»   » ಪವನ್ ಕಲ್ಯಾಣ್ ಚಿತ್ರದಲ್ಲಿ ಸುದೀಪ್ 'ಬಬ್ಬರ್ ಶೇರ್'

ಪವನ್ ಕಲ್ಯಾಣ್ ಚಿತ್ರದಲ್ಲಿ ಸುದೀಪ್ 'ಬಬ್ಬರ್ ಶೇರ್'

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ಆಡಿಯೋ ನಿನ್ನೆಯಷ್ಟೇ (ಏಪ್ರಿಲ್ 16) ಹೊರಬಂದಿದೆ. 'ರನ್ನ'ನ ಹಾಡುಗಳನ್ನ ಕೇಳಿ ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೀಗಿರುವಾಗಲೇ, ಸುದೀಪ್ ಫ್ಯಾನ್ಸ್ ಸಂತಸ ಪಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ.

'ರನ್ನ' ಚಿತ್ರದಲ್ಲಿನ ಸುದೀಪ್ ಇಂಟ್ರೋಡಕ್ಷನ್ ಸಾಂಗ್ ನೀವು ಕೇಳಿದ್ದೀರಾ. ''ಜಂಗಲೇ ಮೇ ಸಿಂಗಲ್ ಶೇರ್....ನಾಮ್ ಹೇ ಉಸ್ಕಾ ಬಬ್ಬರ್ ಶೇರ್..'' ಅಂತ ಶುರುವಾಗುವ ಆರಡಿ ಕಟೌಟ್ ಹಾಡು ಸಿಕ್ಕಾಪಟ್ಟೆ ಫೇಮಸ್ ಆಗ್ಬಿಟ್ಟಿದೆ.[ಹೆಡ್ ಫೋನ್ ಹಾಕ್ಕೊಳ್ಳಿ...'ರನ್ನ' ಎಲ್ಲಾ ಹಾಡು ಕೇಳಿ...]


Pawan Kalyan impressed with 'Ranna' Babbar Sher song

ಸುದೀಪ್ 'ಬಬ್ಬರ್ ಶೇರ್' ಎಷ್ಟು ಜನಪ್ರಿಯ ಆಗಿದೆ ಅಂದ್ರೆ, ಈ ಹಾಡನ್ನ ಕೇಳಿ ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಕ್ಲೀನ್ ಬೌಲ್ಡ್ ಆಗಿದ್ದಾರಂತೆ. ಅಲ್ಲದೇ ತಮ್ಮ ಮುಂದಿನ ಸಿನಿಮಾ 'ಗಬ್ಬರ್ ಸಿಂಗ್ 2' ಚಿತ್ರದಲ್ಲಿ 'ಬಬ್ಬರ್ ಶೇರ್' ಹಾಡಿನ ಮೊದಲ ಎರಡು ಸಾಲುಗಳನ್ನ ಬಳಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾರಂತೆ.


ಹೇಳಿ ಕೇಳಿ 'ಬಬ್ಬರ್ ಶೇರ್' ಹಾಡಿಗೆ ದನಿಯಾಗಿರುವುದು ಟಾಲಿವುಡ್ ನ ಮ್ಯೂಸಿಕ್ ಮಾಂತ್ರಿಕ ದೇವಿ ಶ್ರೀ ಪ್ರಸಾದ್. 'ಗಬ್ಬರ್ ಸಿಂಗ್ 2' ಚಿತ್ರಕ್ಕೂ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸುವ ಸಾಧ್ಯತೆ ಇದೆ. ['ರನ್ನ' ಚಿತ್ರದ ಟೆಂಪರೇಚರ್ ಏರಿಸುತ್ತಿರುವ ಸೀರೆ ಹಾಡು]


Pawan Kalyan impressed with 'Ranna' Babbar Sher song

ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ ''ಜಂಗಲೇ ಮೇ ಸಿಂಗಲ್ ಶೇರ್....ನಾಮ್ ಹೇ ಉಸ್ಕಾ ಬಬ್ಬರ್ ಶೇರ್..'' ಸಾಲುಗಳಲ್ಲಿ ಪವರ್ ಪಂಚ್ ಗುರುತಿಸಿರುವ ದೇವಿ ಶ್ರೀ ಪ್ರಸಾದ್, 'ಬಬ್ಬರ್ ಶೇರ್' ಹಾಡನ್ನ ಪವನ್ ಕಲ್ಯಾಣ್ ಗೆ ಕೇಳಿಸಿದ್ದಾರೆ. ಹಾಡನ್ನ ಕೇಳಿ ಮೆಚ್ಚಿಕೊಂಡಿರುವ ಪವನ್ ಕಲ್ಯಾಣ್, ಸಾಹಿತ್ಯ ಬಳಕೆ ಮಾಡಿಕೊಳ್ಳುವ ಬಗ್ಗೆ ಪರ್ಮಿಷನ್ ಕೇಳಿದ್ದಾರಂತೆ. ['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


ಅಷ್ಟಕ್ಕೂ 'ರನ್ನ', ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ಆದ್ದರಿಂದ ಕೊಟ್ಟು-ತೆಗೆದುಕೊಳ್ಳುವ ಮನೋಭಾವದಲ್ಲಿದೆ 'ರನ್ನ' ಚಿತ್ರ ತಂಡ. (ಏಜೆನ್ಸೀಸ್)

English summary
Tollywood Actor Pawan Kalyan has wooed Kiccha Sudeep starrer 'Ranna' Babbar Sher song, sung by Devishree Prasad. According to the reports, Pawan Kalyan and Devishree Prasad wants to make use of two lines from 'Babbar Sher' song written by V.Nagendra Prasad in his next 'Gabbar Singh-2'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada