»   » ಸಂಡೆ ಸ್ಪೆಷಲ್ : ಕಾಗದದ ದೋಣಿಯಲ್ಲಿ ಕೂತು ಈ ಹಾಡು ಗುನುಗಿ!

ಸಂಡೆ ಸ್ಪೆಷಲ್ : ಕಾಗದದ ದೋಣಿಯಲ್ಲಿ ಕೂತು ಈ ಹಾಡು ಗುನುಗಿ!

Posted By:
Subscribe to Filmibeat Kannada

ಕಾಗದದ ದೋಣಿಯಲ್ಲಿ
ನಾ ಕೂರುವಂಥ ಹೊತ್ತಾಯಿತೇ...
ಸಿಕ್ಕಿತೇ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ, ಇನ್ನೊಂದೇ ವಿಸ್ಮಯ ತೋರಿ..

ರಕ್ಷಿತ್ ಶೆಟ್ಟಿ ಅವರು ನಟಿಸಿರುವ 'ಕಿರಿಕ್ ಪಾರ್ಟಿ' ಚಿತ್ರದ ಈ ಹಾಡು ಭಾನುವಾರದ ರಿಲ್ಯಾಕ್ಸ್ ಮೂಡ್ ನಲ್ಲಿ ಗುನುಗಲು ಅಡ್ಡಿಯಿಲ್ಲ. ಹಾಗೆ ನೋಡಿದರೆ ಈ ವಿಸ್ತೃತ ಮ್ಯೂಸಿಕ್ ಆಲ್ಬಂ ಹೊರಬಿಟ್ಟು ಒಂದು ವಾರದ ಕಳೆದಿಲ್ಲ. ಆಗಲೇ ಸಂಗೀತಪ್ರೇಮಿಗಳ ಮನಸ್ಸು, ಹೃದಯ ತಟ್ಟಿದೆ. ಯೂಟ್ಯೂಬಿನಲ್ಲಿ 12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 17 ಸಾವಿರಕ್ಕೂ ಅಧಿಕ ಲೈಕ್ಸ್, 252 ಬಾರಿ ಅನ್ ಲೈಕ್ ಆಗಿದೆ.

Rakshit Shetty Kirik Party Kaagadada Doniyalli - Video Song Lyrics

ಅಕ್ಕರೆಯ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಹೊಸೆದಿರುವ ಪದಗಳು, ಅಜನೀಶ್ ಲೋಕನಾಥ್ ಅವರ ಸಂಯೋಜನೆ, ವಾಸಿ ವೈಭವ್ ಅವರ ಹಾಡುಗಾರಿಕೆ ಜೊತೆಗೆ ನಿರ್ದೇಶಕ ರಿಷಬ್ ಶೆಟ್ಟಿ + ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ಕಲ್ಪನೆಗೆ ತಕ್ಕಂತೆ ಕೆಮರಾ ಹಿಡಿದ ಕರಮ್ ಚಾವ್ಲಾ ಅವರನ್ನು ಸ್ಮರಿಸಲೇ ಬೇಕು.

ಚಿತ್ರದ ಕ್ಲೈಮ್ಯಾಕ್ಸ್ ಗೂ ಮುನ್ನ ಬುಲೆಟ್ ಏರಿ ನಾಯಕ ತನ್ನ ನೆಚ್ಚಿನ ತಾಣಗಳಲ್ಲಿ ಸುತ್ತಾಡುತ್ತಾ ರೋಡ್ ಟ್ರಿಪ್ ಹೊಡೆಯುವ ದೃಶ್ಯಗಳು ತಕ್ಷಣಕ್ಕೆ ಎಲ್ಲರಿಗೂ ತಟ್ಟುತ್ತದೆ. ಹಾಡಿನ ಸಾಲಿಗೆ ತಕ್ಕಂತೆ ಲೊಕೇಷನ್ ತೋರಿಸಲಾಗಿದೆ.

ಒಂದೆರಡು ಶಾಟ್ ಶೂಟ್ ಮಾಡೋಕೆ ಗೋವಾ ರಸ್ತೆಯಲ್ಲಿ ಬೈಕ್ ಓಡಿಸಿದ್ರಾ ಎಂದೆನಿಸಿದರೂ, ಹಾಡಿನಲ್ಲಿ ಕಂಟ್ಯೂನಿಟಿ ಇದೆ. ಕಾಯ್ಕಿಣಿಯವರ ಸಾಲುಗಳಿಗೆ ಸೆಲ್ಯೂಟ್ ಹೇಳುವ ಸಾಹಿತ್ಯ ಪ್ರೇಮಿಗಳು, ಅಜನೀಶ್ ಸಂಗೀತವನ್ನು ಮೆಚ್ಚಿದ್ದಾರೆ.

ಆದರೆ, 1.07 ರಂತೆ ಕೇಳಿಸುವ ಹಿನ್ನೆಲೆ ನಾದ, ಇನ್ನೊಂದು ಆಲ್ಬಂನಲ್ಲಿ ಕೇಳಿದಂತೆ ಇದೆ ಎಂದು ಪತ್ರಕರ್ತ ಶ್ಯಾಮ್ ಪ್ರಸಾದ್ (@ShyamSPrasad) ಟ್ವೀಟ್ ಮಾಡಿದ್ದರು. ಚಂದನವನದಲ್ಲಿ ಸ್ಪೂರ್ತಿ ಪಡೆಯುವವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಈಗ ಭಾರಿ ಚರ್ಚೆಯಂತೂ ಆಗುತ್ತಿದೆ.

Rakshit Shetty Kirik Party Kaagadada Doniyalli - Video Song Lyrics

ಕಾಗದದ ದೋಣಿಯಲ್ಲಿ
ನಾ ಕೂರುವಂಥ ಹೊತ್ತಾಯಿತೇ...
ಕಾಣಿಸದ ಹನಿಯೊಂದು
ಕಣ್ಣಲ್ಲೇ ಕೂತು ಮುತ್ತಾಯಿತೇ.

ಹಗುರಾಗಿತೇನೋ ನನ್ನದೆಯ ಭಾರ
ಕಂಡಿತೇನೋ ತಂಪಾದ ತೀರ

ಸಿಕ್ಕಿತೇ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ, ಇನ್ನೊಂದೇ ವಿಸ್ಮಯ ತೋರಿ

ಹಾದಿಯಲ್ಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲಿದೆ
ಹಾಡದಿರೋ ಸಾವಿರ ಪದಗಳ ಮೂಕ ಸೇತುವೆ ಕಣ್ ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನೆಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ
ಮನಸಾಗಿತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ

ಸಿಕ್ಕಿತೇ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ, ಇನ್ನೊಂದೇ ವಿಸ್ಮಯ ತೋರಿ...

English summary
Rakshit Shetty starrer Kirik Party film' Kaagadada Doniyalli - Video Song is huge hit on Youtube. This song penned by Jayanth Kaikini and music composed by Ajaneesh Kaikini. Here is song lyrics.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X