»   » 'ಒಂದು ಮೊಟ್ಟೆಯ ಕಥೆ' ಗೆದ್ದ ಖುಷಿಗೆ ಚಿತ್ರತಂಡದ ಉಡುಗೊರೆ

'ಒಂದು ಮೊಟ್ಟೆಯ ಕಥೆ' ಗೆದ್ದ ಖುಷಿಗೆ ಚಿತ್ರತಂಡದ ಉಡುಗೊರೆ

Posted By:
Subscribe to Filmibeat Kannada

'ಒಂದು ಮೊಟ್ಟೆಯ ಕಥೆ' ಸೂಪರ್ ಹಿಟ್ ಆಗಿದೆ. ವಿಭಿನ್ನ ಕಥೆಯ ಸಿನಿಮಾವನ್ನು ಕನ್ನಡದ ಜನ ಒಪ್ಪಿಕೊಂಡಿದ್ದಾರೆ. ಸಿನಿಮಾ ಗೆದ್ದಿರುವ ಖುಷಿಯಲ್ಲಿರುವ ಚಿತ್ರತಂಡ ಈಗ ಸಿನಿಮಾದ ಒಂದು ವಿಡಿಯೋ ಹಾಡನ್ನು ರಿಲೀಸ್ ಮಾಡಿದೆ.

ಅಮೆರಿಕಾದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಹವಾ

ಸಿನಿಮಾದ ಹಾಡುಗಳ ಪೈಕಿ 'ಚಂದ ಅವಳ ಕಿರು ಲಜ್ಜೆ...' ಎಂಬ ಹಾಡು ಎಲ್ಲರ ಫೇವರಿಟ್ ಆಗಿತ್ತು. ಆದರೆ ಇದುವರೆಗೂ ಈ ಹಾಡಿನ ವಿಡಿಯೋ ತುಣುಕನ್ನು ಚಿತ್ರತಂಡ ಬಿಡುಗಡೆ ಮಾಡಿರಲಿಲ್ಲ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದವರು ಮಾತ್ರ ಈ ಹಾಡನ್ನು ಕಣ್ಣು ತುಂಬಿಕೊಂಡಿದ್ದರು.

 'Ondu Motteya Kathe' movie video song released

'ಒಂದು ಮೊಟ್ಟೆಯ ಕಥೆ' ಚಿತ್ರ ಈ ವಾರಾಂತ್ಯದಲ್ಲಿ ಅಮೆರಿಕಾದ ವಿವಿಧ ನಗರಗಳಲ್ಲಿ 17ಕ್ಕೂ ಹೆಚ್ಚು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಜುಲೈ 6ಕ್ಕೆ ಬಿಡುಗಡೆಯಾಗಿದ್ದ ಈ ಚಿತ್ರ ಸದ್ಯ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ರಾಜ್ ಬಿ ಶೆಟ್ಟಿ ನಿರ್ದೇಶನ ಚಿತ್ರಕ್ಕಿದೆ. 'ಒಂದು ಮೊಟ್ಟೆಯ ಕಥೆ' ಚಿತ್ರದ ಈ ಹಾಡು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Kannada Movie 'Ondu Motteya Kathe' video song released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada