For Quick Alerts
  ALLOW NOTIFICATIONS  
  For Daily Alerts

  'ಸುಮ್ಮನೆ' ಹಾಡು ಕೇಳಿ ಹಾಗೆ ಒಮ್ಮೆ ಕಳೆದು ಹೋಗಿ

  By Suneetha
  |

  ವಿನಯ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ ಎರಡನೇ ಸಿನಿಮಾ 'ರನ್ ಆಂಟನಿ' ತೆರೆಗೆ ಬರಲು ಸಜ್ಜಾಗಿದೆ. ಇದೇ ಶುಕ್ರವಾರ, ಜುಲೈ 8 ಕ್ಕೆ ಅದ್ದೂರಿಯಾಗಿ ಇಡೀ ಕರ್ನಾಟಕದಾದ್ಯಂತ 'ರನ್ ಆಂಟನಿ' ತೆರೆ ಮೇಲೆ ಓಡಲಿದ್ದಾರೆ.

  ಇದೀಗ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿರುವಾಗಲೇ ಚಿತ್ರತಂಡ ಅಭಿಮಾನಿಗಳಿಗೋಸ್ಕರ ಅಂತ ಚಿತ್ರದ ರೋಮ್ಯಾಂಟಿಕ್ ವಿಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದಾರೆ.[ವಿನಯ್ ರಾಜ್ ಜೊತೆಗೆ ಪೈಪೋಟಿಗಿಳಿದ ವಿಜಯ ರಾಘವೇಂದ್ರ]

  ಈ ಹಾಡಿನಲ್ಲಿ ವಿನಯ್ ರಾಜ್ ಕುಮಾರ್ ಮತ್ತು ನಟಿ ರುಕ್ಸಾರ್ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಮುದ್ದಾದ ಅಭಿನಯದ ಮೂಲಕ ಸಂಗೀತ ಪ್ರಿಯರ ಮನಸ್ಸಿಗೆ ಮುದ ನೀಡುತ್ತಾರೆ.

  'ಸೆಲೆ ಸೆಲೆ ನಗುವಿನ ಸೆಲೆ, ಬಲೆ ಬಲೆ ನೆನಪಿನ ಬಲೆ, ಸುಮ್ಮನೇ ಸುಮ್ಮನೇ, ಪದೇ ಪದೇ ನೋಡಿ, ಎದುರಲಿ ಮೂಡಿ ಸೆಳೆಯುವ ನನ್ನನೇ' ಅನ್ನೋ ಸುಂದರವಾದ ರೋಮ್ಯಾಂಟಿಕ್ ಹಾಡು ಮನಸ್ಸಿಗೆ ಹಿತವಾಗಿ ತಂಗಾಳಿ ಬೀಸಿದಂತಾಗುತ್ತದೆ.['ರನ್ ಆಂಟನಿ' ಆಡಿಯೋ ವಿಮರ್ಶೆ: ಗಮನ ಸೆಳೆಯುವ ಹಾಡುಗಳು]

  ಅಂದಹಾಗೆ ಈ ಸುಂದರವಾದ ಹಾಡನ್ನು ಕ್ಯಾಮೆರಾ ಕಣ್ಣಲ್ಲಿ ಅದ್ಭುತವಾಗಿ ತೋರಿಸಿರುವ ಮನೋಹರ್ ಜೋಷಿ ಅವರು ವಾವ್ ಎನಿಸಿಕೊಳ್ಳುತ್ತಾರೆ. ಇದಕ್ಕೆ ತಕ್ಕಂತೆ ಮಣಿಕಾಂತ್ ಕದ್ರಿ ಅವರ ಮ್ಯೂಸಿಕ್ ಕಂಪೋಸಿಷನ್ ಕೂಡ ಬಹಳ ಸುಂದರವಾಗಿ ಮೂಡಿಬಂದಿದೆ.

  ನಿಮ್ಮನ್ನು ಕೂಡ ಈ ಹಾಡು ಖಂಡಿತವಾಗಿಯೂ ಸೆಳೆದುಕೊಳ್ಳಬಹುದು, ಹಾಗಾಗಿ ತಪ್ಪದೇ ಈ ರೋಮ್ಯಾಂಟಿಕ್ ಹಾಡು ನೋಡಿ....

  ರಘು ಶಾಸ್ತ್ರಿ ಅವರು 'ರನ್ ಆಂಟನಿ' ಚಿತ್ರದ ಕಥೆ-ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ವಜ್ರೇಶ್ವರಿ ಹಾಸ್ಪಿಟಾಲಿಟೀಸ್ ಸಂಸ್ಥೆಯಿಂದ ಈ ಸಿನಿಮಾ ಮೂಡಿಬಂದಿದೆ.[ಜಗ್ಗೇಶ್, ಕಿಚ್ಚ, ಶಿವಣ್ಣಗೆ ಯಾರನ್ನ ಕಂಡ್ರೆ 'ಆಗಲ್ಲಾಂತ' ನಿಮಗ್ಗೊತ್ತಾ?]

  ಸಿನಿಮಾ ಬಿಡುಗಡೆಗೆ ಇನ್ನೂ ನಾಲ್ಕು ದಿನಗಳ ಕಾಲ ಸಮಯ ಇರೋದ್ರಿಂದ ಸದ್ಯಕ್ಕೆ ಈಗಾಗಲೇ ಬಿಡುಗಡೆ ಆಗಿರುವ 'ಸುಮ್ಮನೆ' ಹಾಡನ್ನು ಒಂದ್ಸಾರಿ ನೋಡಿ ನೀವೂ ಒಮ್ಮೆ 'ಸುಮ್ಮನೆ' ಕಳೆದು ಹೋಗಿ.

  English summary
  Watch 'Summane' Video Song from Kannada Movie 'Run Antony'. Starring Actor Vinay Rajkumar, Devaraj, Actress Sushmitha, Ruksha Mir and others. Music composed by Kadri Manikanth. Directed by Raghu Shastry V.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X