twitter
    For Quick Alerts
    ALLOW NOTIFICATIONS  
    For Daily Alerts

    ದುಬಾರಿಯಾದರು ಗಾಯಕ ಸಿದ್ ಶ್ರೀರಾಮ್: ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು?

    |

    ದಕ್ಷಿಣ ಭಾರತದ ಖ್ಯಾತ ಗಾಯಕ ಸಿದ್ ಶ್ರೀರಾಮ್ ತಮ್ಮ ಸಂಭಾವನೆಯ ಮೊತ್ತವನ್ನು ಏಕಾಏಕಿ ಏರಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸೆನ್ಸೇಷನಲ್ ಗಾಯಕರಲ್ಲಿ ಒಬ್ಬರಾದ ಸಿದ್ ಸಿದ್ಧಾರ್ಥ್, ಒಂದರ ಹಿಂದೊಂದು ಚಾರ್ಟ್‌ಬಸ್ಟರ್ ಹಾಡುಗಳನ್ನು ನೀಡುತ್ತಿದ್ದಾರೆ.

    Recommended Video

    ದರ್ಶನ್ ಹಾಗು ವಿಜಯ್ ಆಗ್ತಾರೆ ಮುಖಾಮುಖಿ

    ಅವರ ಜನಪ್ರಿಯತೆಯ ಕಾರಣಕ್ಕಾಗಿಯೇ ಸಂಗೀತಗಾರರು, ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಸಿದ್ ಸಿದ್ಧಾರ್ಥ್ ಅವರ ಕಂಠದಲ್ಲಿ ಒಂದಾದರೂ ಹಾಡು ಇರಬೇಕು ಎಂದು ಶತಃಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಸಿದ್ ಸಿದ್ಧಾರ್ಥ್ ಕೂಡ ತಮ್ಮ ಸಂಭಾವನೆಯನ್ನು ಒಮ್ಮೆಲೆ ಹೆಚ್ಚಿಕೊಂಡಿದ್ದಾರೆ. ಕಾಲಿವುಡ್ ಗಾಯಕ ಸಿದ್ ಅವರಿಗೆ ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಇದೆ.

    'ಲಿಫ್ಟ್ ಕರಾದೆ' ಹಾಡಿನಿಂದ ಟಿಕ್ ಟಾಕ್ ಪ್ರವೇಶ ಮಾಡಿದ ಗಾಯಕ ಅದ್ನಾನ್ ಸಾಮಿ'ಲಿಫ್ಟ್ ಕರಾದೆ' ಹಾಡಿನಿಂದ ಟಿಕ್ ಟಾಕ್ ಪ್ರವೇಶ ಮಾಡಿದ ಗಾಯಕ ಅದ್ನಾನ್ ಸಾಮಿ

    ಸಿದ್ ಐದು ಲಕ್ಷ ರೂ ಸಂಭಾವನೆ

    ಸಿದ್ ಐದು ಲಕ್ಷ ರೂ ಸಂಭಾವನೆ

    ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಹೆಸರಾಂತ ಗಾಯಕರು ಸುಮಾರು 1-1.50 ಲಕ್ಷ ರೂ. ಸಂಭಾವನೆಯನ್ನು ಒಂದು ಹಾಡಿಗೆ ಪಡೆದುಕೊಳ್ಳುತ್ತಾರೆ. ಆದರೆ ಈ ಎಲ್ಲ ಖ್ಯಾತನಾಮರನ್ನು ಹಿಂದಿಕ್ಕಿ ಸಿದ್ಧಾರ್ಥ್ ಮುಂದೆ ಸಾಗಿದ್ದಾರೆ. ಒಂದು ಹಾಡಿಗೆ 5 ಲಕ್ಷ ರೂ ಸಂಭಾವನೆ ನೀಡುವಂತೆ ಸಿದ್ಧಾರ್ಥ್ ಡಿಮ್ಯಾಂಡ್ ಇರಿಸುತ್ತಿದ್ದಾರೆ ಎನ್ನಲಾಗಿದೆ.

    ದುಬಾರಿಯಾದರೂ ಸಿದ್ ಬೇಕು

    ದುಬಾರಿಯಾದರೂ ಸಿದ್ ಬೇಕು

    ಬಾಲಿವುಡ್‌ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಸಂಭಾವನೆ ಪಡೆಯುವ ಹಾಡುಗಾರರಿದ್ದಾರೆ. ಆದರೆ ದಕ್ಷಿಣ ಚಿತ್ರರಂಗದ ಮಟ್ಟಿಗೆ ಸಿದ್ ಅವರೇ ಬಲು ದುಬಾರಿಯಾಗಿದ್ದಾರೆ. ಹಾಗೆಂದು ಅವರಿಗೆ ಡಿಮ್ಯಾಂಡ್ ಏನೂ ಕಡಿಮೆಯಾಗಿಲ್ಲ. ಸಿದ್ ಕೇಳುವಷ್ಟು ಹಣವನ್ನು ತೆತ್ತು ಹಾಡಿಸಲು ಚಿತ್ರ ನಿರ್ಮಾಪಕರು ಸಿದ್ಧರಿದ್ದಾರೆ.

    ಸಿನಿಮಾಕ್ಕೆ ಪ್ರಚಾರ

    ಸಿನಿಮಾಕ್ಕೆ ಪ್ರಚಾರ

    ಏಕೆಂದರೆ ಸಿದ್ ಅವರ ಹಾಡು ಸಾಮಾನ್ಯವಾಗಿ ಹೆಚ್ಚು ಜನರನ್ನು ತಲುಪುತ್ತವೆ. ಅವರಿಗೆ ಇರುವ ಅಭಿಮಾನಿಗಳ ವರ್ಗ ದೊಡ್ಡದು. ಹೀಗಾಗಿ ಸಹಜವಾಗಿಯೇ ತಮ್ಮ ಸಿನಿಮಾಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ಎಷ್ಟೋ ಸಿನಿಮಾಗಳು ಹಾಡಿನ ಕಾರಣದಿಂದಲೇ ಗೆದ್ದ ಉದಾಹರಣೆಗಳಿವೆ.

    ಕನ್ನಡದಲ್ಲಿಯೂ ಹಾಡಿದ ಸಿದ್

    ಕನ್ನಡದಲ್ಲಿಯೂ ಹಾಡಿದ ಸಿದ್

    ಸಿದ್ ಹಾಡಿರುವ 'ಸಾಮಜವರಗಮನ', 'ಎಮೋ ಎಮೋ', 'ನೀಲಿ ನೀಲಿ ಆಕಾಶಂ', 'ಮಗುವಾ ಮಗುವಾ' ಮುಂತಾದ ಹಾಡುಗಳು ಸಾರ್ವಕಾಲಿಕ ಹಿಟ್‌ಗಳ ಸಾಲಿಗೆ ಸೇರಿವೆ. ಕನ್ನಡಕ್ಕೆ ಡಬ್ ಆಗಿದ್ದ 'ಡಿಯರ್ ಕಾಮ್ರೇಡ್' ಚಿತ್ರದ 'ಕಡಲಂತೆ ಕಾದ ಕಣ್ಣು...' ಹಾಡನ್ನು ಸಿದ್ ಹಾಡಿದ್ದರು. ಹಾಗೆಯೇ ಇತ್ತೀಚಿನ 'ಟಾಮ್ ಆಂಡ್ ಜೆರ್ರಿ' ಚಿತ್ರದ 'ಹಾಯಾಗಿದೆ...' ಎಂಬ ಹಾಡನ್ನೂ ಅವರು ಹಾಡಲಿದ್ದಾರೆ.

    ಅಮೆರಿಕದಲ್ಲಿ ಬೆಳೆದವರು

    ಅಮೆರಿಕದಲ್ಲಿ ಬೆಳೆದವರು

    ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಸಿದ್ ಶ್ರೀರಾಮ್, ಒಂದು ವರ್ಷದವರಿದ್ದಾಗ ತಮ್ಮ ಪೋಷಕರೊಂದಿಗೆ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದರು. ತಾಯಿ ಲತಾ ಶ್ರೀರಾಮ್ ಅವರಿಂದ ಸಂಗೀತ ಕಲಿತರು. ಅಮೆರಿಕದಲ್ಲಿ ಇದ್ದಾಗ ಶಾಸ್ತ್ರೀಯ, ಪಾಪ್, ಹಿಪ್ ಹಾಪ್, ಎಲೆಕ್ಟ್ರಾನಿಕ್ ಮ್ಯೂಸಿಕ್ ಹೀಗೆ ತರಹೇವಾರಿ ಸಂಗೀತಗಳನ್ನು ಕಲಿತ ಅವರು, ಭಾರತದಲ್ಲಿ ಅನೇಕ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಮಣಿರತ್ನಂ ಅವರ 'ಕಾದಲ್' ಚಿತ್ರದ ಮೂಲಕ ಸಂಗೀತ ನಿರ್ದೇಶಕ ಎಆರ್ ರೆಹಮಾನ್, ಸಿದ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.

    English summary
    Famous south film industry singer Sid Sriram has hiked his remuneration to Rs 5 lakh.
    Friday, March 20, 2020, 12:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X