»   » ವಿಡಿಯೋ : 'ಮಫ್ತಿ' ಸಿನಿಮಾದ ಮೊದಲ ಹಾಡು ಕೇಳಿ

ವಿಡಿಯೋ : 'ಮಫ್ತಿ' ಸಿನಿಮಾದ ಮೊದಲ ಹಾಡು ಕೇಳಿ

Posted By:
Subscribe to Filmibeat Kannada

'ಮಫ್ತಿ' ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ನಿನ್ನೆ (ಭಾನುವಾರ) ಈ ಹಾಡನ್ನು ಆನ್ ಲೈನ್ ನಲ್ಲಿ ಚಿತ್ರತಂಡ ರಿಲೀಸ್ ಮಾಡಿದೆ.

ವಿಡಿಯೋ : ಸಖತ್ ರಗಡ್ ಆಗಿರುವ 'ಮಫ್ತಿ' ಟ್ರೇಲರ್ ರಿಲೀಸ್

''ರಾಕ್ಷಸನು ನೀನೇನಾ... ರಕ್ಷಕನು ನೀನೇನಾ...'' ಎಂಬ ಈ ಹಾಡನ್ನು ಸಾಯಿ ಸರ್ವೇಶ್ ಎಂಬುವವರು ಬರೆದಿದ್ದಾರೆ. ರವಿಬಸೂರ್ ಹಾಡಿಗೆ ಸಂಗೀತ ನೀಡಿದ್ದು, ತಾವೇ ಹಾಡಿಗೆ ಧ್ವನಿಯಾಗಿದ್ದಾರೆ. ವಿಶೇಷ ಅಂದರೆ ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ಅವರ ಹೊಸ ಆಡಿಯೋ ಸಂಸ್ಥೆ 'JB ಮ್ಯೂಸಿಕ್' ಸಂಸ್ಥೆಯಲ್ಲಿ ಚಿತ್ರದ ಹಾಡುಗಳು ಹೊರಬಂದಿದೆ.

'Mufti' movie 1st song released

ಹಾಡಿನ ಸಾಹಿತ್ಯ ಕೇಳಿದರೆ ಇದು ಶಿವಣ್ಣ ಅವರ ಪಾತ್ರಕ್ಕೆ ಸಂಭಂದಿಸಿದ ಹಾಡು ಇರಬೇಕು ಎಂಬ ಅನಿಸಿಕೆ ಮೂಡುತ್ತದೆ. ಚಿತ್ರದಲ್ಲಿ ಶಿವಣ್ಣ ಪಾತ್ರ ಒಳ್ಳೆಯದೋ.. ಕೆಟ್ಟದ್ದೋ.. ಎಂಬ ಭಾವನೆಯಲ್ಲಿ ಆತ ರಾಕ್ಷಸನೋ.. ಅಥವಾ ರಕ್ಷನೋ ಎನ್ನುವ ಅಂಶ ಈ ಹಾಡಿನಲ್ಲಿದೆ. ಉಳಿದಂತೆ, ನಟ ಶ್ರೀಮುರಳಿ ಚಿತ್ರದ ನಾಯಕನಾಗಿದ್ದು, ನರ್ತನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಡಿಸೆಂಬರ್ 1ಕ್ಕೆ ತೆರೆಗೆ ಬರಲಿದೆ.

English summary
Watch Video : 'Mufti' movie 1st song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X