»   » ಜನಪದದಲ್ಲೂ ಹೊಸ ಸ್ಟೈಲ್, ಇದು ಶಚಿನ ಅವರ 'ದಿಬ್ಬರದಿಂಡಿ'

ಜನಪದದಲ್ಲೂ ಹೊಸ ಸ್ಟೈಲ್, ಇದು ಶಚಿನ ಅವರ 'ದಿಬ್ಬರದಿಂಡಿ'

Posted By:
Subscribe to Filmibeat Kannada

ಕನ್ನಡದ ಕನ್ನಿಕಾ ಕಪೂರ್ ಅಂತಾನೇ ಖ್ಯಾತಿ ಗಳಿಸಿರುವ ಗಾಯಕಿ ಶಚಿನ ಹೆಗ್ಗಾರ್ ಅವರ ಧ್ವನಿಯಂತೂ ಅದ್ಭುತ. ಕೊಂಚ ಡಿಫರೆಂಟ್ ಆಗಿರುವ ಇವರ ಧ್ವನಿಯಲ್ಲಿ 'ಕಡ್ಡಿಪುಡಿ' ಚಿತ್ರದ 'ಹೆದರಬ್ಯಾಡ್ರಿ..ಅಂತ ಗಂಡಗೆ ಧೈರ್ಯ ಕೊಟ್ಟಾಳ್ರೀ...'ಹಾಡಂತೂ ಸಖತ್ ಆಗಿ ಮೂಡಿಬಂದಿತ್ತು.

ಜೊತೆಗೆ ಈ ಹಾಡಿಗೆ ಶಚಿನ ಅವರಿಗೆ 'ಉತ್ತಮ ಗಾಯಕಿ' ಅಂತ ರಾಜ್ಯ ಪ್ರಶಸ್ತಿ ಕೂಡ ದೊರೆತಿತ್ತು. ಅಂದಹಾಗೆ ಗಾಯಕಿ ಶಚಿನ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಹಾಕಲು ಕಾರಣ ಏನಪ್ಪಾ ಅಂದ್ರೆ, ಶಚಿನ ಅವರೀಗ ಒಂದು ವಿಭಿನ್ನ ಆಲ್ಬಂ ಒಂದನ್ನು ಹೊರತಂದಿದ್ದಾರೆ.[ಮುಂಗಾರು ಮಳೆ 2 : 'ಸರಿಯಾಗಿ ನೆನಪಿದೆ' ಜಯಂತ್ ಸಾಹಿತ್ಯ]

Watch 'Dibbaradindi' kannada music video

ಜನಪದಕ್ಕೆ ರ್ಯಾಪ್ ಟಚ್ ಕೊಡುವಲ್ಲಿ ಖ್ಯಾತಿ ಗಳಿಸಿರುವ ಗಾಯಕಿ ಶಚಿನ ಅವರು ಇದೀಗ 'ದಿಬ್ಬರದಿಂಡಿ' ಎಂಬ ಹೊಚ್ಚ ಹೊಸ ಆಲ್ಬಂ ಸಾಂಗ್ ಒಂದನ್ನು ರಿಲೀಸ್ ಮಾಡಿದ್ದಾರೆ. ಈ ಹಾಡಿಗೆ ಬರೀ ವಾಯ್ಸ್ ಕೊಡೋದು ಮಾತ್ರವಲ್ಲದೇ, ಸಖತ್ ಆಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ.

ಮಸ್ತ್ ಸಾಂಗ್, ಜಬರ್ದಸ್ತ್ ಡ್ಯಾನ್ಸ್, ಸೂಪರ್ ವಾಯ್ಸ್ ಇರುವ 'ದಿಬ್ಬರದಿಂಡಿ' ಅನ್ನೋ ಹಾಡು ಒಂಥರಾ ವಿಭಿನ್ನವಾಗಿದೆ. ಈ ಹಾಡಿಗೆ ಭುವನ್ ಗೌಡ ಅವರು ಕ್ಯಾಮೆರಾ ಕೈ ಚಳಕ ತೋರಿದ್ದು, ಸಖತ್ ಕಲರ್ ಫುಲ್ ಆಗಿ ಮೂಡಿಬಂದಿದೆ.[2015ರ ಟಾಪ್ 15 ಹಾಡುಗಳು: ಇದರಲ್ಲಿ ನಿಮ್ಮ ಆಯ್ಕೆಯಾವುದು?]

ಅನಿಲ್ ಯುವರಾಜ್ ಬಂಡವಾಳ ಹೂಡಿ, ಜೂಡ ಸ್ಯಾಂಡಿ ಮ್ಯೂಸಿಕ್ ಕಂಪೋಸ್ ಮಾಡಿರುವ 'ದಿಬ್ಬರದಿಂಡಿ'ಯಲ್ಲಿ ಶಚಿನ ಮತ್ತು ಸ್ಕಂದ ಅಶೋಕ್ ಪ್ರಮುಖ ಪಾತ್ರ ವಹಿಸಿದ್ದು, ಈಗಿನ ಯುವಜನತೆಗೆ ಈ ಹಾಡು ಭಾರಿ ಇಷ್ಟವಾಗೋದು ಗ್ಯಾರೆಂಟಿ.

ಅಂತೂ ಹೊಸತನ ಬಯಸೋ ಸಂಗೀತ ಪ್ರಿಯರಿಗೆ ಹೇಳಿ ಮಾಡಿಸಿದಂತಿರುವ 'ದಿಬ್ಬರದಿಂಡಿ' ಹಾಡಿನ ವಿಡಿಯೋವನ್ನು ನಿಮಗಾಗಿ ಹೊತ್ತು ತಂದಿದ್ದೇವೆ. ನೋಡಿ ಎಂಜಾಯ್ ಮಾಡಿ...

English summary
Watch 'Dibbaradindi' kannada music video by Shachina Heggar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada