For Quick Alerts
  ALLOW NOTIFICATIONS  
  For Daily Alerts

  'ಜಪಾನ್ ಹಬ್ಬ'ದಲ್ಲಿ ಹವಾ ಎಬ್ಬಿಸಿದ 'ಬೊಂಬೆ ಹೇಳುತೈತೆ'

  By Bharath Kumar
  |
  ವಿದೇಶದಲ್ಲಿ ಕಮಾಲ್ ಮಾಡ್ತಿದೆ ಪುನೀತ್ 'ಬೊಂಬೆ ಹೇಳುತೈತೆ' ಹಾಡು..! | Filmibeat Kannada

  ಪುನೀತ್ ರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ರಾಜಕುಮಾರ'. ಕನ್ನಡ ಚಿತ್ರರಂಗದಲ್ಲಿ 'ರಾಜಕುಮಾರ' ಸಾರ್ವಕಾಲಿಕ ಹಿಟ್ ಸಿನಿಮಾಗಳ ಸಾಲಿಗೆ ಸೇರಿದೆ.

  ಈ ಚಿತ್ರಕ್ಕಿಂತ ಎರಡು ಪಟ್ಟು ಹಿಟ್ ಆಗಿದ್ದು 'ಬೊಂಬೆ ಹೇಳುತೈತೆ' ಹಾಡು. ಈ ಹಾಡಿಗೆ ಕನ್ನಡ ಕಲಾಭಿಮಾನಿಗಳು ಮಾತ್ರವಲ್ಲ, ಇಡೀ ದೇಶವೇ ಮೆಚ್ಚಿಕೊಳ್ಳುವ ಮಟ್ಟಕ್ಕೆ ಯಶಸ್ಸು ಸಿಕ್ಕಿತ್ತು.

  ಅದಕ್ಕಿಂತ ಇನ್ನೂ ಒಂದು ಹೆಜ್ಜೆ ಹೋಗಿರುವ ಈ ಹಾಡು, ಜಪಾನ್ ಹಬ್ಬದಲ್ಲಿ ಹವಾ ಉಂಟು ಮಾಡಿದೆ. ಹೌದು, 2018ನೇ ಸಾಲಿನ ಜಪಾನ್ ಹಬ್ಬದಲ್ಲಿ 'ಬೊಂಬೆ ಹೇಳುತೈತೆ' ಹಾಡನ್ನ ಜಪಾನ್ ಪ್ರಜೆಯೊಬ್ಬ ತನ್ನ ಕಂಠದಿಂದ ಹಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  'ನಟಸಾರ್ವಭೌಮ'ನಿಗೆ ಜೊತೆಯಾದ ಮಲೆಯಾಳಂ ಬೆಡಗಿ'ನಟಸಾರ್ವಭೌಮ'ನಿಗೆ ಜೊತೆಯಾದ ಮಲೆಯಾಳಂ ಬೆಡಗಿ

  ಇದಕ್ಕು ಮುಂಚೆ ಡಾ ರಾಜ್ ಕುಮಾರ್ ಅವರ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ವಿದೇಶಿಗರನ್ನ ಹೆಚ್ಚು ಗಮನ ಸೆಳೆದಿತ್ತು. ಅನೇಕ ರಾಷ್ಟ್ರಗಳಲ್ಲಿ ಈ ಹಾಡನ್ನ ಅಲ್ಲಿನ ಪ್ರಜೆಗಳು ಹಾಡಿ ಸುದ್ದಿಯಾಗಿದ್ದರು.

  ಅದಾದ ಬಳಿಕ ಈಗ ಮತ್ತೆ ಅದೇ ರೀತಿಯ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಪುನೀರ್ ರಾಜ್ ಕುಮಾರ್ ಹಾಡು. ಇದು ಬರಿ 'ರಾಜಕುಮಾರ' ಚಿತ್ರದ ಯಶಸ್ಸು ಅನ್ನೋದಕ್ಕಿಂತ ಕನ್ನಡ ಚಿತ್ರರಂಗದ ಹಿರಿಮೆ ಎನ್ನಬಹುದು.

  ಪುನೀತ್ 'ಫೇಕ್ ಅಕೌಂಟ್' ಬಗ್ಗೆ ಅಭಿಮಾನಿಗಳಿಂದ ಜಾಗೃತಿಪುನೀತ್ 'ಫೇಕ್ ಅಕೌಂಟ್' ಬಗ್ಗೆ ಅಭಿಮಾನಿಗಳಿಂದ ಜಾಗೃತಿ

  ಸಂತೋಷ್ ಅನಂದ್ ರಾಮ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ವಿ ಹರಿಕಷ್ಣ ಸಂಗೀತ ಸಂಯೋಜನೆ ನೀಡಿದ್ದರು. ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿ ಈ ಅದ್ಭುತವಾದ ಹಾಡು ಮೂಡಿಬಂದಿತ್ತು.

  ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್, ಪ್ರಿಯಾ ಆನಂದ್, ಶರತ್ ಕುಮಾರ್, ಪ್ರಕಾಶ್ ರೈ, ಚಿಕ್ಕಣ್ಣ, ಸಾಧು ಕೋಕಿಲಾ, ರಂಗಾಯಣ ರಘು, ಅಚ್ಯುತ್ ಕುಮಾರ್, ಅನಂತ್ ನಾಗ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದರು. ವಿಜಯ್ ಕಿರಂಗಂದೂರ್ ಅವರ ನಿರ್ಮಾಣ ಮಾಡಿದ್ದರು. ಮಾರ್ಚ್ 24, 2017 ರಂದು ಈ ಸಿನಿಮಾ ತೆರೆಕಂಡಿತ್ತು.

  English summary
  Kannada actor Puneeth rajkumar's bombe heluthaithe song in japan habba 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X