»   » 'ಸೈಕಲ್ ಗ್ಯಾಪ್ ಅಲ್ಲಿ' ಭಟ್ಟರ ಮೇಲೆ ಗೀತ ಪ್ರಹಾರ

'ಸೈಕಲ್ ಗ್ಯಾಪ್ ಅಲ್ಲಿ' ಭಟ್ಟರ ಮೇಲೆ ಗೀತ ಪ್ರಹಾರ

Posted By:
Subscribe to Filmibeat Kannada

ಯೋಗರಾಜ ಭಟ್ಟರಿಂದ ಸಿನೆಮಾ ಗೀತೆಗಳನ್ನು ಕೇಳುತ್ತಾ ಬಂದಿದ್ದೀರಾ. ಆದರೆ ಈ 'ಸೈಕಲ್ ಗ್ಯಾಪ್ ಅಲ್ಲಿ' ಸಿನಿಮಾಕ್ಕೆ ಯೋಗರಾಜ ಭಟ್ಟರ ಮೇಲೆ ಒಂದು ಗೀತೆ ಹೊಸೆಯಲಾಗಿದೆ. "ಕೇಳೋದು ಸ್ವಲ್ಪ ಕಷ್ಟ, ಆದ್ರೂ ಭಟ್ರ ಸಾಂಗೆ ಬೇಟರ್ರು, ಅದ್ರಲ್ಲಿ ಸ್ವಲ್ಪ ಹಾಸ್ಯ ಇದ್ರು, ಹಾಡು ಮಾತ್ರ ಸುಮಾರು, ಇವರು ಮುಂಗಾರು ಮಳೆ ಡೈರಕ್ಟರ್ ಸಾಧು ಪ್ರಾಣಿ ತರಹ ಕ್ಯಾರಕ್ಟರ್..." ಹೀಗೆ ಸಾಗುತ್ತದೆ ಈ ಹಾಡು.

ಈ ಹಾಡನ್ನು ತಾವರೆಕೆರೆ ಅಡ್ಡ ಸೆಟ್ ನಲ್ಲಿ ಚಿತ್ರೀಕರಣ ಮಾಡಲಾಗುವುದು. ನವೀನ್ ರಚಿಸಿರುವ ಈ ಹಾಡನ್ನು ಸಂಗೀತ ನಿರ್ದೇಶಕ ಶ್ರೀಹರ್ಷ ಅವರು ಈಗಾಗಲೇ ರೆಕಾರ್ಡ್ ಮಾಡಿಕೊಂಡಿದ್ದಾರೆ. ಮನೋಜ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸೂರ್ಯ ಪ್ರಭು ನಾಯಕರಾದ (ಈ ಹಿಂದೆ ಇವರು 'ಉಯ್ಯಾಲೆ' ಚಿತ್ರದಲ್ಲಿ ಅಭಿನಯಿಸಿದ್ದರು). ಇದೀಗ ಅವರು ಸಹೋದರ ರಘು ಅವರ ನಿರ್ಮಾಣದಲ್ಲಿ ಮಾರುತಿ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಭಟ್ಟರ 'ವಾಸ್ತು ಪ್ರಕಾರ' ಸಾಂಗು ಹೆಂಗೈತೆ ಹೇಳ್ರಪಾ]

Actress Deepika Das

ಕನ್ನಡ ಸಿನಿಮಾ ಮಾಧ್ಯಮದ ಬಗ್ಗೆಯೂ ಹಲವು ವಿಚಾರಗಳನ್ನು ಇಟ್ಟುಕೊಂಡು ನಿರ್ಮಾಣ ಆಗುತ್ತಿರುವ ಚಿತ್ರ ಮಂಡ್ಯ, ಶ್ರೀರಂಗ ಪಟ್ಟಣ, ಬೆಂಗಳೂರು ಸ್ಥಳಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಹಮ್ಮಿಕೊಂಡಿದೆ. ನಾಯಕ ಸೂರ್ಯ ಪ್ರಭು ಅವರು ಎರಡನೇ ಸಿನೆಮಾದಲ್ಲಿ ಕೆಲವು ತಯಾರಿ ಮಾಡಿಕೊಂಡು ಫಾರ್ಮ್ ಗೆ ಬರುವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಈ 'ಸೈಕಲ್ ಗ್ಯಾಪ್ ಅಲ್ಲಿ' ಚಿತ್ರದ ನಾಯಕಿ ದೀಪಿಕಾ ದಾಸ್. ಐದು ಹಾಡುಗಳ ರಾಗ ಸಂಯೋಜಕರು ಶ್ರೀಹರ್ಷ. ಹ್ಯಾರೀಸ್ ಜಾನಿ ಅವರು ಎರಡು ಸಾಹಸ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ. ನಿರಂಜನ್ ಬಾಬು ಅವರು ರೆಡ್ ಎಪಿಕ್ ಕ್ಯಾಮೆರಾದಲ್ಲಿ ಈ ಸಿನಿಮಾವನ್ನು ಸೆರೆಹಿಡಿಯಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
A song wrote on renowned director Yograj Bhat in upcoming Kannada movie Cycle Gap Alli. Deepika Das is doing a homely role in this love story, while Prabhu playing lead role. The shoot will be held at Mandya, Srirangapatna, Bangalore in the first schedule and second schedule is meant for songs. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada