For Quick Alerts
  ALLOW NOTIFICATIONS  
  For Daily Alerts

  ಕನ್ನಡ ಹಾಡಿಗೆ ಮತ್ತೆ ಧ್ವನಿಯಾದ ಆಶಾ ಭೋಂಸ್ಲೆ

  By Bharath Kumar
  |

  ಭಾರತೀಯ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. '19/11' ಎಂಬ ಹೊಸ ಚಿತ್ರಕ್ಕೆ ಹಾಡೊಂದನ್ನ ಹಾಡುವ ಮೂಲಕ ಸ್ಯಾಂಡಲ್ ವುಡ್ ಕಡೆ ಮತ್ತೆ ಮುಖ ಮಾಡಿದ್ದಾರೆ.

  ಜೋಯೆಲ್ ಮತ್ತು ಅಭಿಲಾಷ್ ಸಂಗೀತ ಸಂಯೋಜಿಸಿದ "ಕಣ್ಣು ಕಣ್ಣಲಿ ಬಣ್ಣ ಬಣ್ಣದ ಕನಸನ್ನು ಕೊಡ್ತಾಳಲ್ಲ.......'' ಎಂಬ ಹಾಡನ್ನ 84 ವಯಸ್ಸಿನ ಆಶಾ ಭೋಂಸ್ಲೆ ಹಾಡಿದ್ದಾರೆ. ಆಶಾ ಅವರ ಜೊತೆ ಚೇತನ್‌ ನಾಯಕ್‌ ಕೂಡ ದನಿಗೂಡಿಸಿದ್ದು, ಮುಂಬೈನಲ್ಲಿ ಸಾಂಗ್ ರೆಕಾರ್ಡಿಂಗ್ ಮುಗಿದಿದೆ.

  ಈ ಹಿಂದೆ 1967 ರಲ್ಲಿ ಬಿಡುಗಡೆಯಾಗಿದ್ದು, 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಒಂದು ಹಾಡು ಮತ್ತು ಡಾ. ರಾಜಕುಮಾರ್‌ ಅಭಿನಯದ "ದೂರದ ಬೆಟ್ಟ' ಚಿತ್ರದಲ್ಲಿ ಒಂದು ಹಾಡು ಆಶಾ ಅವರ ಧ್ವನಿಯಲ್ಲಿ ಮೂಡಿಬಂದಿತ್ತು. ಅದಾದ ನಂತರ ಶ್ರೀನಗರ ಕಿಟ್ಟಿ ಅಭಿನಯದ "ಮತ್ತೆ ಮುಂಗಾರು' ಚಿತ್ರದಲ್ಲಿ "ಹೇಳದೆ ಕಾರಣ ...' ಎಂಬ ಹಾಡನ್ನ ಹಾಡಿದ್ದರು. ಇದೀಗ ಮತ್ತೆ ವರ್ಷಗಳ ನಂತರ ಕನ್ನಡದ ಪದಗಳಿಗೆ ಧ್ವನಿ ಸೇರಿಸಿದ್ದಾರೆ.

  ಅಂದ್ಹಾಗೆ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆರ್ಯನ್‌ ಎಂ ಪ್ರತಾಪ್‌ ನಿರ್ದೇಶಿಸಿದ್ದು, "ಅಮರಾವತಿ' ಖ್ಯಾತಿಯ ಮಾಧವ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ರಕ್ಷಕ್ ಮತ್ತು ಪಲ್ಲವಿ ನಾಯಕ್‌ ಎನ್ನುವವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Famous Playback Singer Asha Bhosle, who has sung for Kannada movies like 'Dorrada Betta' and 'Mathe Mungaru', has made a comeback to Sandalwood by crooning a song for the upcoming Sandalwood movie ‘19/11.’

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X