»   » ಯೂಟ್ಯೂಬ್ ನಲ್ಲಿ ಟ್ರೆಂಡ್ ಹುಟ್ಟುಹಾಕಿರುವ ಕನ್ನಡ ಹಾಡುಗಳು; ನಂಬರ್ 1 ಯಾವುದು?

ಯೂಟ್ಯೂಬ್ ನಲ್ಲಿ ಟ್ರೆಂಡ್ ಹುಟ್ಟುಹಾಕಿರುವ ಕನ್ನಡ ಹಾಡುಗಳು; ನಂಬರ್ 1 ಯಾವುದು?

Posted By:
Subscribe to Filmibeat Kannada
ಯೂಟ್ಯೂಬ್ ನಲ್ಲಿ ಟ್ರೆಂಡ್ ಹುಟ್ಟುಹಾಕಿರುವ ಕನ್ನಡ ಹಾಡುಗಳು | Filmibeat Kannada

ಕನ್ನಡ ಸಿನಿಮಾ ಹಾಗೂ ಕನ್ನಡ ಸಿನಿಮಾ ಹಾಡುಗಳ ಅಬ್ಬರ ಎಲ್ಲೆಲ್ಲೂ ಜೋರಾಗಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಒಂದಕ್ಕಿಂತ ಮತ್ತೊಂದು ಸೂಪರ್ ಆಗಿರುವ ಹಾಡುಗಳು ಬರ್ತಾನೆ ಇದೆ.

ಒಂದು ಹಾಡು ಟ್ರೆಂಡ್ ಕ್ರಿಯೆಟ್ ಮಾಡಿದ್ರೆ, ಅದರ ದಾಖಲೆ ಅಳಿಸಿಹಾಕಿ ಇನ್ನೊಂದು ಹಾಡು ಹೊಸ ಹವಾ ಎಬ್ಬಿಸುತ್ತಿದೆ. ಅಷ್ಟರ ಮಟ್ಟಿಗೆ ನಮ್ಮ ಸಂಗೀತ ನಿರ್ದೇಶಕರು, ಗೀತ ರಚನಕಾರರು, ಮತ್ತು ಗಾಯಕರು ಕೆಲಸ ಮಾಡುತ್ತಿದ್ದಾರೆ.

ಇದರ ಪರಿಣಾಮ ಯೂಟ್ಯೂಬ್ ನಲ್ಲಿ ಪರಭಾಷೆಯ ಚಿತ್ರಗಳಂತೆ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿದೆ. ಕೋಟಿಗಟ್ಟಲೆ ಅಭಿಮಾನಿಗಳನ್ನ ಹೊಂದಿ ಭಯ ಹುಟ್ಟಿಸುತ್ತಿದೆ. ಸದ್ಯ, ಯೂಟ್ಯೂಬ್ ನಲ್ಲಿ ಕನ್ನಡದ ಯಾವಲ್ಲಾ ಹಾಡುಗಳು ಟಾಪ್ ನಲ್ಲಿದೆ. ಯಾವ ಹಾಡಿಗೆ ಎಷ್ಟು ವೀಕ್ಷಕರಿದ್ದಾರೆ ಎಂಬ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ. ಮುಂದೆ ಓದಿ.....

ಚಾಕಲೋಟ್ ಗರ್ಲ್

Rap ಸಿಂಗರ್ ಚಂದನ್ ಶೆಟ್ಟಿ ಹಾಡಿರುವ ಚಾಕೊಲೆಟ್ ಗರ್ಲ್ ಹಾಡು ಯೂಟ್ಯೂಬ್ ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಸದ್ಯ, 1 ಕೋಟಿ 43 ಲಕ್ಷ ವೀಕ್ಷಕರನ್ನ ಹೊಂದಿರುವ ಈ ಹಾಡು ಕನ್ನಡ ಹಾಡುಗಳ ಪೈಕಿ 10ನೇ ಸ್ಥಾನದಲ್ಲಿದೆ.

ಸಾಲುತಿಲ್ಲವೇ ಸಾಲುತಿಲ್ಲವೇ

ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಅಭಿನಯದ ಕೋಟಿಗೊಬ್ಬ 2 ಚಿತ್ರದ ಹಾಡುಗಳಲ್ಲಿ ಹೆಚ್ಚು ಹಿಟ್ ಆಗಿದ್ದು 'ಸಾಲುತಿಲ್ಲವೇ ಸಾಲುತಿಲ್ಲವೇ' ಹಾಡು. ಈ ಹಾಡು ಯೂಟ್ಯೂಬ್ ನಲ್ಲಿ 1 ಕೋಟಿ 46 ಲಕ್ಷ ಅಭಿಮಾನಿಗಳನ್ನ ಹೊಂದಿದ್ದು, 9ನೇ ಸ್ಥಾನದಲ್ಲಿದೆ. ಡಿ ಇಮ್ಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.

ಅಪ್ಪಾ ಐ ಲವ್ ಯೂ ಪಾ

ದ್ವಾರಕೀಶ್ ಬ್ಯಾನರ್ ನಲ್ಲಿ ಮೂಡಿಬಂದಿದ್ದ 50ನೇ ಸಿನಿಮಾ ಚೌಕ ಸೂಪರ್ ಹಿಟ್ ಸಿನಿಮಾ. ಈ ಚಿತ್ರದ ಹಾಡುಗಳು ಕೂಡ ಅಷ್ಟೇ ಹಿಟ್ ಆಗಿತ್ತು. ಅದರಲ್ಲೂ ಅಪ್ಪಾ ಐ ಲವ್ ಯೂ ಹಾಡಂತೂ ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಬಹುದೊಡ್ಡ ಯಶಸ್ಸು ಕಂಡಿದೆ ಅಂದ್ರೆ ತಪ್ಪಾಗಲಾರದು. ಈ ಹಾಡು ಯೂಟ್ಯೂಬ್ ನಲ್ಲಿ 1 ಕೋಟಿ 77 ಲಕ್ಷಕ್ಕೂ ಅಧಿಕ ವೀಕ್ಷಕರನ್ನ ಹೊಂದಿದೆ. ಅರ್ಜುನ್ ಜನ್ಯ ಸಂಗೀತ ಹಾಗೂ ಅನುರಾಧ ಭಟ್ ಧ್ವನಿಯಲ್ಲಿ ಈ ಹಾಡು ಮೂಡಿಬಂದಿತ್ತು.

ಒಂದು ಮಳೆಬಿಲ್ಲು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೀಪಾ ಸನ್ನಿಧಿ ಅಭಿನಯದ ಚಕ್ರವರ್ತಿಯ ಹಾಡುಗಳು ಗಮನ ಸೆಳೆದಿದ್ದವು. ಈ ಚಿತ್ರದ ಒಂದು ಮಳೆಬಿಲ್ಲು ಹಾಡು ಅತಿ ಹೆಚ್ಚು ಮೋಡಿ ಮಾಡಿತ್ತು. ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದ ಈ ಹಾಡು ಸದ್ಯ ಯೂಟ್ಯೂಬ್ ನಲ್ಲಿ 1 ಕೋಟಿ 81 ಲಕ್ಷ ವೀಕ್ಷಕರನ್ನ ಹೊಂದುವ ಮೂಲಕ ಕನ್ನಡ ಹಾಡುಗಳ ಪೈಕಿ 7ನೇ ಸ್ಥಾನದಲ್ಲಿದೆ.

ಟಕೀಲಾ

Rap ಸಿಂಗರ್ ಚಂದನ್ ಶೆಟ್ಟಿ ಇತ್ತೀಚೆಗಷ್ಟೇ ಹಾಡಿದ ಹಾಡು ಟಕೀಲಾ. ಹೊಸ ವರ್ಷದ ಪ್ರಯುಕ್ತ ಬಿಡುಗಡೆಯಾಗಿದ್ದ ಈ ಹಾಡು ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡಿತ್ತು. ಸದ್ಯ ಈ ಹಾಡು 1 ಕೋಟಿ 86 ಲಕ್ಷ ವೀಕ್ಷಕರನ್ನ ಹೊಂದಿದೆ. ಈ ಮೂಲಕ 6ನೇ ಸ್ಥಾನದಲ್ಲಿದೆ.

ಅಲ್ಲಾಡ್ಸು ಅಲ್ಲಾಡ್ಸು

ಚೌಕ ಚಿತ್ರದ ಮತ್ತೊಂದು ಸೂರ್ ಹಿಟ್ ಹಾಡು ಅಲ್ಲಾಡ್ಸು ಅಲ್ಲಾಡ್ಸು ಕನ್ನಡ ಸಿನಿಮಾರಂಗದಲ್ಲಿ ಹೊಸ ಟ್ರೆಂಡ್ ಹುಟ್ಟಿಹಾಕಿತ್ತು. ಯೋಗರಾಜ್ ಭಟ್ ಅವರ ಲಿರಿಕ್ಸ್ ಚಿಂದಿ ಉಡಾಯಿಸಿತ್ತು. ಕಾಶೀನಾಥ್, ಪ್ರಜ್ವಲ್ ದೇವರಾಜ್, ವಿಜಯ ರಾಘವೇಂದ್ರ, ದಿಗಂತ್, ಪ್ರೇಮ್ ಎಲ್ಲರೂ ಈ ಹಾಡಿನಲ್ಲಿ ಕುಣಿದಿದ್ದರು. ಸದ್ಯ ಈ ಹಾಡು ಯುಟ್ಯೂಬ್ ನಲ್ಲಿ 2 ಕೋಟಿ 25 ಲಕ್ಷ ಜನ ನೋಡಿದ್ದಾರೆ. ಇದು ಕನ್ನಡದ ಹಾಡುಗಳಲ್ಲಿ 5ನೇ ಸ್ಥಾನದಲ್ಲಿದೆ.

3 ಪೆಗ್ ಸಾಂಗ್

Rap ಸಿಂಗರ್ ಚಂದನ್ ಶೆಟ್ಟಿ ಲೈಫ್ ಬದಲಾಯಿಸಿ 3 ಪೆಗ್ ಹಾಡು ಇಂದಿಗೂ ಫೆವರೇಟ್ ಹಾಡುಗಳಲ್ಲಿ ಒಂದು. ಸ್ವತಃ ಚಂದನ್ ಶೆಟ್ಟಿಯೆ ಹಾಡಿದ್ದ ಈ ಹಾಡು ಸುಮಾರು 2 ಕೋಟಿ 62 ಲಕ್ಷ ಅಭಿಮಾನಿಗಳನ್ನ ಹೊಂದಿದೆ. ಈ ಹಾಡು ನಾಲ್ಕನೇ ಸ್ಥಾನದಲ್ಲಿದೆ.

ನಿದಿರೆಗೂ ರಾಜ

ಸಂಜನಾ ಗಲ್ರಾನಿ ಮತ್ತು ತಿಲಕ್ ಅಭಿನಯಿಸಿದ್ದ ಗಂಡ ಹೆಂಡತಿ ಚಿತ್ರದ ನಿದಿರೆಗೂ ರಜ, ನೋವೆಲ್ಲ ವಜ....ಹಾಡು ಕಳೆದ ಹಲವು ವರ್ಷಗಳಿಂದ ಯೂಟ್ಯೂಬ್ ನಲ್ಲಿ ನಂಬರ್ ವನ್ ಕನ್ನಡ ಹಾಡಾಗಿತ್ತು. ಆದ್ರೆ, ಈಗ ಮೂರನೇ ಸ್ಥಾನಕ್ಕೆ ಜಿಗಿದಿದೆ. ಸದ್ಯಕ್ಕೆ, 3 ಕೋಟಿ 16 ಲಕ್ಷ ವೀಕ್ಷಕರು ಈ ಹಾಡು ನೋಡಿದ್ದಾರೆ.

ಬೆಳಗೆದ್ದು ಯಾರ ಮುಖವಾ ನಾನು ನೋಡಲಿ

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ 'ಕಿರಿಕ್ ಪಾರ್ಟಿ' ಮಾಡಿದ್ದ ಚಿತ್ರದ ಅಬ್ಬರಕ್ಕೆ ಪ್ರಮುಖ ಕಾರಣ ಚಿತ್ರದ ಹಾಡುಗಳು. ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಬೆಳಗೆದ್ದು ಯಾರ ಮುಖವಾ ನಾನು ನೋಡಲಿ ಹಾಡು ಆಲ್ ಟೈಮ್ ಹಿಟ್ ಆಗಿದೆ. ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಈ ಹಾಡು ಸದ್ಯ 4 ಕೋಟಿ 75 ಲಕ್ಷ ವೀಕ್ಷಕರನ್ನ ಹೊಂದಿದೆ.

ಬೊಂಬೆ ಹೇಳುತೈತೆ

ಕನ್ನಡ ಚಿತ್ರರಂಗದ ಆಲ್ ಟೈಮ್ ಹಿಟ್ ಸಿನಿಮಾ ಮತ್ತು ಹಾಡು ರಾಜಕುಮಾರ ಸಿನಿಮಾ. ಇದು ಯೂಟ್ಯೂಬ್ ನಲ್ಲೂ ನಂಬರ್ ವನ್ ಸ್ಥಾನದಲ್ಲಿದೆ. ಸಂತೋಷ್ ಆನಂದ್ ರಾಮ್ ಬರೆದು ವಿಜಯ ಪ್ರಕಾಶ್ ಹಾಡಿರುವ 'ಬೊಂಬೆ ಹೇಳುತೈತೆ' ಮೇಕಿಂಗ್ ಹಾಡು ಇದು ಕನ್ನಡದ ಅತಿ ಹೆಚ್ಚು ವೀಕ್ಷಕರನ್ನ ಹೊಂದಿರುವ ಹಾಡಾಗಿದೆ. 4 ಕೋಟಿ 76 ಲಕ್ಷ ಮಂದಿ ಈ ಹಾಡನ್ನ ನೋಡಿದ್ದಾರೆ.

English summary
most viewed kannada songs in youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada