»   » ಅಬ್ಬಬ್ಬಾ ಕಡೆಗೂ ಪೂಜಾಗಾಂಧಿಗೆ 'ಕಲ್ಯಾಣಮಸ್ತು'

ಅಬ್ಬಬ್ಬಾ ಕಡೆಗೂ ಪೂಜಾಗಾಂಧಿಗೆ 'ಕಲ್ಯಾಣಮಸ್ತು'

By: ಉದಯರವಿ
Subscribe to Filmibeat Kannada

ಇನ್ನೊಂದು ಮದುವೆನಾ ಎಂದು ಹುಬ್ಬೇರಿಸಬೇಡಿ. ಈಗಾಗಲೆ ಮದುವೆ ವಿಚಾರದಲ್ಲಿ ಪೂಜಾಗಾಂಧಿ ಸಾಕಷ್ಟು ನೊಂದಿದ್ದಾರೆ. ಅದು ಯಾಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸುದೀರ್ಘ ಸಮಯದಿಂದ ಡಬ್ಬದಲ್ಲೇ ಕೂತಿದ್ದ ಪೂಜಾಗಾಂಧಿ ಅಭಿನಯದ 'ಕಲ್ಯಾಣಮಸ್ತು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಈ ಚಿತ್ರದ ಆಡಿಯೋ ಬುಧವಾರ (ನ.27) ಮಾರುಕಟ್ಟೆಗೆ ಬಿಡುಗಡೆಗೆಯಾಗುತ್ತಿದೆ. ಯಾಕೆ ಇಷ್ಟು ದಿನ 'ಕಲ್ಯಾಣಮಸ್ತು' ಚಿತ್ರಕ್ಕೆ ಶುಭಗಳಿಗೆ ಕೂಡಿಬಂದಿರಲಿಲ್ಲ ಎಂಬ ಪ್ರಶ್ನೆಗೆ ಮಾತ್ರ ಉತ್ತರ ನಿಗೂಢವಾಗಿದೆ. ಈಗ ಪೂಜಾಗಾಂಧಿ ಚಿತ್ರಗಳು ವಿವಾದದಲ್ಲಿ ಸಿಕ್ಕಿಕೊಂಡಿವೆ. ದಂಡುಪಾಳ್ಯ ಚಿತ್ರ ಒಂದಷ್ಟು ರಿಲೀಫ್ ಕೊಟ್ಟರೂ ಬೆತ್ತಲೆ ಬೆನ್ನಿನ ಚಿತ್ರಗಳು ಬೇತಾಳದಂತೆ ಕಾಡುತ್ತಲೇ ಇದೆ. [ಸ್ಯಾಂಡಲ್ ವುಡ್ ಅನ್ ಲಕ್ಕಿ ಹುಡ್ಗಿ]


ಇದೀಗ ಅಭಿನಯಿಸುತ್ತಿರುವ 'ತಿಪ್ಪಜ್ಜಿ ಸರ್ಕಲ್' ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಅವರ ಪಾಲಿಗೆ ರಾಜಕೀಯವೂ ಕೂಡಿಬರಲಿಲ್ಲ. ಮದುವೆ ಕೂಡ ನಿಶ್ಚಿತಾರ್ಥಕ್ಕೇ ನಿಂತುಹೋಯಿತು. ಈಗ 'ಕಲ್ಯಾಣಮಸ್ತು' ಚಿತ್ರ ಬಿಡುಗಡೆಯಾಗಲು ಹೊರಟಿದೆ. [ನಿಶ್ಚಿತಾರ್ಥ ಮುರಿದಿದ್ದು ಯಾಕೆ?]

'ಪಟ್ರೆ' ಖ್ಯಾತಿಯ ಅಜಿತ್ ಈ ಚಿತ್ರದ ನಾಯಕ ನಟ. ಆಕ್ಷನ್ ಕಟ್ ಹೇಳಿರುವವರು ಬಿ.ಮಲ್ಲೇಶ್. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಸಹ ನಿರ್ದೇಶಕರೇ ಹೆಣೆದಿದ್ದಾರೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಕಾಲೇಜು, ಕ್ಯಾಂಪಸ್ಸು, ಪ್ರೀತಿ ಪ್ರೇಮ ಪ್ರಣಯ ಎಲ್ಲವೂ ಇದೆ.

ಇದಿಷ್ಟೇ ಅಲ್ಲದೆ ತಾಯಿ, ತಂಗಿ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇದೆಯಂತೆ. ಚೆನ್ನೈ ಮೂಲದ ಭರತ್ ಸಂಗೀತ ಚಿತ್ರಕ್ಕಿದೆ. ರವಿ ಪ್ರಕಾಶ್, ಅನಂತನಾಗ್, ಸಿತಾರ, ಅವಿನಾಶ್, ಮಾಳವಿಕಾ, ಉಮಾಶ್ರೀ ಸೇರಿದಂತೆ ಹಲವು ತಾರಾಬಳಗ ಚಿತ್ರಕ್ಕಿದೆ. ಈ ಚಿತ್ರವಾದರೂ ಪೂಜಾಗಾಂಧಿ ಪಾಲಿಗೆ ಕೈಹಿಡಿಯುತ್ತಾ ನೋಡಬೇಕು.

English summary
Actress Pooja Gandhi much delayed movie 'Kalyanamasthu' audio will be released on 27th November, 2014. Many Sandalwood celebrities are expected to be a part of the audio release function.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada