»   » ರಾಜನ್ ನಾಗೇಂದ್ರ ಜೋಡಿಗೆ ರೋಟರಿ ಕ್ಲಬ್ ಗೌರವ

ರಾಜನ್ ನಾಗೇಂದ್ರ ಜೋಡಿಗೆ ರೋಟರಿ ಕ್ಲಬ್ ಗೌರವ

Posted By:
Subscribe to Filmibeat Kannada
Rajan Nagendra
ಕನ್ನಡ ಚಲನಚಿತ್ರ ಸಂಗೀತ ಲೋಕದಲ್ಲಿ ಅನನ್ಯ ಸಾಧನೆಗೈದ ರಾಜನ್ - ನಾಗೇಂದ್ರ ಜೋಡಿಗೆ ರೋಟರಿ ಸಂಸ್ಥೆ ವೊಕೇಷನಲ್ ಎಕ್ಸಲೆನ್ಸಿ ಅವಾರ್ಡ್ ಘೋಷಿಸಿದೆ. ನಾಗೇಂದ್ರ ಅವರಿಗೆ ಮರಣೋತ್ತರವಾಗಿ ಈ ಪುರಸ್ಕಾರ ಸಲ್ಲಿಸಲಾಗುತ್ತಿದೆ. ರಾಜನ್ ಖುದ್ದು ಹಾಜರಿದ್ದು ಪ್ರಶಸ್ತಿ ಭಾಜನರಾಗುವರು.

2013 ಫೆಬ್ರವರಿ ನಾಲ್ಕರ ಸೋಮವಾರ ಸಂಜೆ ಆರು ಗಂಟೆಗೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನದೊಂದಿಗೆ ರಾಜನ್ - ನಾಗೇಂದ್ರ ಜೋಡಿ ಸಂಗೀತ ನೀಡಿರುವ ಕನ್ನಡ ಚಿತ್ರಗಳ ಆಯ್ದ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತಿದೆ.

'ನಾ ನಿನ್ನ ಮರೆಯಲಾರೆ' ಹೆಸರಿನ ಈ ಕಾರ್ಯಕ್ರಮಕ್ಕೆ "ಗುರು ಸೌಂಡ್ ಅಂಡ್ ಮ್ಯೂಸಿಕ್" ಸಹಕಾರವಿದೆ. ಖ್ಯಾತ ಗಾಯಕರು ಸುಶ್ರಾವ್ಯ ಹಾಡುಗಳಿಗೆ ದನಿಯಾಗಲಿದ್ದಾರೆ. ಕನ್ನಡ ಚಿತ್ರರಂಗದ ಹಿರಿ ಕಿರಿಯ ಕಲಾವಿದರು, ತಂತ್ರಜ್ಞರು, ಸಂಗೀತ ನಿರ್ದೇಶಕರು ಹಾಗೂ ಗಾಯಕ-ಗಾಯಕಿಯರು ಪಾಲ್ಗೊಳ್ಳಲ್ಲಿದ್ದಾರೆ.

ಈ ಹಬ್ಬದಲ್ಲಿ ಟಿಕೇಟ್ ಮೂಲಕ ಸಂಗ್ರಹವಾಗುವ ಮೊತ್ತ ಗ್ರಾಮೀಣ ಶಾಲಾ ಕೊಠಡಿಗಳ ಮೇಜು-ಕುರ್ಚಿಗಳಿಗೆ, ಮಕ್ಕಳ ಕ್ರೀಡಾ ಸಾಮಗ್ರಿಗಳಿಗೆ, ಸೋಲಾರ್ ವಿದ್ಯುತ್ ಅಳವಡಿಕೆಗೆ ವಿನಿಯೋಗವಾಗಲಿದೆ.

ಹಿಂದೆ ಈ ಪುರಸ್ಕಾರಕ್ಕೆ ಡಾ. ರಾಜಕುಮಾರ್, ನಾಗತಿಹಳ್ಳಿ ಚಂದ್ರಶೇಖರ್, ವಿದ್ಯಾಶಂಕರ್, ಡಾ. ಶ್ರೀನಿವಾಸನ್ ಮೊದಲಾದ ಹಿರಿಯರು ಭಾಜನರಾಗಿದರೆಂಬುದು ದಾಖಲಾರ್ಹ ಎಂದು ಕಾರ್ಯಕ್ರಮದ ಸಾರಥ್ಯವಹಿಸಿರುವ ರೋಟರಿ ಸಂಸ್ಥೆಯ ವಕ್ತಾರ ರೊಟೇರಿಯನ್ ಟಿ.ಆರ್.ಸೇತುಸುಂದರ್ ತಿಳಿಸಿದ್ದಾರೆ. ರೋಟರಿ ಸಂಸ್ಥೆ ಕಳೆದ ನೂರು ವರ್ಷಗಳಿಂದ ಸತತವಾಗಿ ಜನಹಿತ ಕಾರ್ಯಕ್ರಮಗಳನ್ನು 206ದೇಶಗಳಲ್ಲಿ ಹಮ್ಮಿಕೊಂಡಿದೆ ಎಂಬುದು ಉಲ್ಲೇಖಾರ್ಹ ಎಂದು ಅವರು ಹೇಳಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Rajan and has been conferred a Vocational Excellence Award for his services to Indian music by the Rotary Club. Rajan-Nagendra has given hundreds of melodious tunes for 375 films in Kannada.
Please Wait while comments are loading...