»   » ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಸಾಮರಸ್ಯ ಗೀತೆ

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಸಾಮರಸ್ಯ ಗೀತೆ

Posted By:
Subscribe to Filmibeat Kannada
MP Shankar
ಪ್ರಸಕ್ತ ಕರ್ನಾಟಕದ ರಾಜಕೀಯ ದೊಂಬರಾಟವನ್ನು ನೋಡುತ್ತಿದ್ದರೆ ಇದು ಜಾತಿ ರಾಜಕೀಯವೇ ಅಥವಾ ರಾಜಕೀಯವೇ ಜಾತಿಯೇ ಎಂಬ ಪ್ರಶ್ನೆ ನಖಶಿಖಾಂತರ ಕಾಡುತ್ತದೆ. ಈ ತಗಡು ರಾಜಕೀಯ ಯಾರಿಗೆ ಬೇಕು ಹೋಗ್ರಿ ಎಂದು ಸುಮ್ಮನೆ ಕೂರೋಹಂಗೂ ಇಲ್ಲ ಬಿಡೋ ಹಂಗೂ ಇಲ್ಲ.

ಒಕ್ಕಲಿಗ ಹಾಗೂ ಲಿಂಗಾಯತ ಸ್ವಾಮಿಜಿಗಳು ತಮ್ಮ-ತಮ್ಮ ಜಾತಿ ನಾಯಕರ ಪರ ಹೋರಾಟಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಒಂದು ಹಾಡನ್ನು ಖಂಡಿತ ನೆನೆಯಲೇ ಬೇಕು. ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ 'ಸತ್ಯ ಹರಿಶ್ಚಂದ್ರ' ಚಿತ್ರದ ಗೀತೆ.

1965ರಲ್ಲಿ ತೆರೆಕಂಡ 'ಸತ್ಯ ಹರಿಶ್ಚಂದ್ರ' ಚಿತ್ರದ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..." ಎಂಬ ಗೀತೆ ಕೇಳದವರುಂಟೇ, ಕುಣಿಯದವರುಂಟೆ? ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ರಚಿಸಿ, ಗಡುಸಿನ ಕಂಠದ ಘಂಟಸಾಲ ಸಂಗೀತ ಸಂಯೋಜಿಸಿದ ಹಾಡು ಇಂದಿಗೂ ಯಾವುದೇ ವಾದ್ಯಗೋಷ್ಠಿಯ ಕೊನೆಯ ಹಾಡಾಗಿ ಎಲ್ಲರಲ್ಲೂ ಸಾಮರಸ್ಯ ಮೂಡಿಸುತ್ತಿದೆ.

ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಎಲ್ಲರನ್ನೂ ಸೆಳೆದಿದ್ದಾರೆ. ವಿಡಿಯೋ ನೋಡುತ್ತಾ ದಿದ್ದಿರಿ ದಿದ್ದಿರಿ ಎಂದು ಹಾಡು ಕುಣಿಯಿರಿ.

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ
ಹಹಹಹಾ

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹೇ.. ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಿಲಕ ಇಟ್ಟರೆ ಸ್ವರಗವು ಸಿಗದು
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ತಿಲಕ ಇಟ್ಟರೆ ಸ್ವರಗವು ಸಿಗದು
ವಿಭೂತಿ ಬಳಿದರೆ ಕೈಲಾಸ ಬರದು
ವಿಭೂತಿ ಬಳಿದರೆ ಕೈಲಾಸ ಬರದು
ಇಟ್ಟ ಗಂಧಾ ಬೂದಿ ನಾಮ
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ
ಇಟ್ಟ ಗಂಧಾ ಬೂದಿ ನಾಮ
ಕತ್ತ ಕತ್ತಲು ನಿರನಾಮಾ..

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..

ಹ್ಯ..
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಸೈವರಿಗೆಲ್ಲಾ ಸಿವದೊಡ್ಡೋನು
ಹೆ ಹೆ ಹೆಹೆ ಹೆ ಹೆ ಹೆಹೆ
ವೈಷ್ಣವರಿಗೆ ಹರಿ ಸರ್ವೋತ್ತಮನು
ಹೊ ಹೊ ಹೊಹೊ ಹೊ ಹೊ ಹೊಹೊ

ಸೈವರಿಗೆಲ್ಲಾ ಸಿವದೊಡ್ಡೋನು
ವೈಷ್ಣವರಿಗೆ ಹರಿ ಸರ್ವೋತ್ತಮನು
ಉತ್ತಮ ಮಧ್ಯಮ ಅಧಮರೆಲ್ಲರು
ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ಉತ್ತಮ ಮಧ್ಯಮ ಅಧಮರೆಲ್ಲರು
ಸತ್ತಮೇಲೆ ಸಮರಾಗ್ತಾರು..
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..
ಹಹ್ಯಾ..

ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಧಯ್ಯಕುತ್ತ ಕಿರಧಕ ಧೈಯಕುತಾ ಕಿರಧೈ
ಓ ದಿದ್ದಿರಿ ಓ ದಿದ್ದಿರಿ
ಓ ದಿದ್ದಿರಿ ದಿದ್ದಿರಿ ದಿದ್ದಿರಿ ದಿದ್ದಿರಿ

ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ತಲೆಗೊಂದು ರೀತಿ ನೀತಿಯ ಜಾತಿಯ
ಹೇಳುವ ಜೋತೀಶಿದ್ದರು ಗುರುಗಳು
ಏಯ್..
ಮಸಣದಲ್ಲಿ ಈ ವೀರಬಾಹುವ
ಮಸಣದಲ್ಲಿ ಈ ವೀರಬಾಹುವ
ಕೈಯ ಮೇಲ್ಗಡೆ ಬೂದಿಯಾಗ್ತರು

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ
ಮತದಲ್ಲಿ ಮೇಲ್ಯಾವುದೋ
ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ
ಕೀಳ್ಯಾವ್ದು ಮೇಲ್ಯಾವುದೋ..

ಹಹಹಹಹಹಾ
ಹೊಯ್
ಕೀಳ್ಯಾವ್ದು ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು ಮೇಲ್ಯಾವುದೋ...

English summary
Kannada film Satya Harishchandra's (1965) very philosophical song, so much hidden meanings. MP Shankar did a wonderful job with the dance. Dr. Rajkumar, Pandari bai, Narasimharaju as Nakshtrika, Udaykumar as Vishwamitra, Dwarkish, Ramadevi etc., amazing acting...Watch Video song from the movie Satya Harischandra - Kuladalli Melyavudo.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada