twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ನೆನಪಿನಲ್ಲಿ 'ಜೈ ಹೋ ಕನ್ನಡಿಗ' ಎಂದು ಹಾಡಿದ ವಿಜಯ್ ಪ್ರಕಾಶ್

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅಭಿಮಾನಿಗಳು ತಮಗೆ ತೋಚಿದ ರೀತಿಯಲ್ಲಿ ಅಭಿಮಾನ ಸಲ್ಲಿಸುತ್ತಿದ್ದಾರೆ. ನೇತ್ರದಾನ, ರಕ್ತದಾನ, ಪುತ್ಥಳಿ ನಿರ್ಮಾಣ ಹೀಗೆ ಅಪ್ಪು ಅಭಿಮಾನಿಗಳು ನೆಚ್ಚಿನ ನಟನನ್ನು ಮರೆಯದ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಈಗ ಅಪ್ಪು ನೆನಪಿನಲ್ಲಿಯೇ 'ಜೈ ಹೋ ಕನ್ನಡ' ಎನ್ನುವ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು 'ಜೈ ಹೋ' ಹಾಡು ಹಾಡಿದ ವಿಜಯ್ ಪ್ರಕಾಶ್ ಹಾಡಿದ್ದಾರೆ.

    ಯುವ ಸಂಗೀತ ನಿರ್ದೇಶಕ ಜಿ ಆರ್ ಶಿವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ಹಾಡೊಂದು ಕಂಪೋಸ್ ಮಾಡಿದ್ದಾರೆ. ಈ ಹಾಡಿನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ಟಾರ್ ಗಾಯಕ ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿರುವುದು ಹಾಡಿಗೆ ಪವರ್ ಸಿಕ್ಕಿದೆ. ಹಾಗಿದ್ದರೆ, ಜೈ ಹೋ ಕನ್ನಡಿಗ ಹಾಡಿನ ವಿಶೇಷತೆಯೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

    ಅಪ್ಪು ನೆನಪಿನಲ್ಲಿಯೇ 'ಜೈ ಹೋ ಕನ್ನಡಿಗ' ಹಾಡು ರಿಲೀಸ್

    'ಜೈ ಹೋ ಕನ್ನಡಿಗ' ಹಾಡನ್ನು ರಚಿಸಿ, ಸಂಗೀತ ನೀಡಿರುವ ಜಿ ಆರ್ ಶಿವಗೆ ಅಪ್ಪುಗೆ ವಿಶೇಷ ಸ್ಥಾನವನ್ನು ನೀಡಿದ್ದಾರೆ. ಶಿವ ಕೆಲವು ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ಒರಟ ಐ ಲವ್ ಯು' ಚಿತ್ರದಲ್ಲಿ ಸಂಗೀತ ನಿರ್ದೇಶಕ ಜಿ.ಆರ್.ಶಂಕರ್ ಅವರೊಂದಿಗೆ ಕೆಲಸ ಮಾಡಿದ್ದರು. ಬಳಿಕ 'ಈ ಸಂಜೆ' ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವವಿದೆ.‌ಈಗ ಮತ್ತೆ ಸಿನಿಮಾ ಸಂಗೀತ ಕ್ಷೇತ್ರಕ್ಕೆ ಮರಳಿ ಬಂದಿದ್ದಾರೆ. 'ಜೈಹೋ ಕನ್ನಡಿಗ' ಎಂಬ ಹಾಡನ್ನು ಬರೆದು ಅದಕ್ಕೆ ಸಂಗೀತ ನೀಡಿದ್ದಾರೆ.

    Vijay Prakash sung Jai Ho Kannadiga song released in the memory of Puneeth Rajkumar

    'ಜೈ ಶೋ ಕನ್ನಡಿಗ' ಹಾಡಿನಲ್ಲಿ ದಿಗ್ಗಜರ ನಟನೆ

    ಜಿ ಆರ್ ಶಿವ ಸಂಗೀತ ನೀಡಿದ 'ಜೈ ಹೋ ಕನ್ನಡಿಗ' ಹಾಡನ್ನು ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಿಸಿದ್ದು ವಿಶೇಷ. ಈ ಹಾಡಿನಲ್ಲಿ ಜೆ.ಆರ್. ಶಿವ, ಸಂಗೀತ ನಿರ್ದೇಶಕರಾದ ಹಂಸಲೇಖ, ವಿ.ಮನೋಹರ್, ಶ್ರೀಧರ್ ವಿ ಸಂಭ್ರಮ್, ನಿರ್ಮಾಪಕ ಸಿ.ಆರ್.ಮನೋಹರ್, ಕೆ.ಮಂಜು, ನಟ , ಅನಿರುದ್ಧ್, ಮಾಸ್ಟರ್ ಆನಂದ್, ಧರ್ಮ ಕೀರ್ತಿರಾಜ್, ಧರ್ಮ, ಸಿನಿ ಸಾಹಿತಿ ವಿ.ನಾಗೇಂದ್ರ ಪ್ರಸಾದ್, ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಸಾಲುಮರದ ತಿಮ್ಮಕ್ಕ, ಪೊಲೀಸ್ ಅಧಿಕಾರಿಗಳು ಮಕ್ಕಳು ಅಭಿನಯಿಸಿದ್ದಾರೆ.

    Vijay Prakash sung Jai Ho Kannadiga song released in the memory of Puneeth Rajkumar

    'ಜೈ ಶೋ ಕನ್ನಡಿಗ' ಹಾಡನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಈ ಹಾಡನ್ನು ಪದ್ಮಶ್ರೀ ದೊಡ್ಡರಂಗೇಗೌಡ, ನಿರ್ಮಾಪಕ ಸಿ.ಆರ್.ಮನೋಹರ್ ಸೇರಿದಂತೆ ಹಲವು ಗಣ್ಯರು ಸೇರಿ ಹಾಡನ್ನು ಬಿಡುಗಡೆ ಮಾಡಿದರು. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಶಿವ, ಬರೆದಿರುವ ಹಾಡು ಅನುಭವವಿರುವವರು ಸಾಹಿತಿ ಬರೆದ ಹಾಗಿದೆ ಹಿರಿಯ ಸಾಹಿತಿ ದೊಡ್ಡರಂಗೇಗೌಡ ಹರ್ಷ ವ್ಯಕ್ತ ಪಡಿಸಿದ್ದಾರೆ.

    ಅಪ್ಪು ನನಗೆ ಗಾಡ್ ಫಾದರ್ ಎಂದ ಸಂಗೀತ ನಿರ್ದೇಶಕ ಶಿವ

    ಬಹಳ ದಿನಗಳ ಬಳಿಕ ಶಿವ ಮರಳಿ ಚಿತ್ರರಂಗಕ್ಕೆ ಬಂದಿದ್ದರಿಂದ ಖುಷಿಯಾಗಿದ್ದಾರೆ. ಅದರಲ್ಲೂ ತಾನು ಸಂಗೀತ ನೀಡಿದ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದಕ್ಕೆ ಖುಷಿಯಾಗಿದ್ದಾರೆ. ಅಂದ ಹಾಗೆ ಈ ಹಾಡನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡುತ್ತಿರುವುದಕ್ಕೆ ಒಂದು ಕಾರಣವಿದೆ. ಶಿವ ಜೀವನದಲ್ಲಿ ಮೂರು ಜ‌ನ ಗಾಡ್ ಫಾದರ್ ಇದ್ದಾರೆ. ಅವರಲ್ಲಿ ಒಬ್ಬರು ಶಿವ ತಂದೆ. ಇನ್ನೊಬ್ಬರು ನಿರ್ಮಾಪಕ ಸಿ.ಆರ್ ಮನೋಹರ್ ಮತ್ತೊಬ್ಬರು ಪುನೀತ್ ರಾಜ್‌ಕುಮಾರ್ ಎಂದು ಹೇಳುತ್ತಾ ಶಿವ ಭಾವುಕರಾಗಿದ್ದಾರೆ.

    English summary
    Vijay Prakash sung Jai Ho Kannadiga song released in the memory of Puneeth Rajkumar. G R Shiva who composed song was released by Doddarange Gowda and C R Monohar.
    Tuesday, December 28, 2021, 19:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X