For Quick Alerts
  ALLOW NOTIFICATIONS  
  For Daily Alerts

  ಹತ್ತಿದ್ದ ಏಣಿ ಮರೆಯಲಿಲ್ಲ ಕೀರವಾಣಿ: 'ಅಳಿಮಯ್ಯ'ನನ್ನು ನೆನೆದು ಟ್ವೀಟ್!

  |

  ಟಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಈಗ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. RRR ಸಿನಿಮಾದ "ನಾಟು ನಾಟು.." ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಅವಾರ್ಡ್ ಅನ್ನು ಗಿಟ್ಟಿಸಿಕೊಂಡ ಬಳಿಕ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

  ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದ ದಿನದಿಂದ ಎಂಎಂ ಕೀರವಾಣಿ ಬಗ್ಗೆನೇ ಟಾಕ್ ಆಗುತ್ತಿದೆ. ಭಾರತೀಯ ಚಿತ್ರರಂಗದ ಸೆಲೆಬ್ರೆಟಿಗಳು ಎಂಎಂ ಕೀರವಾಣಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ವಿದೇಶದಲ್ಲೇ ಕೀರವಾಣಿ ಸ್ವದೇಶಕ್ಕೆ ಮರಳಿದ್ದಾರೆ. ಈ ವೇಳೆ ತಮ್ಮ ಸಾಧನೆಗೆ ನೆರವಾದವರಿಗೆ ಶುಭಾಶಗಳನ್ನು ಹೇಳುವುದನ್ನು ಕೀರವಾಣಿ ಮರೆತಿಲ್ಲ.

  ರಶ್ಮಿಕಾ ಮಂದಣ್ಣ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್: ವಿಡಿಯೋ ಫುಲ್ ವೈರಲ್ರಶ್ಮಿಕಾ ಮಂದಣ್ಣ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್: ವಿಡಿಯೋ ಫುಲ್ ವೈರಲ್

  ನಡೆದು ಬಂದ ಹಾದಿ ಮರೆಯದ ಕೀರವಾಣಿ

  ನಡೆದು ಬಂದ ಹಾದಿ ಮರೆಯದ ಕೀರವಾಣಿ

  ಗೋಲ್ಡನ್ ಗ್ಲೋಬ್ ಅವಾರ್ಡ್ ಗೆಲ್ಲುವ ಮೂಲಕ ಟಾಲಿವುಡ್‌ ಸಂಗೀತ ನಿರ್ದೇಶಕ ಇತಿಹಾಸ ಸೃಷ್ಟಿಸಿದ್ದಾರೆ. RRR ಸಿನಿಮಾದ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿರುವ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿಯ ಸಂಗೀತ ಜರ್ನಿಯೇ ರೋಚಕ. ಈ ಸುದೀರ್ಘ ಜರ್ನಿಗೆ ಕಾರಣವಾದವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಟ್ವೀಟ್ ಮೂಲಕ ತನ್ನ ಸಾಧನೆಗೆ ನೆರವಾದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಎಂ.ಎಂ.ಕೀರವಾಣಿ ನೆನಪಿಸಿಕೊಂಡಿದ್ದಾರೆ.

  ಕೀರವಾಣಿಗೆ ಚಾನ್ಸ್ ಕೊಟ್ಟಿದ್ದ ಅರ್ಜುನ್ ಸರ್ಜಾ

  ಕೀರವಾಣಿಗೆ ಚಾನ್ಸ್ ಕೊಟ್ಟಿದ್ದ ಅರ್ಜುನ್ ಸರ್ಜಾ

  ಆ್ಯಕ್ಷನ್ ಕಿಂಗ್ ಅರ್ಜನ್ ಸರ್ಜಾ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುವುದಕ್ಕೆ ಸಜ್ಜಾಗಿದ್ದರು. 'ಸೇವಗನ್' ಮತ್ತು 'ಪ್ರತಾಪ್' ಸಿನಿಮಾಗೆ ಎಂ.ಎಂ ಕೀರವಾಣಿ ಅವರಿಗೇ ಸಂಗೀತದ ಜವಾಬ್ದಾರಿಯನ್ನು ನೀಡಿದ್ದರು. ಹಾಗೇ ಅರ್ಜುನ್ ಸರ್ಜಾ ನಟನೆಯ ಕನ್ನಡ ಸಿನಿಮಾ 'ಅಳಿಮಯ್ಯ' ಹಾಗೂ ತಮಿಳಿನ 'ಕೊಂಡಟ್ಟಂ' ಸಿನಿಮಾಗಳಿಗೂ ಎಂ.ಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಇಷ್ಟೇ ಅಲ್ಲದೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್‌ಗಾಗಿ ಆ್ಯಕ್ಷನ್ ಹೇಳಿದ್ದ 'ಪ್ರೇಮಬರಹ' ಸಿನಿಮಾದ ಹಾಡನ್ನು ಎಂ.ಎಂ ಕೀರವಾಣಿ ಹಾಡಿದ್ದರು. ಈ ಸಂಬಂಧ ನಟ ಅರ್ಜುನ್ ಸರ್ಜಾರನ್ನು ಟ್ವೀಟ್‌ನಲ್ಲಿ ನೆನಪಿಸಿಕೊಂಡಿದ್ದಾರೆ.

  ದಿಗ್ಗಜರಿಗೆ ಕೀರವಾಣಿ ಧನ್ಯವಾದ

  ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕೀರವಾಣಿ ಆರಂಭದ ದಿನಗಳಲ್ಲಿ ಅವಕಾಶ ನೀಡಿದವರನ್ನು ನೆನಪಿಸಿಕೊಂಡಿದ್ದಾರೆ. ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ಜೊತೆ ದಕ್ಷಿಣ ಭಾರತದ ಹಿರಿಯರನ್ನು ನೆನಪಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದ ದಿಗ್ಗಜ ಬಾಲಚಂದರ್, ಭರತನ್ ಹಾಗೂ ಬಾಲಿವುಡ್‌ನ ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  ರಾಜಮೌಳಿ ಜೊತೆ ಮುಂದಿನ ಸಿನಿಮಾ

  ರಾಜಮೌಳಿ ಜೊತೆ ಮುಂದಿನ ಸಿನಿಮಾ

  ರಾಜಮೌಳಿ ಹಾಗೂ ಕೀರವಾಣಿ ಕಾಂಬಿನೇಷನ್ ಹಿಟ್ ಆಗುತ್ತೆ. ಸಂಗೀತ ಕ್ಷೇತ್ರದಲ್ಲಿ ದಾಖಲೆಗಳನ್ನೇ ಬರೆಯುತ್ತೆ. 'ಬಾಹುಬಲಿ', 'ಬಾಹುಬಲಿ 2' ಹಾಗೂ RRR ಸಿನಿಮಾಗಳೇ ಸಾಕ್ಷಿ. ಈಗ ಪವನ್ ಕಲ್ಯಾಣ್ ಅಭಿನಯದ 'ಹರಿಹರ ವೀರ ಮಲ್ಲು' ಸಿನಿಮಾಗೂ ಟ್ಯೂನ್ ಹಾಕುತ್ತಿದ್ದಾರೆ. ಇದರ ಜೊತೆಗೆ ರಾಜಮೌಳಿ ನಿರ್ದೇಶಿಸುತ್ತಿರುವ ಮಹೇಶ್ ಬಾಬು ಸಿನಿಮಾಗೂ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ ಎನ್ನಲಾಗಿದೆ.

  English summary
  RRR Movie Music Director M M Keeravani Remembered Arjun Sarja For His Help, Know More.
  Wednesday, January 18, 2023, 18:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X