Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ ಮಂದಣ್ಣ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್: ವಿಡಿಯೋ ಫುಲ್ ವೈರಲ್
ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ವಾರಿಸು' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ರು ಸಂಕ್ರಾಂತಿ ಸಂಭ್ರಮದಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇನ್ನು ಎಸ್. ತಮನ್ ಮ್ಯೂಸಿಕ್‌ನಲ್ಲಿ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿದೆ.
'ರಂಜಿತಮೇ ರಂಜಿತಮೇ' ಸಾಂಗ್ 'ವಾರಿಸು' ಚಿತ್ರದ ಪ್ಲಸ್ ಪಾಯಿಂಟ್. ಯೂಟ್ಯೂಬ್‌ನಲ್ಲಿ ಲಿರಿಕಲ್ ವಿಡಿಯೋ ಸಾಂಗ್ 130 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಸಖತ್ ಸದ್ದು ಮಾಡ್ತಿದೆ. ವಿಜಯ್- ರಶ್ಮಿಕಾ ಇಬ್ಬರು ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ರಂಜಿಸಿದ್ದಾರೆ. ಸೋಶಿಯಲ್ ಮೀಡಿಯಾ ಇಂಫ್ಲುಯರ್ಸ್, ವಿಜಯ್- ರಶ್ಮಿಕಾ ಫ್ಯಾನ್ಸ್, ನೆಟ್ಟಿಜನ್ಸ್ ಹೀಗೆ ಎಲ್ಲರಿಗೂ ಈ ಸಾಂಗ್ ಇಷ್ಟವಾಗಿದೆ. ವಾಟ್ಸಾಪ್ ಸ್ಟೇಟಸ್, ಯೂಟ್ಯೂಬ್ ಶಾರ್ಟ್ಸ್, ಇನ್‌ಸ್ಟಾ ರೀಲ್ಸ್, ಫೇಸ್‌ಬುಕ್ ಎಲ್ಲಾ 'ರಂಜಿತಮೇ' ಹವಾ ಜೋರಾಗಿದೆ. ಇದೆಲ್ಲದ ನಡುವೆ ಇದೇ ಹಾಡಿಗೆ ಸಂಬಂಧಿಸಿದಂತೆ ಕ್ರೇಜಿ ವಿಡಿಯೋವೊಂದು ವೈರಲ್ ಆಗಿದೆ.
ಅಜಿತ್
v/s
ವಿಜಯ್,
ಗೆದ್ದವರ್ಯಾರು?
ಮೂರು
ದಿನಕ್ಕೆ
'ವಾರಿಸು',
'ತುನಿವು'
ಗಳಿಸಿದ್ದೆಷ್ಟು?
'ರಂಜಿತಮೇ' ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಹಲ್‌ಚಲ್ ಎಬ್ಬಿಸಿದೆ. ಈ ವೈರಲ್ ವಿಡಿಯೋ ಬಗ್ಗೆ ಸಂಗೀತ ನಿರ್ದೇಶಕ ಎಸ್. ತಮನ್ ಕೂಡ ಸ್ಪಂದಿಸಿದ್ದಾರೆ.
|
ಗರ್ಭದಲ್ಲಿರುವ ಮಗು ಡ್ಯಾನ್ಸ್
ಈ ಬಿಂದಾಸ್ ಸಾಂಗ್‌ಗೆ ಹುಟ್ಟುವ ಮಗು ಕೂಡ ಕುಣಿಯುತ್ತಿದೆ. 'ರಂಜಿತಮೇ' ಸಾಂಗ್ ತಮ್ಮ ಫ್ಯಾಮಿಲಿಗೆ ಬಹಳ ಪ್ರತ್ಯೇಕ ಎಂದು ಹೇಳಿ ತಮಿಳು ಕುಟುಂಬವೊಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಒಬ್ಬ ಮಹಿಳೆ ಬೇಬಿ ಬಂಪ್ ಜೊತೆ ನಗುತ್ತಾ ಸಂಭ್ರಮಿಸುತ್ತಾ ಕಾಣಿಸಿಕೊಂಡಿದ್ದಾರೆ. 'ರಂಜಿತಮೇ' ಸಾಂಗ್ ಪ್ಲೇ ಆಗುತ್ತಿದ್ದಂತೆ ಆಕೆಯ ಹೊಟ್ಟೆಯಲ್ಲಿನ ಮಗು ಕುಣಿದಾಡುವಂತಹ ಚಲನೆ ಗೋಚರಿಸುತ್ತವೆ. "ಈ ಹಾಡು ಹಾಕಿದ ಪ್ರತಿಸಾರಿ ನನ್ನ ಮಗು ಹೀಗೆ ಡ್ಯಾನ್ಸ್ ಮಾಡುತ್ತೆ" ಎಂದು ಆಕೆ ಸಂಭ್ರಮಿಸಿದ್ದಾರೆ.

ವಿಡಿಯೋ ಬಗ್ಗೆ ತಮನ್ ಪ್ರತಿಕ್ರಿಯೆ
ಇನ್ನು ವೈರಲ್ ವಿಡಿಯೋ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಂಗೀತ ನಿರ್ದೇಶಕ ತಮನ್, "ಈ ವಿಡಿಯೋ ಮಧುರಾನುಭೂತಿ ನೀಡುತ್ತಿದೆ. ನನ್ನ ಈ ದಿನವನ್ನು ಈ ವಿಡಿಯೋ ಬಹಳ ವಿಶೇಷವಾಗಿಸಿದೆ" ಎಂದು ಬರೆದುಕೊಂಡಿದ್ದಾರೆ. ತಮನ್ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ 'ಪವರ್', 'ಚಕ್ರವ್ಯೂಹ', 'ಯುವರತ್ನ' ಸೇರಿ ಕೆಲ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ
3ನೇ
ದಿನಕ್ಕೆ
436
ಶೋಗಳನ್ನು
ಕಳೆದುಕೊಂಡ
ವಾರಿಸು;
ಉಳಿದ
ಚಿತ್ರಗಳಿಗೆ
ಸಿಕ್ಕ
ಶೋ
ಎಷ್ಟು?

1 ಕೋಟಿ 30 ಲಕ್ಷ ವೀವ್ಸ್
ಸ್ವತಃ ದಳಪತಿ ವಿಜಯ್ ಹಾಡಿರುವ 'ರಂಜಿತಮೇ' ಸಾಂಗ್ 1 ಕೋಟಿ 30 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ವಿಜಯ್ ಜೊತೆ ಎಂ. ಎಂ ಮಾನಸಿ ದನಿಗೂಡಿಸಿದ್ದಾರೆ. ತಮಿಳಿನಲ್ಲಿ ವಿವೇಕ್, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತೆಲುಗಿನ ಜಾನಿ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 'ವಾರಿಸು' ಹವಾ
ವಂಶಿ ಪೈಡಿಪಲ್ಲಿ ನಿರ್ದೇಶನದ 'ವಾರಿಸು' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ ಸದ್ದು ಮಾಡ್ತಿದೆ. 2 ದಿನ ಮೊದಲೇ ಬಿಡುಗಡೆ ಆಗಿದ್ದ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹಳೇ ಕಥೆಯನ್ನೇ ಹೊಸ ರೀತಿಯಲ್ಲಿ ಹೇಳಲಾಗಿದ್ದು ವಿಜಯ್ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗ್ತಿದೆ. ತೆಲುಗಿನಲ್ಲಿ 'ವಾರಸುಡು' ಹೆಸರಿನಲ್ಲಿ 2 ದಿನ ತಡವಾಗಿ ಸಿನಿಮಾ ರಿಲೀಸ್ ಆಗಿದೆ. ಬಾಕ್ಸಾಫೀಸ್‌ನಲ್ಲಿ 'ವಾರಿಸು' ಚಿತ್ರಕ್ಕೆ ಥಲಾ ಅಜಿತ್ ನಟನೆಯ 'ಥುನಿವು' ಟಫ್ ಕಾಂಪಿಟೇಷನ್ ಕೊಡ್ತಿದೆ.