For Quick Alerts
  ALLOW NOTIFICATIONS  
  For Daily Alerts

  ಎರಡೇ ಕ್ಯಾರೆಕ್ಟರ್.. ಡೈಲಾಗ್‌ಗಳಿಂದ ಭಾವನೆಗಳೇ ಇರುವ ಶಾರ್ಟ್ ಫಿಲ್ಮ್ 'ಮ್ಯೂಟ್': ಇದರಲ್ಲೊಂದು ಬ್ಯೂಟಿಫುಲ್ ಸಾಂಗ್

  |

  ಒಂದು ಸಿನಿಮಾ ಮಾಡಬೇಕು ಅನ್ನುವುದು ಸಿನಿಮಾ ಕನಸು ಹೊತ್ತು ಬರುವ ನಿರ್ದೇಶಕ ಕನಸು. ಆ ಕನಸು ನನಸು ಮಾಡಿಕೊಳ್ಳಲು ಅದೆಷ್ಟೋ ಪ್ರಯತ್ನ ಪ್ರತಿದಿನ ನಡೆಯುತ್ತಲೇ ಇರುತ್ತೆ. ಅದರಲ್ಲಿ ತಮ್ಮ ಪ್ರತಿಭೆಯನ್ನು ನಿರ್ಮಾಪಕರಿಗೆ ತೋರಿಸಲು ಕೆಲ ಯುವ ನಿರ್ದೇಶಕರು ಶಾರ್ಟ್ ಫಿಲ್ಮ್ ಮೊರೆ ಹೋಗುತ್ತಾರೆ. ಇಲ್ಲೊಬ್ಬ ಯುವ ನಿರ್ದೇಶಕ ನಿರ್ಮಾಪಕರಿಗೆ ತೋರಿಸಲೇಂದೇ ಶಾರ್ಟ್ ಫಿಲ್ಮ್ ಒಂದನ್ನು ಮಾಡಿದ್ದಾರೆ. ಇದು ಯಾವ ಸಿನಿಮಾಗೂ ಕಮ್ಮಿಯಿಲ್ಲ.

  ಈ ಶಾರ್ಟ್ ಫಿಲ್ಮ್ ಹೆಸರು 'ಮ್ಯೂಟ್'. ಯುವ ಪ್ರತಿಭೆ ಸಿ. ನಾಗೇಶ್ ಈ ಸಿನಿಮಾದ ನಿರ್ದೇಶಕ. ತಾನು ಕಂಡ ಒಂದಿಷ್ಟು ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಲವ್ ಸ್ಟೋರಿಯೊಂದನ್ನು ಹೆಣೆದಿದ್ದಾರೆ. ಹಾಗಂತ ಇದು ರೆಗ್ಯೂಲರ್ ಲವ್ ಸ್ಟೋರಿ ಅಲ್ಲ. ಸ್ಕ್ರೀನ್ ಪ್ಲೇನೂ ರೆಗ್ಯೂಲರ್ ಆಗಿಲ್ಲ ಎನ್ನುತ್ತಾರೆ ಸಿ. ನಾಗೇಶ್. ಒಂದು ಸಿನಿಮಾದಲ್ಲಿ ಏನೆಲ್ಲಾ ಇರುತ್ತೋ ಅದನ್ನೇ 20 ರಿಂದ 25 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಒಂದು ಸಾಂಗ್ ಕೂಡ ಇಟ್ಟಿದ್ದಾರೆ. ಅದರ ಲಿರಿಕಲ್ ಸಾಂಗ್ ಅನ್ನೂ ರಿಲೀಸ್ ಮಾಡಿದ್ದಾರೆ.

  ಎರಡೇ ಪಾತ್ರ, ಹಾಡು ಜೀವಾಳ

  ಈ ಶಾರ್ಟ್ ಫಿಲ್ಮ್‌ನಲ್ಲಿ ಇರುವುದು ಎರಡೇ ಪಾತ್ರಗಳು. ಒಬ್ಬ ಹೀರೋ.. ಇನ್ನೊಬ್ಬರು ಹೀರೋಯಿನ್. ಹರೀಶ್ ರಾಮ್ ಹಾಗೂ ಜೆಸ್ಸಿಕಾ ಈ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಎರಡು ಪಾತ್ರಗಳ ಪ್ರೀತಿಯ ಕಥೆಯನ್ನು ವಿಭಿನ್ನ ತೆರೆಮೇಲೆ ಹೇಳಲು ಹೊರಟಿದ್ದಾರೆ ನಿರ್ದೇಶಕ ಸಿ ನಾಗೇಶ್. ಶಾರ್ಟ್ ಫಿಲ್ಮ್ ಕೂಡ ಯಾವ ಸಿನಿಮಾಗೂ ಕಮ್ಮಿಯಿರಬಾರದು ಅನ್ನುವ ರೀತಿ ಶಾರ್ಟ್ ಫಿಲ್ಮ್ ಮಾಡಿದ್ದಾರೆ. ಇದರಲ್ಲಿ ಒಂದು ಹಾಡನ್ನೂ ಇಟ್ಟಿದ್ದಾರೆ. ಯುವ ಪ್ರತಿಭೆಗಳೇ ಈ ಹಾಡನ್ನು ಕಂಪೋಸ್ ಮಾಡಿದೆ.

  ಫ್ರಾಂಕ್ಲಿನ್ ರಾಕಿ 'ಮ್ಯೂಟ್' ಕಿರುಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ, ಸಿದ್ದಾರ್ಥ ಬೆಳ್ಮಣ್ಣು, ಸುಪ್ರಿಯಾ ಜೋಷಿ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಗೌತಮ್ ಎಂ. ಕೆ ಸಾಹಿತ್ಯ ರಚಿಸಿದ್ದಾರೆ. ಈಗಾಗಲೇ ಇದರ ಲಿರಿಕಲ್ ಸಾಂಗ್‌ ಅನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. "ಮೊದಲು ಸಾಂಗ್ ಪ್ಲ್ಯಾನ್ ಮಾಡಿರಲಿಲ್ಲ. ಆದರೆ, ಸಿನಿಮಾ ತೆಗೆದ ಬಳಿಕ ಚೆನ್ನಾಗಿ ಬಂದಿದೆ ಅಂತ ಅನಿಸಿತ್ತು. ಸಿನಿಮಾ ಮೇಕಿಂಗ್ ಮಾಡುವಾಗಲೇ ಶಾರ್ಟ್ಸ್ ತೆಗೆದಿದ್ವಿ. ಈ ಇದು ಮ್ಯೂಸಿಕಲ್ ಸಿನಿಮಾ ಆಗಿದ್ದರಿಂದ ಸಾಂಗ್ ಇಟ್ಟರೆ ಉತ್ತಮ ಎನಿಸಿತ್ತು. ಅದಕ್ಕಾಗಿ ಹಾಡು ಸೇರಿಸಿದ್ವಿ." ಎಂದು ಹಾಡಿನ ಬಗ್ಗೆ ಮಾತಾಡುತ್ತಾರೆ ನಿರ್ದೇಶಕ ಸಿ ನಾಗೇಶ್.

  Short film Mute has song team released lyrical song

  ಸಂಭಾಷಣೆ ಕಡಿಮೆ ಭಾವನೆಗಳೇ ಜಾಸ್ತಿ

  ಈ ಸಿನಿಮಾದಲ್ಲಿ ಸಂಭಾಷಣೆ ತೀರಾ ಕಡಿಮೆ ಇದೆ. ಪ್ರೀತಿಯನ್ನು ಭಾವನೆಗಳ ಮೂಲಕ ಹೇಳಬಹುದಾ? ಅನ್ನುವ ಒಂದೆಳೆಯನ್ನಿಟ್ಟುಕೊಂಡು ಈ ಕಿರು ಚಿತ್ರವನ್ನು ಮಾಡಲಾಗಿದೆ. " ಸಿನಿಮಾದಲ್ಲಿ ಜಾಸ್ತಿ ಸಂಭಾಷಣೆಯೇ ಇಲ್ಲ. ಈ ಶಾರ್ಟ್ ಫಿಲ್ಮ್ ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿಯೇ ಹೋಗುತ್ತೆ. ಒಂದು ಆಂಗಲ್‌ನಲ್ಲಿ ಶೇ.99 ರಷ್ಟು ಡೈಲಾಗ್ ಇಲ್ಲ. ಇನ್ನೊಂದು ಆಂಗಲ್‌ನಲ್ಲಿ 60 ಪರ್ಸೆಂಟ್ ಡೈಲಾಗ್ ಇರುತ್ತೆ. ಒಂದು ಸೀನ್ ಡೈಲಾಗ್ ಇದೆ. ಉಳಿದ ಇಡೀ ಸಿನಿಮಾಗಳೆಲ್ಲಾ ಭಾವನೆಗಳಲ್ಲಿಯೇ ಹೋಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಮ್ಯೂಸಿಕಲ್ ಸಿನಿಮಾ. ಒಮ್ಮೆ ಮೇಕಿಂಗ್ ನೋಡಿದಾಗ, ಹಾಡು ಬೇಕು ಅನಿಸಿತ್ತು. ಅದಕ್ಕೆ ಸಾಂಗ್ ಮಾಡಿದ್ವಿ." ಎನ್ನುತ್ತಾರೆ ನಿರ್ದೇಶಕ ಸಿ. ನಾಗೇಶ್

  ನಿರ್ಮಾಪಕರಿಗೆ ತೋರಿಸಲೆಂದೇ ಈ ಸಿನಿಮಾ

  "ನಾನು ಮಾಧ್ಯಮವೊಂದರಲ್ಲಿ ಸಿನಿಮಾ ಕಾರ್ಯಕ್ರಮದ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಸಿನಿಮಾ ಕಾರ್ಯಕ್ರಮಗಳನ್ನು ಎಡಿಟ್ ಮಾಡುತ್ತಾ ಸಿನಿಮಾ ಮೇಲಿನ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ ಕೆಲಸ ಬಿಟ್ಟು ಕಥೆಗಳನ್ನು ಬರೆಯಲು ಆರಂಭಿಸಿದೆ. ಈ ಮ್ಯೂಟ್ ಕಥೆಯನ್ನು ರೆಡಿ ಮಾಡಿದೆ. ನಿರ್ಮಾಪಕರ ಬಳಿ ಈ ಕಥೆಯನ್ನು ತೆಗೆದುಕೊಂಡು ಹೋಗಿದ್ದೆ. ಅವರು ಆಸಕ್ತಿ ತೋರಲಿಲ್ಲ. ಹೀಗಾಗಿ ಸಿನಿಮಾ ಮಾಡಬೇಕಾಗಿದ್ದ ಕಥೆಯನ್ನು ನಿರ್ಮಾಪಕರಿಗೆ ತೋರಿಸಲೆಂದೇ ಶಾರ್ಟ್ ಫಿಲ್ಮ್ ಮಾಡಿದ್ದೇನೆ. ಯಾವ ಸಿನಿಮಾಗೂ ಕಡಿಮೆ ಇಲ್ಲದಂತೆ ಮಾಡಿದ್ದೇನೆ. ಇಷ್ಟು ದಿನ ದುಡಿದ ಹಣವನ್ನೆಲ್ಲಾ ಹಾಕಿದ್ದೇನೆ. ಈ ಶಾರ್ಟ್ ಫಿಲ್ಮ್ ಮೇಲೆ ನನಗೆ ಕಾನ್ಫಿಡೆನ್ಸ್ ಇದೆ." ಅಂತಾರೆ ನಿರ್ದೇಶಕ ಸಿ ನಾಗೇಶ್.

  English summary
  The Young team shot Mute short movie. This Short movie has only 2 characters. They spent money like to shoot a movie.
  Monday, January 31, 2022, 12:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X