»   » ತಮಿಳಲ್ಲಿ 'ದಿಗಿಲ್' ಆದ ಕನ್ನಡದ ಹಾರರ್ 'ಹೋಂ ಸ್ಟೇ'

ತಮಿಳಲ್ಲಿ 'ದಿಗಿಲ್' ಆದ ಕನ್ನಡದ ಹಾರರ್ 'ಹೋಂ ಸ್ಟೇ'

Posted By:
Subscribe to Filmibeat Kannada

ಕನ್ನಡದಲ್ಲಿ ಮೂಡಿಬರುತ್ತಿರುವ ಸಸ್ಪೆನ್ಸ್ ಹಾರರ್ ಚಿತ್ರ 'ಹೋಂ ಸ್ಟೇ'. ಇದೀಗ ಈ ಚಿತ್ರದ ತಮಿಳು ಆವೃತ್ತಿಗೆ 'ದಿಗಿಲ್' ಎಂದು ಹೆಸರಿಡಲಾಗಿದ್ದು ಇತ್ತೀಚೆಗೆ ಸೀಡಿ ಬಿಡುಗಡೆ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ.

ಕನ್ನಡ, ತಮಿಳು ಹಾಗೂ ಹಿಂದಿ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ 'ಹೋಂ ಸ್ಟೇ' ಎಂಬ ಹೆಸರಿನಿಂದ ಹಾಗೂ ತಮಿಳಿನಲ್ಲಿ 'ದಿಗಿಲ್' ಹೆಸರಿನಿಂದ ಈ ಚಿತ್ರ ನಿರ್ಮಾಣವಾಗಿದೆ. ['ಹೋಮ್ ಸ್ಟೇ' ಹಿಂದಿ ಚಿತ್ರದ ಸಖತ್ ಥ್ರಿಲ್ಲಿಂಗ್ ಟ್ರೇಲರ್]

ಇಷ್ಟಕ್ಕೂ ಹೊಂ ಸ್ಟೇಯಲ್ಲಿ ಏನು ನಡೆಯುತ್ತದೆ? ಹುಡುಗಿ ಮಿಸ್ ಆಗಿದ್ದೇಕೆ? ಎಂಬ ಅಂಶಗಳೊಂದಿಗೆ ಫಸ್ಟ್ ಲುಕ್ ಚಿತ್ರವನ್ನು ಕುತೂಹಲದಿಂದ ನಿರೀಕ್ಷಿಸುವಂತೆ ಮಾಡುತ್ತದೆ. ಇಂದಿನ ಯುವ ಪೀಳಿಗೆಯ ವೀಕೆಂಡ್ ವಿಹಾರಗಳಲ್ಲಿ ಸರ್ವೇ ಸಾಮಾನ್ಯವಾಗಿ ಕೇಳಲ್ಪಡುವ 'ಹೋಮ್ ಸ್ಟೇ'ನಲ್ಲಿ ನಡೆಯುವ ಒಂದು ಸನ್ನಿವೇಶವೇ ಚಿತ್ರದ ಕಥಾವಸ್ತು.

Tamil 'Digil' aka Kannada Home Stary audio out

ಸುಳ್ಯ ಮೂಲದ ಸಂತೋಷ್ ಕೊಡಂಕಿರಿ ಈ ಚಿತ್ರದ ನಿರ್ದೇಶಕರು. ಸುಳ್ಯದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ನಂತರ ಬೆಂಗಳೂರುನಲ್ಲಿ ಸಿನಿಮಾ ಇಂಡಷ್ಟ್ರಿಗೆ ಅಡಿಯಿಟ್ಟವರು. ಆರಂಭದಲ್ಲಿ ಜಾಹೀರಾತು ನಿರ್ದೇಶಕ. ಸರ್ಕಾರ ಮತ್ತು ಎನ್ ಜಿಓಗಳಿಗೆ ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಹೋಮ್ ಸ್ಟೇ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪರಿಚಿತರಾಗುತ್ತಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಗಮನಸೆಳೆದಿದ್ದಾರೆ ಸಂತೋಷ್.

ಈ ಚಿತ್ರಕ್ಕೆ ಆಶ್ಲೆ ಮೆಂಡೋಂಕ ಅವರ ಸಂಗೀತ, ನಂದಕಿಶೋರ್ - ಹಸೀಬ್ - ಎನ್ ಮುರಳಿಧರ್ ಅವರ ಛಾಯಾಗ್ರಹಣವಿದೆ. ವಿನೋದ್ ಮನೋಹರ್ ಅವರ ಸಂಕಲನ ಚಿತ್ರಕ್ಕಿದ್ದು ಪಾತ್ರವರ್ಗದಲ್ಲಿ ಸಯ್ಯಾಲಿ ಭಗತ್, ಶ್ರುತಿ, ರವಿಕಾಳೆ ಮುಂತಾದವರು ಇದ್ದಾರೆ.

ಇಡೀ ರಾತ್ರಿಯಲ್ಲಿ ಆಕೆ ಅಲ್ಲಿದ್ದ ಕಾವಲುಗಾರ, ಸಹಾಯಕಿ, ಮತ್ತು ಅನಾಮಿಕ ನೆರಳಿನಿಂದ ಎದುರಿಸಿದ ಉತ್ಕಟ ಸನ್ನಿವೇಶ ಯಾವುದು? ಆಕೆಯನ್ನು ಕೊಲ್ಲಲು ಪ್ರಯತ್ನಿಸಿದ ಆ ಅನಾಮಿಕ ನೆರಳು ಯಾರದು? ಮನೆಯ ಮಾಲಿಕ ಹಿಂತಿರುಗಿದನಾ ಇಲ್ಲವಾ? ಕೊನೆಗೂ ತನ್ನ ಭಾವಿ ಪತಿಯನ್ನು ಸಪ್ರ್ರೈಸ್ ಮಾಡಿದಳಾ ಇಲ್ಲವಾ? ಶೀಘ್ರದಲ್ಲೇ ನಿಮ್ಮ ನೆಚ್ಚಿನ ಚಿತ್ರಮಂದಿರಗಳಗೆ ಬರುತ್ತಿದೆ ಹೋಂ ಸ್ಟೇ ನೋಡಿ ಆನಂದಿಸಿ. (ಫಿಲ್ಮಿಬೀಟ್ ಕನ್ನಡ)

English summary
Tamil movie Digil audio released recently in Chennai. It is a suspense thriller movie, filming in 3 languages, Kannada, Hindi and Tamil. The movie titled in Kannada as Home Stay. Story, screeplay, direction by Santhosh Kodenkeri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada