Just In
Don't Miss!
- Lifestyle
ರಾತ್ರಿ ವೇಳೆ ಬೇಳೆಕಾಳು ತಿನ್ನಬೇಕೋ ಬೇಡವೋ, ಆಯುರ್ವೇದ ಏನು ಹೇಳುತ್ತದೆ?
- Finance
ಮಾರ್ಚ್ 04ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Sports
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್, Live ಸ್ಕೋರ್, ಪ್ಲೇಯಿಂಗ್ XI
- News
ಮಗಳ ಶಿರಚ್ಛೇದ ಮಾಡಿ, ರುಂಡದೊಂದಿಗೆ ಪೊಲೀಸರಿಗೆ ಶರಣಾದ ತಂದೆ
- Automobiles
ಕಿಗರ್ ಕಾರು ವಿತರಣೆ ಆರಂಭವಾದ ಮೊದಲ ದಿನವೇ 1,100 ಯುನಿಟ್ ಮಾರಾಟ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಲಿವುಡ್ ಗೆ ಕಾಲಿಟ್ಟ 'ಕೆಜಿಎಫ್' ಸಂಗೀತ ನಿರ್ದೇಶಕ: ಪೋಸ್ಟರ್ ನಲ್ಲಿಲ್ಲ ರವಿ ಬಸ್ರೂರ್ ಹೆಸರು, ಅಭಿಮಾನಿಗಳ ಬೇಸರ
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದ ಉಗ್ರಂ ಸಿನಿಮಾಗೆ ಸಂಗೀತ ಸಂಯೋಜನ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸಂಗೀತ ನಿರ್ದೇಶಕ ರವಿ ಬಸ್ರೂರ್ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕೆಜಿಎಫ್ ಮೂಲಕ ಇಡೀ ದೇಶದ ಗಮನ ಸೆಳೆದಿರುವ ರವಿ ಬಸ್ರೂರ್ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಸಂಗೀತ ಸುಧೆ ಹರಿಸುತ್ತಿದ್ದ ರವಿ ಬಸ್ರೂರ್ ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಹೌದು ರವಿ ಬಸ್ರೂರ್ ಮೊದಲ ಬಾರಿಗೆ ಹಿಂದಿ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿರುವ ರವಿ ಅವರ ಮೊದಲ ಹಿಂದಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗೆಲುವಿನ ಬೆನ್ನತ್ತಿ ಬಂದ ರವಿ ಬಸ್ರೂರ್ಗೆ ಸಕ್ಸಸ್ ನೀಡಿದ ಐದು ಚಿತ್ರಗಳು

ಯುಧ್ರಾ ಸಿನಿಮಾಗೆ ರವಿ ಬಸ್ರೂರ್ ಸಂಗೀತ
'ಗಲ್ಲಿ ಬಾಯ್' ಸಿನಿಮಾ ಮೂಲಕ ದೇಶದ ಗಮನ ಸೆಳೆದಿದ್ದ ನಟ ಸಿದ್ಧಾರ್ಥ್ ಚತುರ್ವೇದಿ ಮತ್ತು 'ಮಾಸ್ಟರ್' ಸಿನಿಮಾದ ನಾಯಕಿ ಮಾಳವಿಕಾ ಮೋಹನ್ ನಟನೆಯ 'ಯುಧ್ರಾ' ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಈ ಮೂಲಕ ಕೆಜಿಎಫ್ ಸಂಗೀತ ನಿರ್ದೇಶಕ ಬಾಲಿವುಡ್ ಪ್ರೇಕ್ಷರನ್ನು ರಂಜಿಸಲು ಮುಂದಾಗಿದ್ದಾರೆ.

ಫರಾನ್ ಅಖ್ತಾರ ನಿರ್ಮಾಣ, ರವಿ ಉದಯವರ್ ನಿರ್ದೇಶನ
ಯುಧ್ರಾ ಸಿನಿಮಾ ಬಾಲಿವುಡ್ ನಟ ಫರಾನ್ ಅಖ್ತಾರ್ ಮತ್ತು ರಿತೇಶ್ ಸಿಧ್ವಾನಿ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಚಿತ್ರಕ್ಕೆ ದಿವಂಗತ ನಟಿ ಶ್ರಿದೇವಿ ನಟನೆಯ 'ಮಾಮ್' ಸಿನಿಮಾದ ನಿರ್ದೇಶಕ ರವಿ ಉದಯವರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಟೀಸರ್ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ಯುಧ್ರಾ ಮುಂದಿನ ವರ್ಷ ತೆರೆಗೆ ಬರುತ್ತಿದೆ.
ಸ್ನೇಹಿತನ 'ಕನಸನ್ನು' ಲೋಕಾರ್ಪಣೆ ಮಾಡಿದ ಪ್ರಶಾಂತ್ ನೀಲ್

2021 ಸಮ್ಮರ್ ಗೆ ರಿಲೀಸ್
ಆಕರ್ಷಕವಾಗಿರುವ ಟೀಸರ್ ನಲ್ಲಿ ಸಿದ್ಧಾರ್ಥ್ ಮತ್ತು ಮಾಳವಿಕಾ ಸಿನಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದಾರೆ. ಬಹು ನಿರೀಕ್ಷೆಯ ಸಿನಿಮಾ ಮುಂದಿನ ವರ್ಷ ಬೇಸಿಗೆಯಲ್ಲಿ ರಿಲೀಸ್ ಆಗುತ್ತಿದೆ. ಬಾಲಿವುಡ್ ಸಿನಿಮಾವಾದರೂ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿರುವುದರಿಂದ ಕನ್ನಡಿಗರು ವಿಶೇಷವಾಗಿದೆ. ಕೆಜಿಎಫ್ ಸಂಗೀತ ಮಾಂತ್ರಿಕನ ಮೊದಲ ಹಿಂದಿ ಸಿನಿಮಾದ ಹಾಡುಗಳು ಹೇಗಿರಲಿದೆ ಎನ್ನುವ ಕುತೂಹಲ ಕನ್ನಡಿಗರಲ್ಲಿ ಹೆಚ್ಚಾಗಿದೆ.

ಪೋಸ್ಟರ್ ನಲ್ಲಿ ಇಲ್ಲ ರವಿ ಬಸ್ರೂರ್ ಹೆಸರು
ಅಂದಹಾಗೆ ರವಿ ಬಸ್ರೂರ್ ಅವರ ಮೊದಲ ಹಿಂದಿ ಸಿನಿಮಾದ ಪೋಸ್ಟರ್ ನಲ್ಲಿ ಅವರ ಹೆಸರೇ ಇಲ್ಲ. ಕೆಜಿಎಫ್ ಮೂಲಕ ದೇಶದ ಗಮನ ಸೆಳೆದಿರುವ ಸಂಗೀತ ನಿರ್ದೇಶಕನ ಹೆಸರು ಪೋಸ್ಟರ್ ನಲ್ಲಿ ಮಿಸ್ ಆಗಿರುವುದಕ್ಕೆ ಕನ್ನಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ ನಿಮ್ಮ ಉತ್ತಮ ಕೆಲಸ, ನಿಮ್ಮ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಲಿದೆ ಎಂದು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ಸಲಾರ್ ಸಿನಿಮಾಗೆ ಸಂಗೀತ ನಿರ್ದೇಶನ
ರವಿ ಬಸ್ರೂರ್ ಸದ್ಯ ಬಹು ನಿರೀಕ್ಷೆಯ ಸಲಾರ್ ಸಿನಿಮಾದ ಸಂಗೀತ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನಲ್ಲಿ ಬರುತ್ತಿರುವ ಇಂಡಿಯನ್ ಸಿನಿಮಾ ಸಲಾರ್ ಗೆ ರವಿ ಬಸ್ರೂರ್ ಎಂಟ್ರಿ ಕೊಟ್ಟಿದ್ದಾರೆ. ರವಿ ಬಸ್ರೂರ್ ಈಗಾಗಲೇ ಕನ್ನಡದ ಜೊತೆಗೆ ತುಳು, ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.