»   » ನಟನೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಪುತ್ರ!

ನಟನೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಪುತ್ರ!

Posted By:
Subscribe to Filmibeat Kannada
V Harikrishna son makes a Sandalwood debut through Bharjari, Kannada Movie

ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಪುತ್ರ ಇತ್ತೀಚಿಗಷ್ಟೆ ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಈಗ ಇದರ ಹಿಂದೆಯೇ ಮತ್ತೊಬ್ಬ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಮಗ ಕೂಡ ಈಗ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ.

ರಚಿತಾರಾಮ್ ನಟನೆಯ 'ಭರ್ಜರಿ' ಚಿತ್ರದ 'ಪುಟ್ಟಗೌರಿ' ಹಾಡು ನೋಡಿ

ಸಾಮಾನ್ಯವಾಗಿ ಒಬ್ಬ ಮ್ಯೂಸಿಕ್ ಡೈರೆಕ್ಟರ್ ಮಕ್ಕಳು ತಾವು ಕೂಡ ಮ್ಯೂಸಿಕ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಪರಿಚಿತವಾಗುತ್ತಾರೆ. ಆದರೆ ಹರಿಕೃಷ್ಣ ಪುತ್ರ ಆದಿತ್ಯ ಹರಿಕೃಷ್ಣ ಸದ್ಯಕ್ಕೆ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದಿಲ್ಲ. ಬದಲಾಗಿ ಒಂದು ಸಣ್ಣ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

V.Harikrishna son's Sandalwood Debut through 'Bharjari' Movie.

'ಭರ್ಜರಿ' ಸಿನಿಮಾದ ಟೈಟಲ್ ಹಾಡಿನ್ನು ಸರಿಯಾಗಿ ಗಮನಿಸಿದರೆ ಅದರಲ್ಲಿ ಹರಿಕೃಷ್ಣ ಪುತ್ರ ಹೀಗೆ ಬಂದು ಹಾಗೆ ಹೋಗುತ್ತಾರೆ. ಹಾಡಿನ ಪ್ರಾರಂಭದಲ್ಲಿ ಆದಿತ್ಯ ಹರಿಕೃಷ್ಣ ಸಖತ್ ಆಗಿ ಮಿಂಚಿದ್ದಾರೆ. ಈ ಹಾಡಿನಲ್ಲಿ 'ಡಿ ಬೀಟ್ಸ್' ಎಂಬ ಸಾಹಿತ್ಯ ಇದ್ದು, ಅದನ್ನು ಹರಿಕೃಷ್ಣ ಅವರ ಮಗನಿಂದ ಹೇಳಿಸಲಾಗಿದೆ. ಅಂದಹಾಗೆ, ಆದಿತ್ಯ ಹರಿಕೃಷ್ಣ ಕಾಣಿಸಿಕೊಂಡಿರುವ ಈ ಹಾಡು ಯೂಟ್ಯೂಬ್ ನಲ್ಲಿ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿದ್ದು, ಈ ಹಾಡು 2 ಮಿಲಿಯನ್ ಗೂ ಅಧಿಕ ಜನರು ವೀಕ್ಷಿಸಿದ್ದಾರೆ.

English summary
Kannada music director V.Harikrishna son Aditya Harikrishna to make his Sandalwood Debut through 'Bharjari' Kannada Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada