»   » 'ಮುಗುಳುನಗೆ' ಟೈಟಲ್ ಹಾಡು ರಿಲೀಸ್ ಮಾಡಿದ ಪವರ್ ಸ್ಟಾರ್

'ಮುಗುಳುನಗೆ' ಟೈಟಲ್ ಹಾಡು ರಿಲೀಸ್ ಮಾಡಿದ ಪವರ್ ಸ್ಟಾರ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ತುಂಬ ದಿನಗಳಿಂದ ಕಾಯುತ್ತಿದ್ದ ಹಾಡು ಕೊನೆಗೂ ಬಿಡುಗಡೆಯಾಗಿದೆ. ಮುಗುಳುನಗೆ ಚಿತ್ರದ ಒಂದೊಂದೆ ಹಾಡುಗಳನ್ನ ಬಿಡುಗಡೆ ಮಾಡುತ್ತಿದ್ದ ಚಿತ್ರತಂಡ ಅಂತಿಮವಾಗಿ ನಿನ್ನೆ (ಜುಲೈ 26) ಚಿತ್ರದ ಟೈಟಲ್ ಹಾಡನ್ನ ರಿಲೀಸ್ ಮಾಡಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ಮುಗುಳುನಗೆ' ಚಿತ್ರದ ಟೈಟಲ್ ಸಾಂಗ್ ರಿಲೀಸ್ ಮಾಡಿದ್ದು ವಿಶೇಷವಾಗಿತ್ತು. ಇದಕ್ಕು ಮುಂಚೆ ಹಿರಿಯ ನಟ ಅನಂತ್ ನಾಗ್, ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಜಯಂತ್ ಕಾಯ್ಕಿಣಿ ಅವರು 'ಮುಗುಳುನಗೆ' ಟೈಟಲ್ ಹಾಡನ್ನ ರಿಲೀಸ್ ಮಾಡಿದ್ದರು.

ಮನಸ್ಸನ್ನ ತಲ್ಲಣಗೊಳಿಸುತ್ತಿದೆ 'ಮುಗುಳುನಗೆ'ಯ 'ರೂಪಸಿ' ಹಾಡು

Mugulunage Title Song Released By Puneeth Rajkumar

'ಮುಗುಳುನಗೆ' ಚಿತ್ರದ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್ ರಾಜ್ ಕುಮಾರ್ ಎಲ್ಲ ಹಾಡುಗಳು ಚೆನ್ನಾಗಿದೆ. ನನಗೆ ಹೊಡಿ ಒಂಭತ್ ಹಾಡು ತುಂಬ ಇಷ್ಟ ಎಂದಿದ್ದಾರೆ. ಇನ್ನು ಯೋಗರಾಜ್ ಭಟ್ ಅವರು ಬರೆದಿರುವ 'ಮುಗುಳುನಗೆ' ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಗಾಯಕ ಸೋನು ನಿಗಮ್ ಅವರು ಧ್ವನಿಯಾಗಿದ್ದಾರೆ.

'ಮುಗುಳು ನಗು'ತ್ತಲೇ ವೇದಾಂತ ಹೇಳಿದ ಭಟ್ಟರ ಈ ಹಾಡು ಕೇಳಿ...

ಅಂದ್ಹಾಗೆ, 'ಮುಗುಳುನಗೆ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಯೋಗರಾಜ್ ಭಟ್ ನಿರ್ದೇಶನವಿದ್ದು, ಸೈಯಾದ್ ಸಲಾಂ ನಿರ್ಮಾಣ ಮಾಡಿದ್ದಾರೆ. ಗಣೇಶ್ ಜೋಡಿಯಾಗಿ ಚಿತ್ರದಲ್ಲಿ ಒಟ್ಟು ನಾಲ್ಕು ನಾಯಕಿಯರಿದ್ದು, 'ಸಿದ್ಧಾರ್ಥ್' ಖ್ಯಾತಿಯ ಅಪೂರ್ವ ಆರೋರ, ಆಶಿಕಾ, ನಿಖಿತಾ ನಾರಾಯಣ್ ಮತ್ತು ವಿಶೇಷ ಪಾತ್ರದಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

English summary
The title song of Yogaraj Bhatt's new film 'Mugulu Nage' was released by veteran actor Ananthnag, music director Manomurthy and lyricist Jayanth Kaikini jointly. Later, the song was released again by Puneeth Rajakumar in the evening

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada