»   » 'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

Posted By:
Subscribe to Filmibeat Kannada

ಯೋಗರಾಜ್ ಭಟ್ ಅವರ ಸಾಹಿತ್ಯ ಅಂದರೇನೇ ಹಾಗೆ... ಅಲ್ಲಿ ತಮಾಷೆ ಇದ್ದರೂ, ಒಳಗೆ ವೇದಾಂತ ಅಡಗಿರುತ್ತದೆ. 'ಮುಗುಳು ನಗೆ' ಸಿನಿಮಾದ ಹಾಡಿನಲ್ಲಿಯೂ ಅಂತಹ ಪರಮಾದ್ಭುತ ಎಂಬ ಹಾಡುಗಳಿವೆ. ಅದರಲ್ಲಿ ಒಂದು 'ಹೋಡಿ ಒಂಬತ್ತ್..' ಎಂಬ ಹಾಡು.

ಗಣೇಶ್ ಅಭಿನಯದ 'ಮುಗುಳು ನಗೆ' ಚಿತ್ರದ ಕಥೆ ಏನು.?

'ಹೋಡಿ ಒಂಬತ್ತ್..' ಹಾಡು ನಿನ್ನೆ(ಜುಲೈ09) ಹುಬ್ಬಳ್ಳಿಯಲ್ಲಿ ರಿಲೀಸ್ ಆಗಿದೆ. ಹಾಡು ಕೇಳಿದ ಬಹುಪಾಲು ಮಂದಿ ಭಟ್ಟರ ಸಾಹಿತ್ಯಕ್ಕೆ ಶರಣು ಎಂದಿದ್ದಾರೆ. ಪ್ರಮುಖವಾಗಿ 'ಇಷ್ಟು ದೊಡ್ಡ ಬ್ರಹ್ಮಾಂಡ ಬೇಕಾ ನಮಗೆ...?', 'ಅಂದ್ಕಂಡಂಗಾಗೀ ಬಿಟ್ರೆ ದೇವ್ರಿಗಿಲ್ಲ ಕೆಲ್ಸ..' ಎಂಬ ರೀತಿಯ ಸಾಲುಗಳು ಹಾಡು ಕೇಳಿದ ಸೆಕೆಂಡ್ ಗಳಲ್ಲಿಯೇ ಇಷ್ಟ ಆಗಿ ಬಿಡುತ್ತದೆ.

ದಾಖಲೆ ಬೆಲೆಗೆ ಮಾರಾಟ ಆಗಿದೆ 'ಮುಗುಳು ನಗೆ' ಆಡಿಯೋ ರೈಟ್ಸ್

'Mugulu Nage' Movie Song Released.

ಹಾಡಿನಲ್ಲಿ ಭಟ್ಟರ ಸಾಹಿತ್ಯ, ಹರಿಕೃಷ್ಣ ಸಂಗೀತ, ಮತ್ತು ವಿಜಯ ಪ್ರಕಾಶ್ ಧ್ವನಿ ಇದೆ. 'ಅಲ್ಲಾಡ್ಸು..' ಹಾಡಿನ ನಂತರ ಮತ್ತೆ ಈ ಮೂವರು ಒಂದಾಗಿದ್ದು, ಈ ಹಾಡು ಕೂಡ ದೊಡ್ಡ ಮಟ್ಟದ ಟ್ರೆಂಡ್ ಸೃಷ್ಟಿಸುವ ಸೂಚನೆ ನೀಡಿದೆ. 'ಮುಗುಳು ನಗೆ' ಚಿತ್ರದ ಮೊದಲ ಹಾಡನ್ನು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Watch Video: 'Mugulu Nage' kannada movie 'Hodi Ombath' song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada