For Quick Alerts
  ALLOW NOTIFICATIONS  
  For Daily Alerts

  ಮೂರು 'ಪೆಗ್' ಅಲ್ಲ: ಮೂರೇ ಮೂರು 'ತೀರ್ಪು'ಗೆ ತಲೆ ಗಿರಗಿರ ಅಂದಿದೆ.!

  By Harshitha
  |

  ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಕಂಪೋಸ್ ಮಾಡಿದ್ದ '3 ಪೆಗ್' ಹಾಡನ್ನ ನೀವೆಲ್ಲಾ ಕೇಳಿದ್ದೀರಾ ತಾನೆ, ಅದರ ಹೊಸ ರೀಮಿಕ್ಸ್ ವರ್ಷನ್ ನ ಇವತ್ತು ನಿಮ್ಮ ಮುಂದೆ ಇಡ್ತಿದ್ದೀವಿ ನೋಡಿ...

  ಕಾವೇರಿ ಹೋರಾಟ, ಕರ್ನಾಟಕಕ್ಕೆ ಪದೇ ಪದೇ ಆಗುತ್ತಿರುವ ಅನ್ಯಾಯ, ಸುಪ್ರೀಂ ಕೋರ್ಟ್ ಆದೇಶವನ್ನ ಇಟ್ಟುಕೊಂಡು 'ಕಲಾಕಾರ'ರೊಬ್ಬರು '3 ಪೆಗ್' ಟ್ಯೂನ್ ಗೆ ಸಾಹಿತ್ಯ ಬರೆದಿದ್ದಾರೆ. (ರಚನೆ ಮಾಡಿರುವವರು ಯಾರು ಅಂತ ತಿಳಿದುಬಂದಿಲ್ಲ)

  'ವಾಟ್ಸ್ ಆಪ್'ನಲ್ಲಿ ಹರಿದಾಡುತ್ತಿರುವ 'ಮೂರೇ ಮೂರು ತೀರ್ಪು' ಹಾಡನ್ನ ಯಥಾವತ್ ಆಗಿ ನಿಮ್ಮ ಮುಂದೆ ಇಡ್ತಿದ್ತೀವಿ...ಓದಿ....


  "ಮೂರೆ ಮೂರು ತೀರ್ಪಿಗೆ ತಲೆ ಗಿರಗಿರಗಿರಗಿರ ಅಂದಿದೆ..,
  ಅವ್ರ ಕಣ್ಣುಗಳು ಬ್ಲೈಂಡ್ ಆಗಿದೆ..,
  ನ್ಯಾಯದ ಬ್ಯಾಲೆನ್ಸು ತಪ್ಪಿದೆ..
  ಯಾರೊ ಈ ಜನಗಳು
  ಆಲ್ಮೋಸ್ಟ್ ನೀರು ಖಾಲಿ ಮಾಡಿದಾರೆ..,
  ಅಯ್ಯೋ ಡ್ಯಾನ್ಸು ಮಾಡ್ಸ್ತವ್ರೆ..,
  ಕಡಕ್ಕು ಸ್ಮೈಲು ಕೊಡ್ತವ್ರೆ..,

  ಡ್ಯಾಮು ನೋಡಣ್ಣ...,
  ಕೊಂಚ ನೀರು ಐತಣ್ಣ..,
  ಯಾವ ಪ್ಲಾನೆಟ್ ನೀರು ಕುಡೀಬೇಕು ಕೇಳಬೇಕಣ್ಣಾ..

  ಯೇ ಮಳೇನು ಸಣ್ಣ..,
  ನೀರ್ ಮೇಲೆ ಇಟ್ಟವ್ರೆ ಕಣ್ಣ..,
  ನಮ್ಮ ಹಾರ್ಟಿಗೆ ಬುಲೆಟ್ಟು ನಾಟಿ, ಉಳಿಯೋದೆ ಮಣ್ಣ...

  ಪೇಟೆಗೆ ಹೋಗೋದೆ ಬೇಡ ಇಲ್ಲೆ ಇದೆ ತರಕಾರಿ...,
  ಡ್ಯಾಮೊಳಗೆ ಕೂತು ಮಾರುತ್ತವ್ರೆ ಬೇಕಾದವ್ರು ಕೊಂಡ್ಕೊಳ್ರಿ..,
  ಸೈಕಾದೆ ಡ್ಯಾಮ್ ನೋಡಿ ಸೈಕಾದೆ..,
  ಓ ಮೈ ಗಾಡ್...
  ಕರಗಲ್ವ ಈ ಜನಗಳ ನೋಡಿ..

  ಮೂರೆ ಮೂರು ತೀರ್ಪಿಗೆ ತಲೆ ಗಿರಗಿರಗಿರಗಿರ ಅಂದಿದೆ..,
  ಅವ್ರ ಕಣ್ಣುಗಳು ಬ್ಲೈಂಡ್ ಆಗಿದೆ..,
  ನ್ಯಾಯದ ಬ್ಯಾಲೆನ್ಸು ತಪ್ಪಿದೆ..
  ಯಾರೊ ಈ ಜನಗಳು
  ಆಲ್ಮೋಸ್ಟ್ ನೀರು ಖಾಲಿ ಮಾಡಿದಾರೆ..,
  ಅಯ್ಯೋ ಡ್ಯಾನ್ಸು ಮಾಡ್ಸ್ತವ್ರೆ..,
  ಕಡಕ್ಕು ಸ್ಮೈಲು ಕೊಡ್ತವ್ರೆ..

  English summary
  Chandan Shetty's Popular '3 Peg' song lyrics is re written in satire style based on Cauvery Issue by Unknown which is circulating in Whatsapp.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X