»   » ಚಂದನ್ ಶೆಟ್ಟಿಯ 'ಚಾಕೋಲೇಟ್ ಗರ್ಲ್' ನೇಹಾ ಶೆಟ್ಟಿ

ಚಂದನ್ ಶೆಟ್ಟಿಯ 'ಚಾಕೋಲೇಟ್ ಗರ್ಲ್' ನೇಹಾ ಶೆಟ್ಟಿ

Posted By:
Subscribe to Filmibeat Kannada

ನಿಮಗೆಲ್ಲಾ ಚಂದನ್ ಶೆಟ್ಟಿ ಗೊತ್ತಲ್ವಾ..? ಅದೇ 'ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎಂದಿದೆ' ಕನ್ನಡ ಸಾಂಗ್ ಕಂಪೋಸ್ ಮಾಡಿದಾರಲ್ವಾ ಅವರೇ. ಈ ಹಾಡಿನಿಂದಲೇ ಫೇಮಸ್ ಆದ ಚಂದನ್ ಶೆಟ್ಟಿ ಈಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.[ಮೂರು 'ಪೆಗ್' ಅಲ್ಲ: ಮೂರೇ ಮೂರು 'ತೀರ್ಪು'ಗೆ ತಲೆ ಗಿರಗಿರ ಅಂದಿದೆ.!]

ಹೌದು, '3 ಪೆಗ್' ಕನ್ನಡ ರ್ಯಾಪ್ ಹಾಡಿನ ಮೂಲಕ ಯುವ ಮನಸ್ಸುಗಳಲ್ಲಿ ರ್ಯಾಪ್ ಹಾಡಿನ ಕ್ರೇಜ್ ಹುಟ್ಟು ಹಾಕಿದ್ದ ಸಂಗೀತ ನಿರ್ದೇಶಕ ಕಮ್ ಹಾಡುಗಾರ ಚಂದನ್ ಶೆಟ್ಟಿ, ಈಗ ಸದ್ಯದಲ್ಲೇ ಹೊಸ ಆಲ್ಬಂ ಸಾಂಗ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ. ಚಂದನ್ ಪಡ್ಡೆ ಹುಡುಗರ ಹುಚ್ಚೆಬ್ಬಿಸಲು ರೆಡಿ ಮಾಡುತ್ತಿರುವ ಆ ಸಾಂಗ್ ಯಾವುದು, ಅದರ ವಿಶೇಷಗಳು ಏನು ಎಂಬ ಡೀಟೇಲ್ಸ್ ಇಲ್ಲಿದೆ.

ಚಂದನ್ ಶೆಟ್ಟಿ ಹೊಸ ಆಲ್ಬಂ ಸಾಂಗ್ ಇದು..

'3 ಪೆಗ್' ಕನ್ನಡ ರ್ಯಾಪ್ ಸಾಂಗ್ ನಂತರ ಚಂದನ್ ಶೆಟ್ಟಿ 'ಚಾಕೊಲೇಟ್ ಗರ್ಲ್' ಎಂಬ ಹೊಸ ಹಾಡನ್ನು ನಿರ್ಮಾಣ ಮಾಡಿದ್ದು, ಅದರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿದ್ದಾರೆ.

'ಚಾಕೋಲೇಟ್ ಗರ್ಲ್' ಯಾರು?

ಈ ಹಿಂದೆ '3 ಪೆಗ್' ಕನ್ನಡ ರ್ಯಾಪ್ ಹಾಡಿನಲ್ಲಿ ನಟಿ ಐಂದ್ರಿತಾ ರೇ ಸೊಂಟ ಬಳುಕಿಸಿದ್ದರು. ಆದರೆ ಈಗ ಚಂದನ್ ಶೆಟ್ಟಿ 'ಚಾಕೋಲೇಟ್ ಗರ್ಲ್' ಆಲ್ಬಂ ಹಾಡಿಗೆ 'ಮುಂಗಾರು ಮಳೆ-2' ಖ್ಯಾತಿಯ ನೇಹಾ ಶೆಟ್ಟಿ ಹೆಜ್ಜೆ ಹಾಕಿದ್ದಾರೆ.[ಚಿತ್ರಗಳು: ನೇಹಾ ಶೆಟ್ಟಿ]

ಚಾಕೋಲೇಟ್ ಗರ್ಲ್ ವಿಶೇಷತೆ..

ಚಂದನ್ ಶೆಟ್ಟಿ 'ಚಾಕೋಲೇಟ್ ಗರ್ಲ್' ಹಾಡಿಗೆ ಪ್ರಪಂಚದ ದುಬಾರಿ ಕಾರುಗಳಲ್ಲಿ ಒಂದಾದ 'Lamborghini' ಕಾರು ಬಳಸಲಾಗಿದೆಯಂತೆ. ಈ ಕಾರಿನ ಮುಂದೆ ನೇಹಾ ಶೆಟ್ಟಿ ಸಖತ್ ಹಾಟ್ ಆಗಿ ಮಿಂಚಿದ್ದಾರಂತೆ.

'3 ಪೆಗ್' ಗಿಂತಲೂ ವಿಭಿನ್ನವಾದ ಹಾಡು

ಈ ಹಿಂದೆ ಕೇವಲ ಪಬ್ ಡ್ಯಾನ್ಸ್ ಶೈಲಿಯ '3 ಪೆಗ್' ಹಾಡಿನಿಂದ ಯುವ ಮನಸ್ಸುಗಳಲ್ಲಿ ಹುಚ್ಚೆಬ್ಬಿಸಿದ್ದ ಚಂದನ್, 'ಚಾಕೋಲೇಟ್ ಗರ್ಲ್' ಸಾಂಗ್ ನಲ್ಲಿ ಅದಕ್ಕಿಂತ ಹೆಚ್ಚಿನ ಥ್ರಿಲ್ ನೀಡಲಿದ್ದಾರಂತೆ. ಕಾರಣ ಈ ಹಾಡಿನಲ್ಲಿ ಹಿಪ್ ಹಾಪ್ ತರಹದ ಹಾಡು ಇದೆಯಂತೆ.

'ಚಾಕೋಲೇಟ್ ಗರ್ಲ್' ರಿಲೀಸ್ ಯಾವಾಗ?

ಚಂದನ್ ಶೆಟ್ಟಿ ಅವರೇ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿರುವ 'ಚಾಕೋಲೇಟ್ ಗರ್ಲ್' ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಿಲೀಸ್ ಆಗಲಿದೆಯಂತೆ.

English summary
'Mungaru Male 2' heroine Neha Shetty had danced in Chandan Shetty 'Chocolate Girl' Video Song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada