For Quick Alerts
  ALLOW NOTIFICATIONS  
  For Daily Alerts

  'ವರಾಹ ರೂಪಂ' ಕಾಪಿ ಎನ್ನುವವರು ಇಲ್ಲೊಮ್ಮೆ ನೋಡಿ: ಇದನ್ನು ನೋಡಿದ್ಮೇಲೆ ಯಾವುದು ಸರಿ ಯಾವುದು ತಪ್ಪು ಹೇಳಿ!

  |

  ಕಾಪಿರೈಟ್‌ ವಿವಾದದ ಹಿನ್ನೆಲೆಯಲ್ಲಿ 'ಕಾಂತಾರ' ಚಿತ್ರಕ್ಕೆ ಕೊಂಚ ಮಟ್ಟಿಗೆ ಹಿನ್ನಡೆ ಆಗಿರುವುದು ಗೊತ್ತೇಯಿದೆ. ನ್ಯಾಯಾಲಯದ ಆದೇಶದ ಮೇರೆಗೆ ಚಿತ್ರತಂಡ ಯೂಟ್ಯೂಬ್‌ ಹಾಗೂ ಮ್ಯೂಸಿಕ್‌ ಆಪ್‌ಗಳಿಂದ 'ವರಾಹ ರೂಪಂ' ಹಾಡನ್ನು ಡಿಲೀಟ್‌ ಮಾಡುವಂತಾಗಿದೆ. ಮಲಯಾಳಂನ ತೈಕ್ಕುಡಂ ಬ್ರಿಡ್ಜ್‌ ತಮ್ಮ 'ನವರಸಂ' ಹಾಡಿನ ಟ್ಯೂನ್ ಕದ್ದು 'ಕಾಂತಾರ' ತಂಡ 'ವರಾಹ ರೂಪಂ' ಹಾಡು ಮಾಡಿದೆ ಎಂದು ಆರೋಪಿಸಿದೆ. ಹೊಂಬಾಳೆ ಸಂಸ್ಥೆ ಕೂಡ ಕಾನೂನು ಹೋರಾಟ ನಡೆಸುತ್ತಿದೆ.

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಸಿನಿಮಾ ಸಕ್ಸಸ್‌ನಲ್ಲಿ 'ವರಾಹ ರೂಪಂ' ಹಾಡಿನ ಕ್ರೆಡಿಟ್ ಕೂಡ ಇದೆ. ಆದರೆ ಇದೇ ಹಾಡು ಈಗ ವಿವಾದ ಸೃಷ್ಟಿಸಿದೆ. ಸಿನಿಮಾ ಸದ್ದು ಮಾಡೋಕೆ ಶುರು ಮಾಡಿದಂತೆ ಕೆಲವರು ಈ ಹಾಡು 'ನವರಸಂ' ಹಾಡಿನ ಕಾಪಿ ಎನ್ನಲು ಶುರು ಮಾಡಿದರು. ಇದೇ ವಿಚಾರವಾಗಿ ಫಿಲ್ಮಿಬೀಟ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರನ್ನು ಸಂಪರ್ಕಿಸಿದಾಗ ಅವರು ಎರಡರ ವ್ಯತ್ಯಾಸವನ್ನು ಹೇಳಿದ್ದರು. ಸ್ಟೈಲ್ ವಿಚಾರದಲ್ಲಿ 'ನವರಸಂ' ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಇನ್ನುಳಿದಂತೆ ಆ ಹಾಡಿಗೂ ಈ ಹಾಡಿಗೂ ಸಂಬಂಧವೇ ಇಲ್ಲ. ಸಂಗೀತದ ಸೂಕ್ಷ್ಮಗಳು ಗೊತ್ತಿರುವವರಿಗೆ ಇದು ಗೊತ್ತಾಗುತ್ತದೆ ಎಂದಿದ್ದರು.

  'ವರಹ ರೂಪಂ' ಟ್ಯೂನ್ ಕದ್ದ ಆರೋಪ: ಫಿಲ್ಮಿಬೀಟ್‌ಗೆ ಅಜನೀಶ್ ಲೋಕನಾಥ್ ಪ್ರತಿಕ್ರಿಯೆ'ವರಹ ರೂಪಂ' ಟ್ಯೂನ್ ಕದ್ದ ಆರೋಪ: ಫಿಲ್ಮಿಬೀಟ್‌ಗೆ ಅಜನೀಶ್ ಲೋಕನಾಥ್ ಪ್ರತಿಕ್ರಿಯೆ

  ಸಂಗೀತದ ಬಗ್ಗೆ ಚೆನ್ನಾಗಿ ಅರಿತಿರುವ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಶ್ವೇಶ್ ಭಟ್ ಈಗ 'ನವರಸಂ' ಹಾಗೂ 'ವರಾಹ ರೂಪಂ' ಹಾಡುಗಳ ನಡುವಿನ ವ್ಯತ್ಯಾಸ ಏನು? ಇದು ಕಾಪಿ ಹೌದೋ, ಅಲ್ಲವೋ ಎನ್ನುವುದನ್ನು ವಿವರಿಸಿದ್ದಾರೆ. ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಬಗ್ಗೆ ಸುದೀರ್ಘ ವಿಡಿಯೋ ಮಾಡಿದ್ದಾರೆ.

  ಹಲವು ರೀತಿಗಳಲ್ಲಿ ವ್ಯತ್ಯಾಸ ವಿವರಣೆ

  ಹಲವು ರೀತಿಗಳಲ್ಲಿ ವ್ಯತ್ಯಾಸ ವಿವರಣೆ

  ಎರಡು ಹಾಡುಗಳ ಗುಣ ಲಕ್ಷಣ, ರಾಗ, ತಾಳ, ಟ್ಯೂನ್, ವಾದ್ಯಗಳು, ಪ್ರಕಾರ ಹೀಗೆ ಹಲವು ವಿಧಗಳಲ್ಲಿ ವಿಶ್ವೇಶ್ ಭಟ್ ಎರಡು ಹಾಡುಗಳ ನಡುವಿನ ವ್ಯತ್ಯಾಸವನ್ನು ತಿಳಿ ಹೇಳಿದ್ದಾರೆ. ಎರಡೂ ಹಾಡುಗಳಲ್ಲಿ ಕಕಕಾಂಗಿ ರಾಗ, ತೋಡಿ ರಾಗ, ಭೈರವಿ ರಾಗದ ಛಾಯೆ ಇದೆ. ಹಾಗಾಗಿ 'ನವರಸಂ' ಹಾಗೂ 'ವರಾಹ ರೂಪಂ' ಒಂದೇ ತರ ಇದೆ ಅನ್ನಿಸೋದು ಸಹಜ. ಹಾಡಿನ ಎಮೋಷನ್‌ ಕೂಡ ಒಂದೇ ತರ ಇದೆ. ಸಂತೋಷ, ದುಃಖ, ಗಾಂಭೀರ್ಯ ಇದೆ.

  2 ಹಾಡುಗಳ ಆರಂಭ ಬೇರೆ ಬೇರೆ

  2 ಹಾಡುಗಳ ಆರಂಭ ಬೇರೆ ಬೇರೆ

  ನೋಟ್ಸ್ ಪ್ರಕಾರ ಪ್ರಕಾರ ಹೇಳುವುದಾದರೆ 'ವರಾಹ ರೂಪಂ' ಹಾಡು ಪಪಪದಮರಿಮಪಪದಮಪಮ ಮೊದಲ ಸಾಲು ಹಾಗೂ ದಸಸಸಮರಿರಿಸ ಎರಡನೇ ಸಾಲಿನಲ್ಲಿ ಬರುತ್ತದೆ. 'ನವರಸಂ' ಹಾಡಿನ ಪಪಮರಿರಿರಿರಿಸ ಅಂತ ಆರಂಭ ಆಗುತ್ತದೆ. ಹಾಗೆ ನೋಡಿದರೆ ಈ ಆರಂಭ ಮತ್ತೊಂದು ಹಾಡಿನಂತೆ ಇದೆ. ಹಾಗಾಗಿ 2 ಹಾಡುಗಳ ಆರಂಭವೇ ಬೇರೆ ಬೇರೆ ತರ ಇದೆ. ರಾಗದ ಫ್ಲೋ ಒಂದೇ ರೀತಿ ಇರಬಹುದು, ಆದರೆ ಟ್ಯೂನ್ ಕಂಪ್ಲೀಟ್ ಡಿಫ್‌ರೆಂಟ್ ಎಂದು ವಿವರಿಸಿದ್ದಾರೆ.

  ಎಲ್ಲಿ ಒಂದೇ ತರ ಇದೆ?

  ಎಲ್ಲಿ ಒಂದೇ ತರ ಇದೆ?

  'ನವರಸಂ' ಅಲ್ಲಿ ಪಿಯಾನೋ ಬಳಸಿದ್ದಾರೆ 'ವರಾಹ ರೂಪಂ' ಅಲ್ಲೂ ಅದೇ ಬಳಸಿದ್ದಾರೆ. ಅಲ್ಲಿ ವಯಲಿನ್ ಬಳಸಿದ್ದರೆ ಇಲ್ಲಿ ಶಹನಾಯ್ ಬಳಸಿದ್ದಾರೆ. ಎರಡೂ ಕೂಡ ಫ್ಯಾಥೋ ಫೀಲ್ ಕೊಡುವಂತದ್ದು. ವಾದ್ಯಗಳ ವಿಚಾರಕ್ಕೆ ಬಂದರೆ ಆರಂಭದಿಂದಲೇ ಬೀಟ್ ಶುರುವಾಗುತ್ತೆ. ಡ್ರಮ್ಸ್, ಚಂಡೇ ಬಳಸಿದ್ದಾರೆ. ಇಲ್ಲೂ ಅದೇ ರೀತಿ ಇದೆ. ಜೊತೆಗೆ ಗಿಟಾರ್ ಬಳಸಿರೋದು ಒಂದೇ ತರಹ ಕಾಣಿಸುತ್ತದೆ. ಡ್ರಮ್ಸ್, ಗಿಟಾರ್, ಚಂಡೇ ಜೊತೆಗೆ ರಾಗದ ಛಾಯೆ ಒಂದೇ ತರ ಇರುವುದರಿಂದ ಎರಡೂ ಒಂದೇ ಎನ್ನಿಸಬಹುದು.

  ವಿಷ್ಯುವಲ್ ಕೂಡ ಒಂದೇ ತರ ಕಾಣಿಸುತ್ತದೆ

  ವಿಷ್ಯುವಲ್ ಕೂಡ ಒಂದೇ ತರ ಕಾಣಿಸುತ್ತದೆ

  'ವರಾಹ ರೂಪಂ' ತುಳುನಾಡಿನ ಹಿನ್ನಲೆಯಲ್ಲಿ ಕಟ್ಟಿಕೊಟ್ಟಿದ್ದರೆ 'ನವರಸಂ' ಕೇರಳದ್ದು. ಎರಡೂ ಕಲ್ಚರ್‌ಗೆ ಬಹಳ ಸಾಮ್ಯತೆ ಇದೆ. ಭೂತಕೋಲದಂತೆಯೇ ಅಲ್ಲಿಯೂ ಒಂದು ಆಚರಣೆ ಇದೆ. ಇಲ್ಲಿ ಯಕ್ಷಗಾನ ಅಲ್ಲಿ ಕತ್ತಕ್ಕಳಿ ಇದ್ದಂತೆ. ಕೆಲವೊಮ್ಮೆ ಎರಡೂ ಒಂದೇ ಅನ್ನಿಸಿಬಿಡುತ್ತದೆ. ಇನ್ನು ಸಾಹಿತ್ಯದ ವಿಚಾರಕ್ಕೆ ಬಂದರೆ ಪದಗಳು 'ವರಾಹ ರೂಪಂ' ಹಾಗೂ 'ನವರಸಂ' ಹೀಗೆ ಕೆಲ ಪದಗಳು ಅಂ ಅಂ ಎಂದು ಮುಕ್ತಾಯವಾಗುತ್ತದೆ. ಹಾಗಾಗಿ ಎರಡೂ ಒಂದೇ ಎಂದು ಅನ್ನಿಸಬಹುದು. ಆದರೆ ಯಾವುದೇ ಕಾರಣಕ್ಕೂ 'ವರಾಹ ರೂಪಂ' ಮಲಯಾಳಂ 'ನವರಸಂ' ಕಾಪಿ ಅಲ್ಲ ಎಂದು ವಿಶ್ಲೇಷಿಸಿದ್ದಾರೆ.

  English summary
  Varaha Roopam Vs Navarasam Detailed comparison Analysis From musician Vishwesh Bhat. Varaha Roopam officially removed from the film’s production house Hombale Film’s official YouTube channel. know more.
  Sunday, November 13, 2022, 19:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X