»   » 'ರಾಜಕುಮಾರ'ನ ಹೊಸ ಹಾಡನ್ನ ನೋಡಿ ಕಣ್ಣುತುಂಬಿಕೊಳ್ಳಿ

'ರಾಜಕುಮಾರ'ನ ಹೊಸ ಹಾಡನ್ನ ನೋಡಿ ಕಣ್ಣುತುಂಬಿಕೊಳ್ಳಿ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಕನ್ನಡಿಗರು ಎಂದು ಮರೆಯಲಾಗದಷ್ಟು ಹತ್ತಿರವಾಗಿರುವ ಚಿತ್ರ. ಈ ಸಿನಿಮಾ ಈಗಾಗಲೇ ಕನ್ನಡ ನೆಲದಲ್ಲಿ ಸಾಕಷ್ಟು ದಾಖಲೆ ನಿರ್ಮಿಸಿ, ಬಾಕ್ಸ್ ಆಫೀಸ್ ಪುಡಿ ಮಾಡಿ ಮುಂದೆ ಸಾಗುತ್ತಿದೆ. ಸದ್ಯ, 100ನೇ ದಿನದತ್ತ ಮುನ್ನುಗುತ್ತಿರುವ ಈ ಚಿತ್ರದ ಒಂದು ಹಾಡಿನ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಮಲ್ಟಿಪ್ಲೆಕ್ಸ್ ಗಳಲ್ಲಿ 'ರಾಜಕುಮಾರ' ಆಲ್ ಟೈಮ್ ನಂಬರ್ ಒನ್.!

'ರಾಜಕುಮಾರ' ಸಿನಿಮಾ ಬಿಡುಗಡೆಯ ಬಳಿಕ ಚಿತ್ರದ ಒಂದೊಂದೆ ಹಾಡಿನ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡುತ್ತಿತ್ತು. ಈಗ 'ಸಾಗರದ...'' ಎಂಬ ಸೆಂಟಿಮೆಂಟ್ ಹಾಡಿನ ವಿಡಿಯೋ ಬಿಡುಗಡೆ ಯಾಗಿದೆ. ಅಂದ್ಹಾಗೆ, ಈ ಹಾಡು ಯೂಟ್ಯೂಬ್ ನಲ್ಲಿ ಈಗ ಸಖತ್ ಹಿಟ್ಸ್ ಪಡೆದುಕೊಳ್ಳುತ್ತಿದೆ.

'Raajakumara' Movie New Video Song Out

ಸಿನಿಮಾದ ಒಂದು ಪ್ರಮುಖ ಭಾಗದಲ್ಲಿ ಬರುವ ಈ ಹಾಡನ್ನ ಚಿತ್ರತಂಡ ಗೌಪ್ಯವಾಗಿ ಇಟ್ಟಿತ್ತು. ಸಿನಿಮಾ ನೋಡಿದವರು ಮಾತ್ರ ಈ ಹಾಡನ್ನು ಕಣ್ಣುತುಂಬಿಕೊಂಡಿದ್ದರು. ವಿ.ಹರಿಕೃಷ್ಣ ಸಂಗೀತ, ಗೌಸ್ ಪೀರ್ ಸಾಹಿತ್ಯ, ಸೋನು ನಿಗಮ್ ಕಂಠದಲ್ಲಿ ಈ ಹಾಡು ಮೂಡಿ ಬಂದಿತ್ತು. ಈ ಮೂಲಕ 'ಬೋಂಬೆ ಹೇಳುತೈತೆ' ಹಾಡನ್ನು ಬಿಟ್ಟು ಎಲ್ಲ ಹಾಡಿನ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

'Raajakumara' Movie New Video Song Out

'ರಾಜಕುಮಾರ' ಚಿತ್ರದ ಈ ಹಾಡನ್ನು ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
Puneeth Rajkumar Starrer 'Raajakumara' Movie New Video Song Out. The Movie Directed By Santhosh Ananddram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada