»   » ಎಲ್ಲರಂತಲ್ಲದ ಮೋಹಕ ಗಾಯಕ ಅರ್ಜಿತ್ ಸಿಂಗ್

ಎಲ್ಲರಂತಲ್ಲದ ಮೋಹಕ ಗಾಯಕ ಅರ್ಜಿತ್ ಸಿಂಗ್

Posted By:
Subscribe to Filmibeat Kannada

ಕಾಲೇಜು ಕ್ಯಾಂಪಸ್ ನಲ್ಲಿ, ಬಾತ್ ರೂಮಿನಲ್ಲಿ, ಹುಡುಗೀರ ಹಾಸ್ಟೆಲ್ ನಲ್ಲಿ, ಮನೆ, ಮಠ...ಹೀಗೆ ಎಲ್ಲೆಂದರಲ್ಲಿ ಈಗ ಸರ್ವಾಂತರ್ಯಾಮಿಯಾಗಿ ಕೇಳಿಬರುತ್ತಿರುವ ಹೆಸರು ಅರ್ಜಿತ್ ಸಿಂಗ್. ಯುವಕ/ಯುವತಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ ಮೋಹಕ ಗಾಯಕ ಅರ್ಜಿತ್ ಸಿಂಗ್.

ಬಾಲಿವುಡ್ ನಲ್ಲಿ ಬಿಡುಗಡೆಯಾದ 'ಆಶಿಕಿ 2' ಚಿತ್ರದ ಹಾಡುಗಳನ್ನು ಕೇಳಿದ ಮೇಲಂತೂ ಅರ್ಜಿತ್ ಸಿಂಗ್ ಜಪ ಮಾಡದ ಯುವಕ/ಯವತಿಯರಿಲ್ಲ. ಈ ರೊಮ್ಯಾಂಟಿಕ್ ಮ್ಯೂಸಿಕಲ್ ಡ್ರಾಮಾ ಮೂಲಕ ಕೋಟ್ಯಾಂತರ ಮನಸ್ಸುಗಳನ್ನು ಮೀಟಿದ ಗಾಯಕ ಅರ್ಜಿತ್.

ಕನ್ನಡದ 'ನಿನ್ನಿಂದಲೇ' ಚಿತ್ರದ "ಮೌನ ತಾಳಿತೇ..." ಹಾಡು ಅರ್ಜಿತ್ ಸಿಂಗ್ ಅವರ ಸುಮಧುರ ಕಂಠಸಿರಿಯಲ್ಲಿ ಹೊರಬಂದಿದೆ. ಈ ಚಿತ್ರ ಬಾಕ್ಸ್ ಆಫೀಸಲ್ಲಿ ಹಿಟ್ ಆಗದಿದ್ದರೂ 'ನಿನ್ನಿಂದಲೇ' ಚಿತ್ರದ ಹಾಡುಗಳು ಮಾತ್ರ ಎಲ್ಲರ ಮೊಬೈಲ್ ನಲ್ಲಿ ರಿಂಗಣಿಸುತ್ತಲೇ ಇವೆ.

ಅರ್ಜಿತ್ ಸಿಂಗ್ ಅವರು ಕಾಕ್ ಟೈಲ್, ಬರ್ಫಿ, ಯೇ ಜವಾನಿ ಹೈ ದಿವಾನಿ ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಚಿತ್ರಗಳಲ್ಲೂ ಹಾಡಿದ್ದಾರೆ. ಅರ್ಜಿತ್ ಸಿಂಗ್ ಜನಪ್ರಿಯತೆ ಯಾವ ಮಟ್ಟದಲ್ಲಿದೆ ಎಂದರೆ ಫೋರ್ಬ್ ಸೆಲೆಬ್ರಿಟೀಸ್ ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು.

ಕೇವಲ ಜನಪ್ರಿಯ ಗಾಯಕರಾಗಿಯಷ್ಟೇ ಉಳಿದ ಅರ್ಜಿತ್ ಸಿಂಗ್ ಬಹಳ ಕಡಿಮೆ ವಯಸ್ಸಿನಲ್ಲೇ (ವಿಕಿಪೀಡಿಯಾ ಪ್ರಕಾರ ಇನ್ನೂ 26ರ ಹರಯ) 2014ನೇ ಸಾಲಿನಲ್ಲಿ ಅವರ ಗಳಿಕೆ ರು.350 ದಶಲಕ್ಷ! ಎಲ್ಲರಲ್ಲಂತದ ಗಾಯಕ ಈತ.

Music Sensation Arjith Singh live concert Bengaluru

ಏಕೆಂದರೆ ಅರ್ಜಿತ್ ಸಿಂಗ್ ಯಾರಿಗೂ ಅಷ್ಟಾಗಿ ಮಾತಿಗೂ ಸಿಕ್ಕಲ್ಲ. ಪತ್ರಿಕೆ, ಸಂದರ್ಶನ ಎಂದರೆ ಗಾವುದ ದೂರ. ಅರ್ಜಿತ್ ಸಿಂಗ್ ಫೋಟೋಗೂ ಸಿಗಲ್ಲ ಎಂಬುದು ಇನ್ನೊಂದು ವಿಶೇಷ. ನನಗೆ ಮೀನು ತಿನಬೇಕು ಎಂದರೆ ಸೀದಾ ಮಾರ್ಕೆಟ್ ಗೆ ಹೋಗಿ ನಾನೇ ತಗೊಂಡು ಬರ್ತೀನಿ. ಅದುಬಿಟ್ಟು ನಾನು ಸಂದರ್ಶನ ಕೊಡುವುದು ಫೋಟೋ ಕ್ಲಿಕ್ಕಿಸಿಕೊಳ್ಳುವುದು ಇಷ್ಟವಿಲ್ಲ ಎನ್ನುತ್ತಾರೆ.

ಇಷ್ಟೆಲ್ಲಾ ದುಡ್ಡು, ಹೆಸರು ಮಾಡಿದ ಅರ್ಜಿತ್ ಸಿಂಗ್ ವಿವಾದಗಳಿಂದಲೂ ಮುಕ್ತವಾಗಿಲ್ಲ. ತನ್ನ ಡೈವೋರ್ಸ್ ಪ್ರಕರಣದ ಬಗ್ಗೆ ಕೇಳಿದ ಪತ್ರಕರ್ತೆಯೊಬ್ಬರ ಮೇಲೆ ಹಲ್ಲೆ ಮಾಡಿ ವಿವಾದಕ್ಕೊಳಗಾಗಿದ್ದರು. ಇದೇ ಮಾರ್ಚ್ 14ಕ್ಕೆ ಅರ್ಜಿತ್ ಸಿಂಗ್ ಅವರ ಲೈವ್ ಶೋ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ. (ಫಿಲ್ಮಿಬೀಟ್ ಕನ್ನಡ)

English summary
Multiple award winner, heartthrob of millions, musical sensation - Arijit Singh requires no introduction. Join him as he performs the live show in Bengaluru on 14th March, 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada