»   » ಆಡಿಯೋ ಉದ್ಯಮದಲ್ಲಿ ಹೊಸ ದಾಖಲೆಗೆ ಷರಾ ಬರೆದ ಲಹರಿ

ಆಡಿಯೋ ಉದ್ಯಮದಲ್ಲಿ ಹೊಸ ದಾಖಲೆಗೆ ಷರಾ ಬರೆದ ಲಹರಿ

Posted By:
Subscribe to Filmibeat Kannada

ಚಲನಚಿತ್ರ ಗೀತೆಗಳಾಗಲಿ, ಭಾವಗೀತೆಯಾಗಲಿ ಅಥವಾ ಕನ್ನಡ ಸಂಗೀತ ಲೋಕದ ಆಡಿಯೋ ಮಾರುಕಟ್ಟೆ ವಿಚಾರಕ್ಕೆ ಬಂದಾಗ ಮಂಚೂಣಿಯಲ್ಲಿ ಬರುವ ಹೆಸರು ಲಹರಿ ರೆಕಾರ್ಡಿಂಗ್ ಸಂಸ್ಥೆ.

ಉದ್ಯಮವನ್ನು ಬರೀ ವ್ಯಾವಹಾರಿಕ ದೃಷ್ಟಿಯಲ್ಲಿ ನೋಡದೇ ಕನ್ನಡಕ್ಕಾಗಿ ತನ್ನ ಅಳಿಲು ಸೇವೆಯನ್ನು ಲಹರಿ ಸಂಸ್ಥೆ ಮಾಡಿರುವ ಉದಾಹರಣೆಗಳು ಬಹಳಷ್ಟು.

ವಿಚಾರಕ್ಕೆ ಬರುವುದಾದರೆ ಲಹರಿ ರೆಕಾರ್ಡಿಂಗ್ ಸಂಸ್ಥೆ ದಕ್ಷಿಣ ಭಾರತದ ಆಡಿಯೋ ರೈಟ್ಸ್ ಖರೀದಿ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. (ಲಹರಿ ತೆಕ್ಕೆಗೆ ಪ್ರಿನ್ಸ್ ಮಹೇಶ್ ಚಿತ್ರದ ಆಡಿಯೋ ರೈಟ್ಸ್)

ಇದು ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಆದರೂ, ಕರ್ನಾಟಕ ಮೂಲದ ಎಸ್ ಎಸ್ ರಾಜಮೌಳಿ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ 'ಬಾಹುಬಲಿ' ಚಿತ್ರಕ್ಕೆ ಸಂಬಂಧಿಸಿದ್ದು.

ಈ ಚಿತ್ರದ ಆಡಿಯೋ ರೈಟ್ಸನ್ನು ಲಹರಿ ರೆಕಾರ್ಡಿಂಗ್ ಸಂಸ್ಥೆ, ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಇದುವರೆಗೆ ಕಂಡು ಕೇಳರಿಯದ ದಾಖಲೆ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ.

ಬಾಹುಬಲಿ ಆಡಿಯೋ ಹಕ್ಕು ಮಾರಾಟವಾದ ಬೆಲೆಯೆಷ್ಟು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಆಡಿಯೋ ಬಿಡುಗಡೆ ಸಮಾರಂಭ

ಪ್ರಭಾಸ್, ಸುದೀಪ್, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಪ್ರಮುಖ ಭೂಮಿಕೆಯಲ್ಲಿರುವ ಬಾಹುಬಲಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇದೇ ಭಾನುವಾರ (ಮೇ 31) ಹೈದರಾಬಾದಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಲಹರಿ ಸಂಸ್ಥೆ ಇದೇ ಮೊದಲಲ್ಲ

ಕನ್ನಡ ಹೊರತಾಗಿ ಬೇರೆ ಭಾಷೆಯ ಆಡಿಯೋ ರೈಟ್ಸ್ ಲಹರಿ ಸಂಸ್ಥೆ ಪಡೆಯುತ್ತಿರುವುದು ಇದೇ ಮೊದಲಲ್ಲ. ತೆಲುಗು ನಟ 'ಪ್ರಿನ್ಸ್' ಮಹೇಶ್ ಬಾಬು ಅವರ '1 ನೇನೊಕ್ಕಡಿನೇ' ಚಿತ್ರದ ಆಡಿಯೋ ರೈಟ್ಸನ್ನು ಲಹರಿ ಸಂಸ್ಥೆ ಒಂದು ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿತ್ತು. ಅಲ್ಲದೇ, ಅಲ್ಲು ಅರ್ಜುನ್ ಅಭಿನಯದ ರೇಸ್ ಗುರ್ರಂ ಚಿತ್ರದ ರೈಟ್ಸನ್ನು 75 ಲಕ್ಷಕ್ಕೆ ಖರೀದಿಸಿತ್ತು.

ಬಾಹುಬಲಿ ಆಡಿಯೋ ರೈಟ್ಸ್

ಇದುವರೆಗಿನ ದಕ್ಷಿಣ ಭಾರತದ ಚಿತ್ರೋದ್ಯಮದ ಇತಿಹಾಸದಲ್ಲಿ ಮೊದಲ ಬಾರಿಗೆ ಬಾಹುಬಲಿ ಚಿತ್ರದ ಆಡಿಯೋ ರೈಟ್ಸನ್ನು ಲಹರಿ ರೆಕಾರ್ಡಿಂಗ್ ಸಂಸ್ಥೆ ದಾಖಲೆಯ ಮೂರು ಕೋಟಿ ರೂಪಾಯಿಗೆ ಖರೀದಿಸಿದೆ.

ವೇಲು ಹೇಳುವುದೇನು?

ಬಾಹುಬಲಿ ಚಿತ್ರದ ಆಡಿಯೋ ರೈಟ್ಸ್ ಖರೀದಿಸಲು ಇತರ ಸಂಸ್ಥೆಗಳು ತೀವ್ರ ಪೈಪೋಟಿ ನಡೆಸಿದ್ದವು. ಭಾರೀ ಕ್ರೇಜ್ ಹುಟ್ಟುಹಾಕಿರುವ ದ್ವಿಭಾಷ ಚಿತ್ರವೊಂದರ ಆಡಿಯೋ ಖರೀದಿಸಿದ್ದು ನಮ್ಮ ಸಂಸ್ಥೆಗೂ ಒಂದು ಹೆಮ್ಮೆ ಎಂದು, ಲಹರಿ ವೇಲು ಸಂತೋಷ ವ್ಯಕ್ತ ಪಡಿಸಿದ್ದಾರೆ.

ಇನ್ನೂರು ಕೋಟಿಯ ಚಿತ್ರ

ಮೂಲಗಳ ಪ್ರಕಾರ ಬಾಹುಬಲಿ ಚಿತ್ರದ ಮೇಲೆ ನಿರ್ಮಾಪಕರು ಸುರಿದ ದುಡ್ಡು ಸುಮಾರು ಇನ್ನೂರು ಕೋಟಿ. ಈ ಚಿತ್ರದ ಟಿವಿ ರೈಟ್ಸ್ ದಾಖಲೆಯ (ತೆಲುಗು ಚಿತ್ರೋದ್ಯಮದ) 25 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನುವ ಸುದ್ದಿಯಿದೆ.

English summary
SS Rajamouli's Baahubali movie audio rights snapped up by Bengaluru-based audio company Lahari Audio for whopping Rs 3 crores.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada