For Quick Alerts
  ALLOW NOTIFICATIONS  
  For Daily Alerts

  'ಕಾಂತಾರ'ದ 'ವರಹ ರೂಪಂ' ಹಾಡು ಕದ್ದಿದ್ದು: ಮಲಯಾಳಂ ಸಾಂಗ್ ಸಾಕ್ಷಿ ಎಂದ ನೆಟ್ಟಿಗರು!

  |

  ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಎಲ್ಲೆಡೆ ಬೇಜಾನ್ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಮಾಡುತ್ತಿರೋ ಸದ್ದಿಗೆ ದಕ್ಷಿಣ ಭಾರತ ಅಷ್ಟೇ ಅಲ್ಲ. ಇಡೀ ದೇಶವೇ ಮೆಚ್ಚುಗೆ ಸೂಚಿಸಿದೆ. ಎಲ್ಲರ ಬಾಯಲ್ಲೂ ಬರೀ 'ಕಾಂತಾರ'ನೇ ಕೇಳಿಸುತ್ತಿದೆ.

  'ಕಾಂತಾರ' ರಿಲೀಸ್ ಆಗಿ ಎರಡು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆದರೂ ಇನ್ನೂ ಕೆಲವರಿಗೆ ಟಿಕೆಟ್ ಸಿಗುತ್ತಿಲ್ಲ. ಆ ಮಟ್ಟಿಗೆ ಸಿನಿಮಾ ಸೌಂಡ್ ಮಾಡುತ್ತಿದೆ. ಇದೇ ವೇಳೆ ಬೇರೆ ಬೇರೆ ಭಾಷೆಗಳಲ್ಲೂ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದೆ.

  ಹಿಂದಿ, ತೆಲುಗಿನಲ್ಲಿ 'ಕಾಂತಾರ' ಟ್ರೈಲರ್: ಹೇಗಿದೆ ವೀವ್ಸ್-ಟ್ರೆಂಡ್?ಹಿಂದಿ, ತೆಲುಗಿನಲ್ಲಿ 'ಕಾಂತಾರ' ಟ್ರೈಲರ್: ಹೇಗಿದೆ ವೀವ್ಸ್-ಟ್ರೆಂಡ್?

  ಈ ಹೊತ್ತಲ್ಲೇ 'ಕಾಂತಾರ' ಸಿನಿಮಾ ಮೇಲೆ ಅಪವಾದವೊಂದು ಎದುರಾಗಿದೆ. ನೆಟ್ಟಿಗರು 'ಕಾಂತಾರ' ಸಿನಿಮಾದ 'ವರಹ ರೂಪಂ' ಹಾಡನ್ನು ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಸಾಕ್ಷಿಯನ್ನು ಹುಡುಕಿ ತಂದಿದ್ದಾರೆ. ಅಷ್ಟಕ್ಕೂ ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್ ಹಾಡು ಕದ್ದಿದ್ದಾರಾ? ನೆಟ್ಟಿ ಕೊಟ್ಟಿರೋ ಸಾಕ್ಷಿ ಯಾವುದು? ಇಂತಹದ್ದೇ ಒಂದಿಷ್ಟು ವಿಷಯಗಳನ್ನು ತಿಳಿಯಲು ಮುಂದೆ ಓದಿ.

  'ಕಾಂತಾರ'ದ ಈ ಹಾಡು ಕಾಪಿನಾ?

  'ಕಾಂತಾರ'ದ ಈ ಹಾಡು ಕಾಪಿನಾ?

  ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ'ದ ಹೈಲೈಟ್‌ಗಳಲ್ಲೊಂದು ಸಂಗೀತ. ಅಜನೀಶ್ ಬಿ ಲೋಕನಾಥ್ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಜನರ ಮೆಚ್ಚುಗೆ ಗಳಿಸಿವೆ. ಅದರಲ್ಲೂ 'ವರಹ ರೂಪಂ' ಹಾಡು ಸಿನಿಮಾದ ಜೀವಾಳ. ರಿಷಬ್ ಶೆಟ್ಟಿ ಅಭಿನಯದ ಹಾಗೂ 'ವರಹ ರೂಪಂ' ಇವೆರಡೂ ಸಿನಿಮಾವನ್ನು ಅದೆಲ್ಲಿಗೋ ಕರೆದುಕೊಂಡು ಹೋಗುತ್ತೆ. ಆದ್ರೀಗ ಇದೇ ಹಾಡು ಮಲಯಾಳಂ ಭಾಷೆಯ ಹಾಡೊಂದನ್ನು ಯತಾವತ್ತಾಗಿಸ ತೆಗೆದಿಟ್ಟಿದ್ದಾರೆ ಎಂದು ನೆಟ್ಟಿಗರು ಆರೋಪ ಮಾಡಿದ್ದಾರೆ.

  ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಹಿಡಿದು ನಿಲ್ಲಿಸೋರು ಯಾರು? 8ನೇ ದಿನದ ಲೆಕ್ಕಾಚಾರವೇನು?ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಹಿಡಿದು ನಿಲ್ಲಿಸೋರು ಯಾರು? 8ನೇ ದಿನದ ಲೆಕ್ಕಾಚಾರವೇನು?

  ಮಲಯಾಳಂ ಸಾಂಗ್ ಯಾವುದು?

  ಮಲಯಾಳಂ ಸಾಂಗ್ ಯಾವುದು?

  5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಅಲ್ಬಮ್ ಹಾಡೊಂದನ್ನು ರಿಲೀಸ್ ಮಾಡಿದ್ದರು. ಥೈಕ್ಕುಡಂ ಬ್ರಿಡ್ಜ್ ಅನ್ನೋ ಹೆಸರಿನಲ್ಲಿ ಈ ಸಾಂಗ್ ಅನ್ನು ಟ್ಯೂನ್ ಹಾಕಿ, ಕಂಪೋಸ್ ಮಾಡಿದೆ. ಮಾತೃಭೂಮಿ ಕಪ್ಪಾ ಟಿವಿಯಲ್ಲಿ ಈ ನವರಸಂ ಸಾಂಗ್ ಅನ್ನು ಲಭ್ಯವಿದೆ. ಅಸಲಿಗೆ ಈ ನವರಸಂ ಸಾಂಗ್ ಹಾಗೂ 'ಕಾಂತಾರ'ದ 'ವರಹ ರೂಪಂ' ಸಾಂಗ್ ಎರಡಕ್ಕೂ ಸಾಕಷ್ಟು ಸಾಮ್ಯತೆ ಇದೆ. ಹೀಗಾಗಿ ಸಂಗೀತ ಅಜನೀಶ್ ಬಿ ಲೋಕನಾಥ್ ಈ ಹಾಡನ್ನು ಕಾಪಿ ಮಾಡಿದ್ದಾರೆ ಅಂತ ನೆಟ್ಟಿಗರು ಆರೋಪ ಮಾಡಿದ್ದಾರೆ.

  ಚಿತ್ರತಂಡ ಸೈಲೆಂಟ್ ಯಾಕೆ?

  ಚಿತ್ರತಂಡ ಸೈಲೆಂಟ್ ಯಾಕೆ?

  'ಕಾಂತಾರ' ಸಿನಿಮಾದ 'ವರಹ ರೂಪಂ' ಹಾಡು ಪ್ರೇಕ್ಷಕರ ಮನಕದ್ದಿದೆ. ಆದರೆ, ನೆಟ್ಟಿಗರು ಇದು ಬೇರೆ ಭಾಷೆಯಿಂದ ಕದ್ದ ಹಾಡು ಎಂಬುದಕ್ಕೆ ಸಾಕ್ಷಿ ಸಮೇತ ಪ್ರತ್ಯಕ್ಷರಾಗಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೂ, ಈ ಬಗ್ಗೆ ಚಿತ್ರತಂಡ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಅಜನೀಶ್ ಬಿ ಲೋಕನಾಥ್ ಕೂಡ ನೆಟ್ಟಿಗರು ಮಾಡುತ್ತಿರುವ ಆರೋಪಕ್ಕೆ ಉತ್ತರ ಕೊಡುವುದಕ್ಕೆ ಮುಂದೆ ಬಂದಿಲ್ಲ.

  ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಸೂಪರ್

  ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಸೂಪರ್

  'ಕಾಂತಾರ' ಸಿನಿಮಾ ಇಡೀ ದೇಶವೇ ಹೊಗಳುತ್ತಿರುವಾಗಲೇ ಚಿತ್ರತಂಡಕ್ಕೆ ಸವಾಲೊಂದು ಎದುರಾಗಿದೆ. ನೆಟ್ಟಿಗರು ಅದೇನೇ ಆರೋಪ ಮಾಡುತ್ತಿದ್ದರೂ, ಸಿನಿಮಾದ ವೇಗವನ್ನು ಮಾತ್ರ ತಗ್ಗಿಸಲು ಸಾಧ್ಯವಾಗಿಲ್ಲ. ಅಲ್ಲದೆ ಇದೇ ವಾರದಲ್ಲಿ ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ 'ಕಾಂತಾರ' ರಿಲೀಸ್ ಆಗುತ್ತಿದೆ. ಮುಂದೆ ಮಲಯಾಳಂ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗಲಿದೆ. ಆಗ ಇದೇ ಸಾಂಗ್ ಅನ್ನು ಇಟ್ಟುಕೊಳ್ಳುತ್ತಾರಾ? ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

  English summary
  Rishab Shetty Movie Kantara Song Varaha Roopam Is Copied From Malayalam Song, Know More.
  Tuesday, October 11, 2022, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X