»   » 'ತಾರಕ್' ಚಿತ್ರದ 'ಬಾ ಬಾರೋ' ಹಾಡಿನ ಟೀಸರ್ ನೋಡಿದ್ರಾ.?

'ತಾರಕ್' ಚಿತ್ರದ 'ಬಾ ಬಾರೋ' ಹಾಡಿನ ಟೀಸರ್ ನೋಡಿದ್ರಾ.?

Posted By:
Subscribe to Filmibeat Kannada

ಬಹು ನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಿಲನ' ಪ್ರಕಾಶ್ ನಿರ್ದೇಶನದ 'ತಾರಕ್' ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ 'ಬಾ ಬಾರೋ..' ಹಾಡಿನ ಟೀಸರ್ ರಿಲೀಸ್ ಆಗಿದೆ.

ಬಹುತೇಕ ವಿದೇಶಗಳಲ್ಲಿ ಚಿತ್ರೀಕರಣಗೊಂಡಿರುವ 'ತಾರಕ್', ದರ್ಶನ್ ರವರ 49ನೇ ಸಿನಿಮಾ. ಸದಭಿರುಚಿಯ ಸಿನಿಮಾಗಳಿಂದಲೇ ಜನಪ್ರಿಯತೆ ಗಳಿಸಿರುವ 'ಮಿಲನ' ಪ್ರಕಾಶ್ ಮೊದಲ ಬಾರಿಗೆ ದರ್ಶನ್ ರವರಿಗೆ ಆಕ್ಷನ್ ಕಟ್ ಹೇಳಿರುವುದರಿಂದ 'ತಾರಕ್' ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಸಹಜವಾಗಿಯೇ ನಿರೀಕ್ಷೆ ಸ್ವಲ್ಪ ಜಾಸ್ತಿ ಇದೆ.

Watch Kannada Movie 'Tarak' Ba Baro song teaser

'ತಾರಕ್' ಚಿತ್ರದಲ್ಲಿ ಅಮೇರಿಕನ್ ಫುಟ್ ಬಾಲ್ ಪ್ಲೇಯರ್ (ರಗ್ಬಿ ಪ್ಲೇಯರ್) ಆಗಿ ಕಾಣಿಸಿಕೊಂಡಿರುವ ದರ್ಶನ್ ಗೆ ಶ್ರುತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾಸ್ತವ ನಾಯಕಿಯರು.

ಅರ್ಜುನ್ ಜನ್ಯ ಕಂಪೋಸ್ ಮಾಡಿರುವ 'ತಾರಕ್' ಆಡಿಯೋ ಆಗಸ್ಟ್ 17 ರಂದು ಲಾಂಚ್ ಆಗಲಿದೆ. ಅದಕ್ಕೂ ಮುನ್ನ 'ತಾರಕ್' ಚಿತ್ರದ 'ಬಾ ಬಾರೋ...' ಹಾಡಿನ ಟೀಸರ್ ಇಲ್ಲಿದೆ. ಒಮ್ಮೆ.. ನೋಡ್ಬಿಡಿ.. ಕೇಳ್ಬಿಡಿ...

English summary
Challenging Star Darshan starrer Kannada Movie 'Tarak' song teaser is out. Watch 'Ba Baro..' song teaser here...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada