಬಾದಿನ ಶಿಲ್ಪಕಲಾ ವೇದಿಕೆಯಲ್ಲಿ ಗುರುವಾರ ಸಂಜೆ ನಡೆದ ವರ್ಣರಂಜಿತ ಸಮಾರಂಭ ವಿಶಿಷ್ಟವಾಗಿತ್ತು. ಚಿತ್ರರಂಗದ ಗಣ್ಯರ ಜತೆಗೆ ಐವರು ಲಕ್ಕಿ ಅಭಿಮಾನಿಗಳು ಆಡಿಯೋ ರಿಲೀಸ್ ನಲ್ಲಿ ಭಾಗವಹಿಸಿದ್ದರು. ಆ ಐವರ ಊರು ಗಳಲ್ಲಿ ನೇರವಾಗಿ ಹಾಡುಗಳನ್ನು ಪ್ರಸಾರ ಮಾಡಲಾಯಿತು.

  ಅಲ್ಲದೆ, ಏಕಕಾಲಕ್ಕೆ ರಾಜ್ಯದ 23 ಚಿತ್ರಮಂದಿರಗಳಲ್ಲಿ ಕಾರ್ಯಕ್ರಮ ಲೈವ್ ಆಗಿ ಪ್ರಸಾರವಾಯಿತು. ಅಭಿಮಾನಿಗಳು 150 ರು ತೆತ್ತು ಸಮಾರಂಭಕ್ಕೆ ಬಂದಿದ್ದು ವಿಶೇಷ. ನೆನೊಕ್ಕಡಿನೇ ಚಿತ್ರಕ್ಕೆ ಐದು ಸೊಗಸಾದ ಹಾಡುಗಳನ್ನು ದೇವಿ ಶ್ರೀ ಪ್ರಸಾದ್ ಹೆಣೆದು ಕೊಟ್ಟಿದ್ದಾರೆ.ಆಡಿಯೋ ರಿಲೀಸ್ ಸಮಾರಂಭದ ಚಿತ್ರಗಳು, ಅಭಿಮಾನಿಗಳು ಮಾಡಿದ ಟ್ವೀಟ್ ವಾರ್ ಮುಂದೆ ಓದಿ...

  ಲಹರಿ ಆಡಿಯೋ ಕೈಗೆ ಆಲ್ಬಂ

  ಹೈದರಾಬಾದಿನಲ್ಲಿ ಆದಿತ್ಯ ಮ್ಯೂಸಿಕ್ ಹಾಗೂ ಇನ್ನಿತರ ಭಾಗಗಳಲ್ಲಿ ಕರ್ನಾಟಕದ ಲಹರಿ ಆಡಿಯೋ ಕೈಗೆ ಮಹೇಶ್ ಬಾಬು ಅವರ ಹೊಸ ಚಿತ್ರ ಆಡಿಯೋ ಆಲ್ಬಂ ಹಕ್ಕುಗಳು ಸಿಕ್ಕಿವೆ. ಲಹರಿ ಸಂಸ್ಥೆ ಸುಮಾರು 1 ಕೋಟಿ ಹಾಗೂ ಆದಿತ್ಯ ಮ್ಯೂಸಿಕ್ 7 ಕೋಟಿ ರು ನೀಡಿ ಹಕ್ಕು ಪಡೆದಿದೆ ಎಂಬ ಸುದ್ದಿಯಿದೆ

  ಮಹೇಶ್ ಮಗನಿಂದ ರಿಲೀಸ್

  ಹೈದರಾಬಾದಿನ ಶಿಲ್ಪಕಲಾವೇದಿಕೆಯಲ್ಲಿ ನಡೆದ ಆಡಿಯೋ ರಿಲೀಸ್ ಸಮಾರಂಭಕ್ಕೆ ಮಹೇಶ್ ಬಾಬು ಅವರ ಅಪ್ಪ ಕೃಷ್ಣ, ಪತ್ನಿ ನಮ್ರತಾ ಸೇರಿದಂತೆ ಪರಿವಾರದವರೆಲ್ಲ ಬಂದಿದ್ದರು. ಮಹೇಶ್ ಬಾಬು ಅವರ ಮಗ ಆಡಿಯೋ ರಿಲೀಸ್ ಮಾಡಿದರು.

  ಟ್ವೀಟ್ ವಾರ್

  ಕಳೆದ ಎರಡು ಮೂರು ದಿನಗಳಿಂದ ಮಹೇಶ್ ಬಾಬು ಅವರ ಅಭಿಮಾನಿಗಳು #GetLostSamanthaAndSiddharth ಹಾಗೂ #TwitterTerroristSiddarthUncle ಎಂಬ ಎರಡು ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗುವಂತೆ ನೋಡಿಕೊಂಡಿದ್ದರು. ಸಮಂತಾ ಅವರು ಮಾಡಿದ ಯಾವುದೋ ಟ್ವೀಟ್ ಮಹೇಶ್ ಅಭಿಮಾನಿಗಳನ್ನು ಕೆರಳಿಸಿದ್ದೇ ಇದಕ್ಕೆ ಕಾರಣ. ಕಡಿಮೆ ಅವಧಿಯಲ್ಲೇ ಹೆಚ್ಚು ಟ್ವೀಟ್ (ಸುಮಾರು 25 ಕ್ಕೂ ಅಧಿಕ 36 ಗಂಟೆಗಳಲ್ಲಿ) ಗಳನ್ನು ಮಾಡಿರುವ ಅಭಿಮಾನಿಗಳು ಪರೋಕ್ಷವಾಗಿ ಮಹೇಶ್ ಬಾಬು ಫಿಲಂ ಬಗ್ಗೆ ಚರ್ಚೆ ಜಾರಿಯಲ್ಲಿಟ್ಟಿದ್ದರು.

  ಇದೆಲ್ಲ ಬೇಕಿತ್ತಾ

  ಖಂಡಿತ ಬೇಕಿರಲಿಲ್ಲ ಎಂದು ಫಿಲಂ ನಗರದ ಮಂದಿ ಹೇಳುತ್ತಾರೆ. ನಾಲ್ಕು ದಿನಗಳ ಹಿಂದೆ ರಿಲೀಸ್ ಆದ 1:ನೆನೊಕ್ಕಡಿನೇ ಚಿತ್ರದ ಟೀಸಅರ್ ಯೂಟ್ಯೂಬ್ ನಲ್ಲಿ 1,161,960 ವೀಕ್ಷಣೆ ಪಡೆದು ಟ್ರೆಂಡಿಂಗ್ ನಲ್ಲಿದೆ. ಈಗಿರುವ ಈ ರೀತಿ ಪಬ್ಲಿಕ್ ಸ್ಟಂಟ್ ಬೇಕಿರಲಿಲ್ಲ ಎಂದು ಪಂಡಿತರ ಹೇಳಿಕೆ

  ಟ್ವೀಟ್ ಲೆಕ್ಕಾಚಾರ

  ಕಳೆದ 30 ದಿನಗಳಲ್ಲಿ #pawankalyan, #maheshbabu, #samantha ಹಾಗೂ #siddharth ಟ್ಯಾಗ್ ಗಳು ಕ್ರಮವಾಗಿ 4,742, 1,732, 2,898 ಪಡೆದಿವೆ. ಹೀಗಾಗಿ ಪವನ್ ಕಲ್ಯಾಣ್ ಅವರ ಕಳೆದ ಸಿನಿಮಾ ಅಂತಾರಿಂಟಿಕಿ ದಾಖಲೆ ಮುರಿಯಲು ಮಹೇಶ್ ಬಾಬು ಅಭಿಮಾನಿಗಳು ಈ ರೀತಿ ಟ್ರಿಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದ ಆಡಿಯೋ ರಿಲೀಸ್ ಹಾಗೂ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ತನಕ ಚಿತ್ರದ ಬಗ್ಗೆ ಹೆಚ್ಚು ಹೈಪ್ ಸೃಷ್ಟಿಸಲು ಫ್ಯಾನ್ಸ್ ಸಕತ್ ಪ್ಲಾನ್ ಮಾಡಿದ್ದಾರಂತೆ.

  ಅಪ್ಪ ಮಗ ಮೊಮ್ಮಗ

  ಮಹೇಶ್ ಬಾಬು ಹಾಗೂ ಕೃಷ್ಣ ಆಪ್ತ ಸಮಾಲೋಚನೆ ನಡುವೆ ಸುಮ್ಮನೆ ಕುಳಿತ ಮೊಮ್ಮಗ

  ಎರೋಸ್ ಸಂಸ್ಥೆ ಕೈಗೆ

  ಚಿತ್ರದ ಇನ್ನಿತರ ಹಕ್ಕು ಎರೋಸ್ ಇಂಟರ್ ನ್ಯಾಷನಲ್ ಸಂಸ್ಥೆ ಕೈವಶವಾಗಿದೆ. ಸುಮಾರು 72 ಕೋಟಿ ನೀಡಿ ಚಿತ್ರದ ಹಕ್ಕುಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಚಿತ್ರದ ಪ್ರಚಾರ, ಹೈಪ್ ಸೃಷ್ಟಿ ಮಾತ್ರ ಅಭಿಮಾನಿಗಳು ನೋಡಿಕೊಳ್ಳುತ್ತಿದ್ದಾರೆ

  ಹೊಸ ನಾಯಕಿ

  ಮಹೇಶ್ ಬಾಬು ಅವರ ಸಾಹಸ ಭರಿತ ಥ್ರಿಲ್ಲರ್ ಚಿತ್ರಕ್ಕೆ ರೂಪದರ್ಶಿ, ಕಥಕ್ ಡ್ಯಾನ್ಸರ್ ಕೃತಿ ಸನೊನ್ ನಾಯಕಿಯಾಗಿದ್ದಾರೆ. ನಾಯಕಿಯಾಗಿ ಇದು ಕೃತಿ ಮೊದಲ ಚಿತ್ರವಾಗಿದ್ದು, ಬಾಲಿವುಡ್ ನಲ್ಲಿ ಟೈಗರ್ ಶ್ರಾಫ್ ಜತೆ ಮತ್ತೊಂದು ಚಿತ್ರದಲ್ಲಿ ನಟಿಸಿದ್ದಾರೆ.

  ಬಹು ಚರ್ಚಿತ ಪೋಸ್ಟರ್

  ಚಿತ್ರದ ಪೋಸ್ಟರ್, ಟ್ರೇಲರ್, ಟೀಸರ್ ಈಗ ಆಡಿಯೋ ಎಲ್ಲವೂ ಸದ್ದು ಮಾಡುತ್ತಿದೆ. ಅದರಲ್ಲೂ ಎಡಬದಿಯಲ್ಲಿರುವ ಚಿತ್ರ ನಗೆಪಾಟಲಾಗಿದೆ. ಮಹೇಶ್ ಬಾಬು ನೋಡಿ ತನ್ನ ಚಿತ್ರದ ನಾಯಕಿಯನ್ನು ನಾಯಿಯನ್ನು ಕರೆದ ಹಾಗೆ ಕರೆಯುತ್ತಾನೆ ಎಂದು ಹಲವಾರು ಮಂದಿ ಕುಹಕವಾಡಿದ್ದಾರೆ.

  ಸಮಂತಾ ಟ್ವೀಟ್

  ಸಮಂತಾ ಚಿತ್ರದ ಹೆಸರು ಹೇಳದೆ ನೊಂದು ಟ್ವೀಟ್ ಮಾಡಿದ್ದು ಹೀಗೆ

  English summary
  Superstar Mahesh Babu's upcoming film 1: Nenokkadine is one of the most-awaited movies of Telugu. Prince fans were desperately waiting for the release of its audio. The makers have launched the music in an unique way. Mahesh didn;t say a word about his fan's hate comments against actress Samantha and actor Siddharth.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more