»   » 'ಸಂಜೆ ಹೊತ್ತಲ್ಲಿ' ದರ್ಶನ್-ಶ್ರುತಿ ಹರಿಹರನ್ ಡ್ಯುಯೆಟ್ ನೋಡಿ.!

'ಸಂಜೆ ಹೊತ್ತಲ್ಲಿ' ದರ್ಶನ್-ಶ್ರುತಿ ಹರಿಹರನ್ ಡ್ಯುಯೆಟ್ ನೋಡಿ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ಸೆಪ್ಟೆಂಬರ್ 29 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ 'ತಾರಕ್' ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

'ತಾರಕ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, 'ಸಂಜೆ ಹೊತ್ತು ನಿನ್ನ, ಶ್ಯಾನೇ ನೋಡ್ತಾ ಇದ್ರೆ' ಹಾಡಿನ ವಿಡಿಯೋ ಈಗ ತೆರೆಕಂಡಿದೆ. ದರ್ಶನ್ ಮತ್ತು ಶ್ರುತಿ ಹರಿಹರನ್ ಈ ಹಾಡಿನಲ್ಲಿ ಹೆಜ್ಜೆ ಹಾಕ್ಕಿದ್ದು, ಸಖತ್ ಕಲರ್ ಫುಲ್ ಆಗಿ ಮೂಡಿ ಬಂದಿದೆ.

'ತಾರಕ್'ಗೆ ತಾತನಾಗಲು ದೇವರಾಜ್ ವಿಧಿಸಿದ್ದ ಷರತ್ತು ಏನು?

Sanje Hothu Video Song from Tarak released

ಹರಿ ಸಂತೋಷ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಇಂದು ನಾಗರಾಜ್ ಮತ್ತು ವಿಜಯ ಪ್ರಕಾಶ್ ಹಾಡಿದ್ದಾರೆ.

ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

ಅಂದ್ಹಾಗೆ, ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ದೇವರಾಜ್, ದರ್ಶನ್, ಶಾನ್ವಿ ಶ್ರೀವಸ್ತವ್, ಶ್ರುತಿ ಹರಿಹರನ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ದುಶ್ಯಂತ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.

English summary
'Sanje Hothu' Video Song from kannada Movie 'Tarak' released. Music Composed by Arjun Janya & Directed by Prakash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X