»   » 'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ

'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ

Posted By:
Subscribe to Filmibeat Kannada

'ರಾಜ್ ವಿಷ್ಣು' ಸಿನಿಮಾದ ಸೌಂಡ್ ದಿನೇ ದಿನೇ ಜೋರಾಗುತ್ತಿದೆ. ಈ ಹಿಂದೆ ರಿಲೀಸ್ ಆಗಿದ್ದ ಟ್ರೇಲರ್ ಪ್ರೇಕ್ಷಕರ ಮನ ಗೆದ್ದಿತ್ತು. ಈಗ ಸಿನಿಮಾದ ಹಾಡೊಂದು ಬಿಡುಗಡೆಯಾಗಿದ್ದು, ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ.

ಅಧ್ಯಕ್ಷ ಶರಣ್ ಗಾಯನಕ್ಕೆ ಈಗ ಸಖತ್ ಡಿಮ್ಯಾಂಡ್

ಅಂದಹಾಗೆ, 'ರಾಜ್ ವಿಷ್ಣು' ಸಿನಿಮಾದ ಟೈಟಲ್ ಸಾಂಗ್ ಇದಾಗಿದೆ. ಅರ್ಜುನ್ ಜನ್ಯ ಸಂಗೀತ, ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಡಿನಲ್ಲಿದೆ. ವಿಜಯ ಪ್ರಕಾಶ್ ಕಂಠದಲ್ಲಿ ಬಂದ ಈ ಹಾಡು ಕೇಳುವುದಕ್ಕೆ ಮತ್ತು ನೋಡೊದಕ್ಕೆ ಎರಡಕ್ಕೂ ಸೂಪರ್ ಆಗಿದೆ. 'ರಾಜ್ ವಿಷ್ಣು' ಅವರ ಗೆಟಪ್ ಗಳಲ್ಲಿ ಶರಣ್ ಮತ್ತು ಚಿಕ್ಕಣ್ಣ ಮಿಂಚಿದ್ದಾರೆ.

'ರಾಜ್-ವಿಷ್ಣು' ಜೋಡಿ ಬಾಯಿಗೆ ಮತ್ತೆರಡು ಲಡ್ಡು ಬಂದು ಬಿತ್ತು.!

'Raj Vishnu' movie title song is out.

ರಾಜ್ ಕುಮಾರ್ ಅಭಿಮಾನದ ಬಗ್ಗೆ ಶರಣ್ ಹೇಳುತ್ತಾ ಹೊದರೆ, ವಿಷ್ಣು ಅಭಿಮಾನದ ಬಗ್ಗೆ ಚಿಕ್ಕಣ್ಣ ಹಾಡಿ ಹೊಗಳಿದ್ದಾರೆ. ಹಾಡಿನಲ್ಲಿ ರಾಜ್ ಮತ್ತು ವಿಷ್ಣು ಅವರ ಸಿನಿಮಾಗಳ ಹೆಸರನ್ನು ಸಹ ಬಳಸಿಕೊಳ್ಳಲಾಗಿದೆ. ಹಾಡು ನೋಡಿದ ತಕ್ಷಣ 'ಅಧ್ಯಕ್ಷ' ಸಿನಿಮಾದ ಟೈಟಲ್ ಸಾಂಗ್ ನೆನಪಾಗಿ ಬಿಡುತ್ತೆ. ಕೆ.ಮಾದೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ರಾಮು ಫಿಲ್ಮ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. 'ರಾಜ್ ವಿಷ್ಣು' ಚಿತ್ರದ ಈ ಹಾಡು ನೋಡುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.

English summary
Actor Sharan starrer Kannada Movie 'Raj Vishnu' title song is out. and it looks Dashing. Watch song here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada