»   » ಗಾಯನದಲ್ಲಿ ಮೂರನೇ ಇನ್ನಿಂಗ್ಸ್ ಆರಂಭಿಸಿದ ರೋರಿಂಗ್ ಸ್ಟಾರ್

ಗಾಯನದಲ್ಲಿ ಮೂರನೇ ಇನ್ನಿಂಗ್ಸ್ ಆರಂಭಿಸಿದ ರೋರಿಂಗ್ ಸ್ಟಾರ್

Posted By:
Subscribe to Filmibeat Kannada

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಕುಂದಾಪುರ ಬಾಷೆಯಲ್ಲಿ 'ಬಿಲಿಂಡರ್' ಅಂತ ವಿಭಿನ್ನ ಸಿನಿಮಾ ಮಾಡುತ್ತಿದ್ದಾರೆ ಅಂತ ನಾವು ನಿಮಗೆ ಈ ಮೊದಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ತಾನೆ.

ಮಾತ್ರವಲ್ಲದೇ ಆ ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಧ್ವನಿ ನೀಡಿದ್ದಾರೆ ಅಂತಾನೂ ನಾವು ನಿಮಗೆ ಹೇಳಿದ್ವಿ. ಇದೀಗ ಅದೇ ಚಿತ್ರದ ಮತ್ತೊಂದು ಸೂಪರ್ ಹಿಟ್ ಸಾಂಗ್ ಗೆ 'ಉಗ್ರಂ' ಹಾಗೂ 'ರಥಾವರ' ಖ್ಯಾತಿಯ ಕನ್ನಡ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ತಮ್ಮ ಧ್ವನಿ ನೀಡಿದ್ದಾರೆ.['ಟಕರ್ ಟಕರ್ ಟಂವ್ ಟಂವ್' ಅಂತಾವ್ರೆ ಪವರ್ ಸ್ಟಾರ್ ಪುನೀತ್]

Watch Kannada Movie 'Bilindar's 'Bilindar Entry Kottandhre' Song

ಪಕ್ಕಾ ಕುಂದಾಪುರ ಭಾಷೆ ಶೈಲಿಯಲ್ಲಿ ಮೂಡಿ ಬರುತ್ತಿರುವ 'ಬಿಲಿಂಡರ್' ಚಿತ್ರದ ನಾಯಕ 'ಬಿಲಿಂಡರ್' ಎಂಟ್ರಿ ಆಗುವಾಗ ಅವನಿಗೆ ಹಾಡಿನ ಮೂಲಕ ಬಿಲ್ಡಪ್ ಕೊಡಲಾಗುತ್ತದೆ. ನಾಯಕ 'ಬಿಲಿಂಡರ್' ಎಂಟ್ರಿ ಹಾಡನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಸಖತ್ತಾಗಿ ಕುಂದಾಪುರ ಭಾಷೆಯಲ್ಲಿ ಹಾಡಿದ್ದಾರೆ.

ಹಾಡುಗಾರಿಕೆಯಲ್ಲಿ ಮೂರನೇ ಇನ್ನಿಂಗ್ಸ್ ಆರಂಭಿಸಿರುವ ನಟ ಶ್ರೀಮುರಳಿ ಅವರು ಮೊಟ್ಟ ಮೊದಲು ಹಾಡಿದ್ದು ಅವರದೇ 'ರಥಾವರ' ಚಿತ್ರದ 'ಹುಡುಗಿ ಕಣ್ಣು' ಎಂಬ ಹಾಡಿಗೆ. ಇದೀಗ ಕುಂದಾಪುರ ಭಾಷೆಯಲ್ಲಿ ಹಾಡಿ, ನಟನೆಗೂ ಸೈ, ಹಾಡಲೂ ಸೈ ಅಂತ ಎನಿಸಿಕೊಂಡಿದ್ದಾರೆ.['ZOOಮ್' ಚಿತ್ರಕ್ಕೆ 'ಗಾನ ಕೋಗಿಲೆ' ಆದರು ನಟಿ ರಾಧಿಕಾ ಪಂಡಿತ್!]

ಶ್ರೀಮುರಳಿ ಅವರ 'ಉಗ್ರಂ' ಮತ್ತು 'ರಥಾವರ' ಚಿತ್ರಕ್ಕೆ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಇದೀಗ ರವಿ ಅವರ ವಿನೂತನ ಪ್ರಯತ್ನಕ್ಕೆ ಶ್ರೀಮುರಳಿ ಅವರು ಕೈ ಜೋಡಿಸಿದ್ದಾರೆ.

ಶ್ರೀಮುರಳಿ ಅವರು ಎನರ್ಜಿಟಿಕ್ ಆಗಿ ಡೈಲಾಗ್ ಸಮೇತ ಹಾಡಿರುವ ಬಿಲಿಂಡರ್ ಚಿತ್ರದ ಹಾಡಿನ ಮೇಕಿಂಗ್ ವಿಡಿಯೋ ಕೇವಲ ನಿಮಗಾಗಿ ನೋಡಿ ಆನಂದಿಸಿ..

English summary
Watch Kannada Movie 'Bilindar's 'Bilindar Entry Kottandhre' Song Sung by Kannada Actor Roaring Star Sri Murali. Music Directed by Ravi Basrur.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada