Just In
Don't Miss!
- News
ಜಮ್ಮು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆಯಿಂದ ಮತ್ತೊಂದು ಸುರಂಗ ಪತ್ತೆ
- Automobiles
ಸ್ಪಾಟ್ ಟೆಸ್ಟ್ ನಡೆಸಿದ ಹೊಸ ಜಾವಾ 42 ಬೈಕ್
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Lifestyle
ನಿಮ್ಮ ಮನೆಯ ಮುಖ್ಯ ಬಾಗಿಲು ಈ ತರ ವಾಸ್ತು ಪ್ರಕಾರ ಇರಲಿ
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Sports
ಟೀಮ್ ಇಂಡಿಯಾದ 6 ಆಟಗಾರರಿಗೆ ಆನಂದ್ ಮಹೀಂದ್ರರಿಂದ ಭರ್ಜರಿ ಗಿಫ್ಟ್!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎರಡನೇ ಮದುವೆಗೆ ಸಜ್ಜಾದ 42 ವರ್ಷದ ಗಾಯಕಿ ಸುನಿತಾ; ನಿಶ್ಚಿತಾರ್ಥದ ಫೋಟೋ ವೈರಲ್
ತೆಲುಗಿನ ಜನಪ್ರಿಯ ಹಿನ್ನಲೆ ಗಾಯಕಿ ಮತ್ತು ಡಬ್ಬಿಂಗ್ ಕಲಾವಿದೆ ಸುನಿತಾ ಉಪದ್ರಸ್ತ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ರಾಮ್ ವೀರಪ್ಪನೇನಿ ಜೊತೆ ಪ್ರೀತಿಯಲ್ಲಿದ್ದ ಸುನಿತಾ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕುಟುಂಬದವರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ಸಮಾರಂಭ ನೇರವೇರಿದ್ದು ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಗಾಯಕಿ ಸುನಿತಾ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಶಿಷ್ಯೆ. ಜೊತೆಗೆ ಅವರ ಸಂಬಂಧಿ ಕೂಡ ಆಗಿದ್ದಾರೆ. 42 ವರ್ಷದ ಸುನಿತಾ ಈ ಮೊದಲು ಪತ್ರಕರ್ತ ಕಿರಣ್ ಕುಮಾರ್ ಗೋಪರಾಜ್ ಅವರನ್ನು ಮದುವೆಯಾಗಿದ್ದರು. 19ನೇ ವಯಸ್ಸಿನಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುನಿತಾ ಮೊದಲ ಪತಿಯಿಂದ ವಿಚ್ಛೇದನ ಪಡೆದು ಅನೇಕ ವರ್ಷಗಳಾಗಿದೆ. ಇದೀಗ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಮುಂದೆ ಓದಿ...
ಮಗ ಸೊಸೆಯ ಲಿವಿಂಗ್ ಟುಗೆದರ್ ಸತ್ಯ ಬಿಚ್ಚಿಟ್ಟ ಖ್ಯಾತ ಗಾಯಕ ಉದಿತ್ ನಾರಾಯಣ್

ರಾಮ್ ವೀರಪನೇನಿ ಬಗ್ಗೆ
ಸುನಿತಾ ಎರಡನೇ ಭಾವಿ ಪತಿ ರಾಮ್ ವೀರಪನೇನಿ ತೆಲುಗು ಡಿಜಿಟಲ್ ಮೀಡಿಯಾದ ಸಂಸ್ಥೆಯಲ್ಲಿ ಉನ್ನತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಮದುವೆ ಬಗ್ಗೆ ಗಾಯಕಿ ಸುನಿತಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ದೀರ್ಘವಾದ ಪತ್ರ ಬರೆಯುವ ಮೂಲಕ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಮದುವೆ ಬಗ್ಗೆ ಸುನಿತಾ ಹೇಳಿದ್ದೇನು?
'ಪ್ರತಿಯೊಬ್ಬ ತಾಯಿಯಂತೆ ನಾನು ನನ್ನ ಮಕ್ಕಳು ಚೆನ್ನಾಗಿ ಸೆಟಲ್ ಆಗಬೇಕು ಎಂದು ಕನಸು ಕಾಣುತ್ತೇನೆ. ಅದೇ ರೀತಿ ನಾನು ಕೂಡ ಜೀವನದಲ್ಲಿ ಉತ್ತಮ ರೀತಿ ಸೆಟಲ್ ಆಗಬೇಕು ಎಂದು ಬಯಸುವ ಅದ್ಭುತ ಮಕ್ಕಳು ಹಾಗೂ ಪೋಷಕರನ್ನು ಪಡೆದಿದ್ದೇನೆ. ಆ ಕ್ಷಣ ಕೊನೆಗೂ ಬಂದಿದೆ. ಅದ್ಭುತ ಸಂಗಾತಿ ಮತ್ತು ಕಾಳಜಿ ವಹಿಸುವ ರಾಮ್ ನನ್ನ ಜೀವನದಲ್ಲಿ ಬಂದಿದ್ದಾರೆ. ಶೀಘ್ರದಲ್ಲಿ ಮದುವೆ ಆಗುತ್ತಿರುವ ಬಗ್ಗೆ ಖುಷಿಯಾಗಿದ್ದೀನಿ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರ ಆದಿತ್ಯ

19ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಸುನಿತಾ
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸುನಿತಾ ಮೊದಲ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. '19ನೇ ವಯಸ್ಸಿನಲ್ಲಿ ಕಿರಣ್ ನನ್ನು ಮದುವೆಯಾದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಪ್ರತಿಯೊಂದು ಹಂತವನ್ನು ಆನಂದಿಸಿದ್ದೇನೆ. ಆದರೆ ತುಂಬಾ ದಿನ ಉಳಿಯಲಿಲ್ಲ' ಎಂದು ಹೇಳಿದ್ದಾರೆ. ಸುನಿತಾಗೆ ಇಬ್ಬರು ಮಕ್ಕಳಿದ್ದಾರೆ. ಮಗ ಆಕಾಶ್ ಮತ್ತು ಮಗಳು ಶ್ರೇಯಾ ಎನ್ನುವ ಇಬ್ಬರು ಮಕ್ಕಳಿದ್ದಾರೆ.

ಮದುವೆ ಯಾವಾಗ?
ಸದ್ಯ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವ ಸುನಿತಾ ಮದುವೆ ದಿನಾಂಕವನ್ನು ಬಹಿರಂಗ ಪಡಿಸಿಲ್ಲ. ಇಬ್ಬರ ಮದುವೆ ಮುಂದಿನ ವರ್ಷ ನಡೆಯುವ ಸಾಧ್ಯತೆ ಇದೆ. ಸುನಿತಾ ಮತ್ತು ರಾಮ್ ಜೋಡಿಗೆ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ. ಸುನಿತಾ ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಕನ್ನಡ ಸಾಕಷ್ಟು ಹಾಡಿಗಳಿಗೆ ಧ್ವನಿ ನೀಡಿದ್ದಾರೆ.