Don't Miss!
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪುಷ್ಪವತಿ' ಹುಕ್ ಸ್ಟೆಪ್ ಚಾಲೆಂಜ್: ರಚ್ಚು, ನಿಮಿಕಾ ರೀತಿ ಡ್ಯಾನ್ಸ್ ಮಾಡಿ ರಂಗೇರಿಸಿದ ಫ್ಯಾನ್ಸ್
'ಕ್ರಾಂತಿ' ಚಿತ್ರದ 'ಶೇಕ್ ಇಟ್ ಪುಷ್ಪವತಿ' ಸಾಂಗ್ ನಿಧಾನವಾಗಿ ಸದ್ದು ಮಾಡಲು ಶುರು ಮಾಡಿದೆ. ಪಾರ್ಟಿ ನಂಬರ್‌ಗೆ ನಿಮಿಕಾ ರತ್ನಾಕರ್ ಜೊತೆ ನಟ ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಇದಿಗ 'ಪುಷ್ಪವತಿ' ಹುಕ್ ಸ್ಟೆಪ್ ಚಾಲೆಂಜ್ ಶುರುವಾಗಿದ್ದು, ಅಭಿಮಾನಿಗಳು 'ಶೇಕ್ ಇಟ್ ಪುಷ್ಪವತಿ' ಎಂದು ಕುಣಿದು ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
ವಿ. ಹರಿಕೃಷ್ಣ ಸಂಗೀತ ನೀಡಿರುವ 'ಪುಷ್ಪವತಿ' ಸಾಂಗ್‌ಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ಸ್ವತಃ ಹರಿಕೃಷ್ಣ ದನಿಯಾಗಿದ್ದು ಸಖತ್ ಕಿಕ್ ಕೊಡ್ತಿದೆ. ತೆಲುಗಿನ ಗಣೇಶ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಮೂಡಿ ಬಂದಿದೆ. ದರ್ಶನ್ ಅಭಿಮಾನಿಗಳು ರಿಪೀಟ್ ಮೋಡ್‌ನಲ್ಲಿ ಸಾಂಗ್ ಕೇಳಿ ಎಂಜಾಯ್ ಮಾಡ್ತಿದೆ. ಕೇಳ್ತಾ ಕೇಳ್ತಾ ಮೈ ಕುಣಿಸುತ್ತಿದ್ದಾರೆ. ಇದೀಗ ಚಿತ್ರದ ನಾಯಕಿ ರಚಿತಾ ರಾಮ್ ಹಾಗೂ ಹಾಡಿನಲ್ಲಿ ಕುಣಿದಿರುವ ನಿಮಿಕಾ ರತ್ನಾಕರ್ 'ಪುಷ್ಪವತಿ' ಹುಕ್ ಸ್ಟೆಪ್ ಚಾಲೆಂಜ್ ಶುರು ಮಾಡಿದ್ದಾರೆ.
ಪಕ್ಕಾ
ಪಾರ್ಟಿ
ನಂಬರ್:
'ಶೇಕ್
ಇಟ್
ಪುಷ್ಪವತಿ'
ಎಂದು
ಕುಣಿದು
ಅಭಿಮಾನಿಗಳನ್ನು
ಕುಣಿಸಿದ
ದರ್ಶನ್
ಇಂತಹ ಬಿಂದಾಸ್ ಸಾಂಗ್‌ಗಳು ಬಂದಾಗ ಹುಕ್ ಸ್ಟೆಪ್ ಚಾಲೆಂಜ್ ಸಾಮಾನ್ಯ. ಈ ಹಿಂದೆ 'ಬಸಣ್ಣ ಬಾ' ಹುಕ್ ಸ್ಟೆಪ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ 'ಶೇಕ್ ಇಟ್ ಪುಷ್ಪವತಿ' ಸರದಿ. ಸೋಶಿಯಲ್ ಮೀಡಿಯಾದಲ್ಲೀಗ 'ಪುಷ್ಪವತಿ' ಹವಾ ಜೋರಾಗಿದೆ.

'ಪುಷ್ಪವತಿ' ಹುಕ್ ಸ್ಟೆಪ್ ಚಾಲೆಂಜ್
ಸಾಂಗ್ ಶೂಟಿಂಗ್ ಸೆಟ್‌ನಲ್ಲೇ ನಟಿ ರಚಿತಾ ಹಾಗೂ ನಿಮಿಕಾ 'ಪುಷ್ಪವತಿ' ಹುಕ್ ಸ್ಟೆಪ್ ಟ್ರೈ ಮಾಡಿದ್ದಾರೆ. ಅದರ ಸಣ್ಣ ಝಲಕ್ ಅನ್ನು ಇಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಚ್ಚು ರೀಲ್ ವಿಡಿಯೋ ಶೇರ್ ಮಾಡಿ ರೀಲ್ ವಿತ್ ಪುಷ್ಪವತಿ ಎಂದು ಬರೆದುಕೊಂಡಿದ್ದಾರೆ. ಇನ್ನು ನಿಮಿಕಾ 'ಪುಷ್ಪವತಿ ಹುಕ್ ಸ್ಟೆಪ್ ಚಾಲೆಂಜ್' ಎಂದು ಬರೆದು ವಿಡಿಯೋ ತೇಲಿ ಬಿಟ್ಟಿದ್ದಾರೆ. ಇದೀಗ ಅಭಿಮಾನಿಗಳು ಇದನ್ನು ಫಾಲೋ ಮಾಡ್ತಿದ್ದಾರೆ.

24 ಗಂಟೆಗಳಲ್ಲಿ 45 ಲಕ್ಷ ವೀವ್ಸ್
'ರಾಮಧಾನ್ಯ' ಹಾಗೂ 'ಅಬ್ಬರ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ನಿಮಿಕಾ ರತ್ನಾಕರ್ ಹಾಡಿಗೆ ಬಿಂದಾಸ್ ಆಗಿ ಕುಣಿದಿದ್ದಾರೆ. 'ಪುಷ್ಪವತಿ' ಸಾಂಗ್ ಅಭಿಮಾನಿಗಳ ಮನಗೆದ್ದಿದೆ. ಯೂಟ್ಯೂಬ್ ಅಪ್‌ಲೋಡ್ ಆದ 24 ಗಂಟೆಗಳಲ್ಲಿ 4.5 ಮಿಲಿಯನ್ ವೀವ್ಸ್ ಸಾಧಿಸಿ ಸದ್ದು ಮಾಡ್ತಿದೆ. ಇನ್ನು ಎರಡೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಕೂಡ ಸಿಕ್ಕಿದೆ. 'ಕ್ರಾಂತಿ' ಸಿನಿಮಾ ಆಲ್ಬಮ್‌ನ 3 ಸಾಂಗ್ಸ್ ಹಿಟ್ ಆದಂತಾಗಿದೆ.

ಹುಬ್ಬಳ್ಳಿಯಲ್ಲಿ ಸಾಂಗ್ ರಿಲೀಸ್
ಭಾನುವಾರ ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲೇ ಹುಬ್ಬಳ್ಳಿಯಲ್ಲಿ 'ಶೇಕ್ ಇಟ್ ಪುಷ್ಪವತಿ' ರಿಲೀಸ್ ಮಾಡಲಾಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ದರ್ಶನ್ ಅವರ ಅಭಿಮಾನಿಗಳು ಈ ಸಾಂಗ್ ಲೋಕಾಪರ್ಣೆ ಮಾಡಿದ್ದು ವಿಶೇಷ. ದರ್ಶನ್ ಅಪ್ಪಟ ಅಭಿಮಾನಿಗಳಾದ ಹುಡುಗ ಹುಡುಗಿ ಅಂದೇ ಹೊಸ ಬಾಳಿಗೆ ಕಾಲಿಟ್ಟಿದ್ದರು. ಹುಬ್ಬಳ್ಳಿಗೆ ಮಧ್ಯಾಹ್ನವೇ ಭೇಟಿ ನೀಡಿದ್ದ ದರ್ಶನ್ ಜೋಡಿಗೆ ಶುಭ ಹಾರೈಸಿದ್ದರು. ಸಂಜೆ ದರ್ಶನ್ ವೇದಿಕೆ ಮೇಲೆ ಅವರಿಂದಲೇ 'ಪುಷ್ಪವತಿ' ಸಾಂಗ್ ರಿಲೀಸ್ ಮಾಡಿಸಿದ್ದರು.

'ಕ್ರಾಂತಿ' ರಿಲೀಸ್‌ಗೆ 1 ತಿಂಗಳು ಬಾಕಿ
ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ ಅಕ್ಷರ ಕ್ರಾಂತಿ ಮಾಡಲು ನಟ ದರ್ಶನ್ ಬರ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಇನ್ನೊಂದು ತಿಂಗಳು ಮಾತ್ರ ಬಾಕಿಯಿದೆ. ಬೆಂಗಳೂರಿನಲ್ಲೇ ಸಿನಿಮಾ ಟ್ರೈಲರ್ ಲಾಂಚ್ ಮಾಡುವುದಾಗಿ ದರ್ಶನ್ ಘೋಷಿಸಿದ್ದಾರೆ. ಅಭಿಮಾನಿಗಳು ಕೇಳುವ ಎಲ್ಲಾ ಕಮರ್ಷಿಯಲ್ ಅಂಶಗಳ ಜೊತೆಗೆ ಒಂದು ಒಳ್ಳೆಯ ಸಂದೇಶ ಇರುವ ಚಿತ್ರ 'ಕ್ರಾಂತಿ'. ಜನವರಿ 26ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ತೆರೆಗಪ್ಪಳಿಸಲಿದೆ.