"ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ.." ಎಂದ ಮಂಗ್ಲಿ

'ರಾಬರ್ಟ್' ಸಿನಿಮಾ ತೆಲುಗು ಅವತರಣಿಕೆಯಲ್ಲಿ ಕಣ್ಣೇ ಅದಿರಿಂದಿ ಅಂತ ಹಾಡಿದ್ದ ಮಂಗ್ಲಿ ಕನ್ನಡಿಗರಿಗೆ ತೀರ ಹತ್ತಿರವೆನಿಸಿದ್ದರು. ಈಗ ಬ್ಯಾಕ್ ಟು ಬ್ಯಾಕ್ ಕನ್ನಡ ಹಾಡುಗಳನ್ನು ಮಂಗ್ಲಿ ಹಾಡುತ್ತಿದ್ದಾರೆ. ಇತ್ತೀಚೆಗೆ ಮತ್ತೊಂದು ಕನ್ನಡ ಸಿನಿಮಾದ ಹಾಡಿಗೆ ತೆಲುಗು ಗಾಯಕಿ ಮಂಗ್ಲಿ ಧ್ವನಿಯಾಗಿದ್ದಾರೆ.

ಮಂಗ್ಲಿ ಈಗ ಕನ್ನಡಿಗರಿಗೂ ತುಂಬಾನೇ ಚೆನ್ನಾಗಿ ಪರಿಚಯವಿದೆ. ಗಾಯಕಿ ಅಷ್ಟೇ ಅಲ್ಲ ಕನ್ನಡ ಸಿನಿಮಾವೊಂದಕ್ಕೆ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ಈಗ ಕನ್ನಡದ 'ಸೈರನ್' ಅನ್ನೋ ಸಿನಿಮಾಗೆ ಮಂಗ್ಲಿ ಹಾಡಿದ್ದು, ಎಣ್ಣೆ ಪ್ರಿಯರಿಗೆ ಮನಮೆಚ್ಚಿಸುವಂತಿದೆ.

ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸಿನಿಮಾ 'ಸೈರನ್'. ಈ ಸಿನಿಮಾದ ಎಣ್ಣೆ ಹಾಡನ್ನು ಮಂಗ್ಲಿ ಹಾಡಿದ್ದಾರೆ. "ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ.." ಅಂತ ಹಾಡಿರೋ ಹಾಡಿನ ಝಲಕ್ ಈಗಾಗ್ಲೇ ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ.

Telugu Singer Mangli Sung A Song For Kannada Movie Siren

ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ 'ಸೈರನ್' ಸಿನಿಮಾವನ್ನು ರಾಜ ವೆಂಕಯ್ಯ ನಿರ್ದೇಶನ ಮಾಡಿದ್ದಾರೆ. ಭಾರದ್ವಾಜ್ ಸಂಗೀತ ನೀಡಿರುವ "ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ.." ಹಾಡಿಗೆ ಚಿನ್ಮಯ್ ಬಾವಿಕೆರೆ ಸಾಹಿತ್ಯ ರಚಿಸಿದ್ದಾರೆ. ಈ ಹಾಡು ಇದೇ ತಿಂಗಳ 24ರಂದು ರಿಲೀಸ್ ಆಗುತ್ತಿದೆ.

'ಸೈರನ್' ಸಿನಿಮಾದಲ್ಲಿ ಲಾಸ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಸ್ಪರ್ಶ ರೇಖಾ, ಸಾಯಿ ಧೀನ ಸೇರಿದಂತೆ ಕನ್ನಡ ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಜು.ಶಿವಾನಂದ್ 'ಸೈರನ್' ಸಿನಿಮಾಗೆ ಹಣ ಹೂಡಿದ್ದರೆ, ರಾಜ ವೆಂಕಯ್ಯ ನಿರ್ದೇಶನ ಮಾಡಿದ್ದಾರೆ. ನಾಗೇಶ್ ವಿ ಆಚಾರ್ಯ ಕ್ಯಾಮರಾವರ್ಕ್ ಮಾಡಿದ್ದಾರೆ. ವಾಲಿ ಕುಲೇಸ್ ಸಂಕಲನ, ಚಂದ್ರು ಬಂಡೆ, ನರಸಿಂಹ ಸಾಹಸ ನಿರ್ದೇಶನ ಹಾಗೂ ಕಲೈ ಅವರ ನೃತ್ಯ ನಿರ್ದೇಶನವಿದೆ.

ಮಂಗ್ಲಿ ವಿಶಿಷ್ಟ ಗಾಯನದ ಶೈಲಿಗೆ ಸಂಗೀತಗಾರರು ಫಿದಾ ಆಗಿದ್ದಾರೆ. 'ಏಕ್ ಲವ್ ಯಾ' ಸಿನಿಮಾದ "ಎಣ್ಣೆಗೂ ಹೆಣ್ಣಿಗೂ.." ಕನ್ನಡದಲ್ಲಿ ಹಾಡಿದ ಮೊದಲ ಹಾಡು. ಆ ಬಳಿಕ 'ಪುಷ್ಪ' ಸಿನಿಮಾದ ಕನ್ನಡ ಅವತರಣಿಕೆಯ " ಊ ಅಂತಿಯಾ..ಊಹುಂ ಅಂತಿಯಾ.." ಅನ್ನೋ ಹಾಡನ್ನು ಹಾಡಿ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.

Telugu Singer Mangli Sung A Song For Kannada Movie Siren

ಇತ್ತೀಚೆಗಷ್ಟೇ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ 125ನೇ ಸಿನಿಮಾ 'ವೇದ'ದಲ್ಲಿ ಹಾಡಿದ "ಗಿಲಕ್ಕು ಶಿವ.." ಹಾಡು ಕೂಡ ಫೇಮಸ್ ಆಗಿತ್ತು. ಆ ಬಳಿಕವೇ ಈಗ 'ಸೈರನ್' ಸಿನಿಮಾ ಎಣ್ಣೆ ಹಾಡಿಗೆ ಧ್ವನಿ ನೀಡಿದ್ದಾರೆ.

More from Filmibeat

English summary
Telugu Singer Mangli Sung A Song For Kannada Movie Siren, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X