»   » 'ಜಗ್ಗುದಾದಾ' ದರ್ಶನ್ ಗೆ ತಲೆಕೆಡಿಸಿದ 'ಆ' ಹುಡುಗಿ ಯಾರು?

'ಜಗ್ಗುದಾದಾ' ದರ್ಶನ್ ಗೆ ತಲೆಕೆಡಿಸಿದ 'ಆ' ಹುಡುಗಿ ಯಾರು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ 'ಜಗ್ಗುದಾದಾ' ತೆರೆ ಮೇಲೆ ಬರಲು ತಯಾರಾಗಿ ನಿಂತಿದ್ದು, ಈಗಾಗಲೇ ಚಿತ್ರಮಂದಿರಗಳ ಲಿಸ್ಟ್ ಹೊರಬಿದ್ದಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರ 'ಸಂತೋಷ್' ನಲ್ಲಿ 'ಜಗ್ಗುದಾದಾ' ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣಲಿದೆ.

ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಅದರಲ್ಲೂ 'ಸಿಕ್ಕಳು, ನಕ್ಕಳು, ಹಿಡಿಸಿಬಿಟ್ಟಳು ತಿಕ್ಕಲು' ಮತ್ತು 'ತಲೆ ಕೆಡುತ್ತೆ' ಹಾಡುಗಳು ತುಂಬಾ ಚೆನ್ನಾಗಿದ್ದು, ಕೇಳಲು ಖುಷಿ ಎನಿಸುತ್ತದೆ.[ದರ್ಶನ್ ಅಭಿನಯದ 'ಜಗ್ಗುದಾದಾ' ಆಡಿಯೋ ವಿಮರ್ಶೆ]


Watch Kannada Movie 'Jaggu Dada' 'Thale Keduthe' video song

'ಸಿಕ್ಕಳು, ನಕ್ಕಳು' ಹಾಡಲ್ಲಿ 'ಎನ್ನ ಪೊಣ್ಣು ಮಸ್ತ್ ಪೊರ್ಲು ಉಲ್ಲಳ್' ಅಂತ ಒಂದು ಲೈನ್ ತುಳು ಭಾಷೆಯನ್ನು ಬಳಸಿಕೊಳ್ಳಲಾಗಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿದೆ.


ಇನ್ನು ಇಟಲಿಯಲ್ಲಿ ಚಿತ್ರೀಕರಣ ಮಾಡಿರುವ 'ತಲೆ ಕೆಡುತ್ತೆ ಹುಡುಗಿ, ನನ್ನ ನೋಡಬೇಡ' ಎಂಬ ಹಾಡಿನ ವಿಡಿಯೋ ಸಾಂಗ್ ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ದೊರೆತಿದ್ದು, ಅದನ್ನು ನಿಮಗಾಗಿ ಹೊತ್ತು ತಂದಿದ್ದೇವೆ.[ದರ್ಶನ್ 'ಜಗ್ಗುದಾದಾ' ಬಿಡುಗಡೆಗೆ ದಿನಗಣನೆ ಶುರು ಗುರು.!]


Watch Kannada Movie 'Jaggu Dada' 'Thale Keduthe' video song

ಈ ಹಾಡಿನಲ್ಲಿ ದರ್ಶನ್ ಮತ್ತು ನಟಿ ದೀಕ್ಷಾ ಸೇಠ್ ಅವರು ತುಂಬಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡು ತುಂಬಾ ನಿಧಾನವಾಗಿ ಜೊತೆಗೆ ಸೈಲೆಂಟ್ ಆಗಿದ್ದು, ನೋಡುಗರ ಮನಸ್ಸಿಗೆ ತುಂಬಾ ಮುದ ನೀಡುತ್ತದೆ.


ಈ ಹಾಡಿನಲ್ಲಿ ಇಟಲಿಯ ಸುಂದರ ಪರಿಸರವನ್ನು ಸೆರೆ ಹಿಡಿಯಲಾಗಿದೆ. ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ಅಕ್ಷನ್-ಕಟ್ ಹೇಳಿರುವ ಈ ಚಿತ್ರ ದರ್ಶನ್ ಅಭಿಮಾನಿಗಳಲ್ಲಿ ತುಂಬಾ ಕುತೂಹಲ ಹುಟ್ಟಿಸಿದೆ.


ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. 'ತಲೆ ಕೆಡುತ್ತೆ ಹುಡುಗಿ' ಎಂಬ ರೋಮ್ಯಾಂಟಿಕ್ ಹಾಡಿನ ವಿಡಿಯೋ ಇಲ್ಲಿದೆ ನೋಡಿ ಎಂಜಾಯ್ ಮಾಡಿ....


Watch Kannada Movie 'Jaggu Dada' 'Thale Keduthe' video song

English summary
Watch 'Thale Keduthe' Full Video Song from the movie 'Jaggu Dada'. Starring Challenging Star Darshan, Actress Deeksha Seth, Actor Srujan Lokesh and others. Directed by Raghavendra Hegde. Music Composed by V. Harikrishna.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X