»   » ಶಿವರಾಜ್ ಕುಮಾರು ಮಿಸ್ಸಿಗೆ ಢಮಾರು...ಕೇಳಣ್ಣೋ...

ಶಿವರಾಜ್ ಕುಮಾರು ಮಿಸ್ಸಿಗೆ ಢಮಾರು...ಕೇಳಣ್ಣೋ...

Posted By:
Subscribe to Filmibeat Kannada

''ಶಿವರಾಜ್ ಕುಮಾರು ಕಿಸ್ಸಿಗೆ ಢಮಾರು...ಕೇಳಣ್ಣೋ...''. ಸೂಪರ್ ಹಿಟ್ 'ಓಂ' ಸಿನಿಮಾದ ಈ ಜನಪ್ರಿಯ ಸಾಲುಗಳನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ ಹೇಳಿ. ಹಂಸಲೇಖ ಸಂಗೀತ ಸಂಯೋಜನೆಯ ''ಕೋಮಾ...ಪೇಮಾ...'' ಹಾಡು ಇಂದಿಗೂ ಅನೇಕ ಯುವಕರ ಪಾಲಿಗೆ ಸುಪ್ರಭಾತ.

ಈಗ ಯಾಕೆ ಈ ಹಾಡಿನ ಸುದ್ದಿ ಅಂದ್ರೆ, ಅಂದು ಕಿಸ್ಸಿಗೆ ಢಮಾರ್ ಆಗಿದ್ದ ಶಿವಣ್ಣ ಇಂದು ಮಿಸ್ಸಿಗೆ ಢಮಾರ್ ಆಗಿದ್ದಾರೆ. ''ಶಿವರಾಜ್ ಕುಮಾರು ಮಿಸ್ಸಿಗೆ ಢಮಾರು...'' ಅನ್ನುವ ಸಾಲುಗಳು ಅವರ ಮುಂದಿನ ಚಿತ್ರ 'ವಜ್ರಕಾಯ' ಹಾಡಿನಲ್ಲಿದೆ. [ಶಿವಣ್ಣ 'ವಜ್ರಕಾಯ' ಹಾಡುಗಳಿಗೂ ಬಂದ್ ಬಿಸಿ]


ಹೌದು, 'ವಜ್ರಕಾಯ' ಆಡಿಯೋ ಇದೇ ವಾರ, ಏಪ್ರಿಲ್ 18 ರಂದು ರಿಲೀಸ್ ಆಗಬೇಕಿತ್ತು. ಆದ್ರೆ, 'ಕರ್ನಾಟಕ ಬಂದ್' ಪರಿಣಾಮ 'ವಜ್ರಕಾಯ' ಹಾಡುಗಳು ಏಪ್ರಿಲ್ 21 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಅಷ್ಟರೊಳಗೆ ನಿರ್ದೇಶಕ ಹರ್ಷ, 'ವಜ್ರಕಾಯ' ಚಿತ್ರದ ಸೂಪರ್ ಸಾಂಗ್ ಮೇಕಿಂಗ್ ಒಂದನ್ನ ಬಿಡುಗಡೆ ಮಾಡಿದ್ದಾರೆ. ಅದನ್ನ ನೀವೇ ನಿಮ್ಮ ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ.....


Watch Kannada movie Vajrakaya song making 'No Problem' feat Dhanush

ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಹಾಡಿರುವ ಕನ್ನಡ ಕೊಲವೆರಿಡಿ ''ನೋ ಪ್ರಾಬ್ಲಂ..'' ಹಾಡಿನ ಮೇಕಿಂಗ್ ಇದು. ಚಿತ್ರಸಾಹಿತಿ ಮೋಹನ್ ಬರೆದಿರುವ ''ನೋ ಪ್ರಾಬ್ಲಂ....ನೋ ಪ್ರಾಬ್ಲಂ...'' ಹಾಡನ್ನ ತಮಿಳಿನ ''ವೈ ದಿಸ್ ಕೊಲವೆರಿಡಿ...'' ರೇಂಜಲ್ಲಿ ದನಿಗೂಡಿಸಿದ್ದಾರೆ ಧನುಷ್. [ಕನ್ನಡದಲ್ಲಿ ಕೊಲವೆರಿಡಿ ಹಾಡು ಬಂದಿದೆ, ಹೆಡ್ ಸೆಟ್ ಹಾಕ್ಕೊಳ್ಳಿ]


ಫುಲ್ ಜೋಷ್ ನಲ್ಲಿ ಧನುಷ್ ಹಾಡುತ್ತಿದ್ದರೆ, ಅಷ್ಟೇ ಜೋಷ್ ನಲ್ಲಿ ಶಿವಣ್ಣ ನಿಂತಲ್ಲೇ ಸ್ಟೆಪ್ ಹಾಕುತ್ತಿರುವ ಅಪರೂಪದ ಮೇಕಿಂಗ್ ವಿಡಿಯೋ 'ವಜ್ರಕಾಯ' ಅಡ್ಡದಿಂದ ಹೊರಬಂದಿದೆ. ಸಖತ್ ಕ್ಯಾಚಿ ಆಗಿರುವ ''ನೋ ಪ್ರಾಬ್ಲಂ...'' ಹಾಡಲ್ಲಿ ''ಶ್ರೀರಾಮನಿಗಾಗಿ ಸೀತಾ...ಶಿವುಗಾಗಿ ಗೀತಾ...ನಂಗೆ ನೀನು ಸ್ವಂತ...'' ಅನ್ನುವ ಸಾಹಿತ್ಯ ಕೂಡ ಇದೆ.


ಇದೇ ಹಾಡಲ್ಲಿ ಬರುವ ರ್ಯಾಪ್ ಪೊರ್ಷನ್ ನಲ್ಲಿ ''ಐ ಡೋಂಟ್ ವಾಂಟ್ ಅಂದರೂ ಲವ್ವು ಆಗುತ್ತೈತೆ...ಶಿವರಾಜ್ ಕುಮಾರು ಮಿಸ್ಸಿಗೆ ಢಮಾರು...'' ಅನ್ನುವ ಪಂಚ್ ಕೊಟ್ಟು ಹಾಡಿಗೆ ಮತ್ತಷ್ಟು ಮೆರಗು ನೀಡಲಾಗಿದೆ.


Watch Kannada movie Vajrakaya song making 'No Problem' feat Dhanush

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ನಿರ್ದೇಶಕ ಎ.ಹರ್ಷ, ನಿರ್ಮಾಪಕರು ಸೇರಿದಂತೆ 'ವಜ್ರಕಾಯ' ಚಿತ್ರತಂಡ ಧನುಷ್ ಹಾಡಿರುವ ''ನೋ ಪ್ರಾಬ್ಲಂ..'' ಹಾಡಿನ ರೆಕಾರ್ಡಿಂಗ್ ವೇಳೆ ಸ್ಟುಡಿಯೋದಲ್ಲಿದ್ದದ್ದು ವಿಶೇಷ. ಇದಿಷ್ಟು ಸ್ಯಾಂಪಲ್ ಅಷ್ಟೆ, ಪೂರಾ ಆಲ್ಬಂ ರಿಲೀಸ್ ಆಗುವವರೆಗೂ ಯಾವುದೇ ಪ್ರಾಬ್ಲಂ ಇಲ್ದೇ ''ನೋ ಪ್ರಾಬ್ಲಂ...'' ಹಾಡನ್ನ ಗುನುಗುತ್ತಿರಿ.


ಯಾಕಮ್ಮ ನಗ್ತೀಯಾ...ಹಿಂಗ್ಯಾಕೆ ಕೊಲ್ತೀಯಾ...
ನಿನ್ ನಗು ನೋಡ್ಬುಟ್ಟು ಬಲ್ಬ್ ಆಫ್ ಆಗೋಯ್ತು...
ಸ್ಟ್ರಾಂಗ್ ಇತ್ತು ನನ್ ಬಾಡಿ...ವೀಕ್ ಆಯ್ತು ನಿನ್ ನೋಡಿ...
ಆಗ್ಬಿಟ್ರೆ ನಾವ್ ಜೋಡಿ ಕೊಲವೆರಿಡಿ.
ಕೇಳೇ ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್.. ನೀನೇ ನನ್ನ ಸೂಪರ್ ಸ್ಟಾರ್...
ನಾನೇ ನಿನ್ನ ರಾಜ ಕುಮಾರ.ನೋ ಪ್ರಾಬ್ಲಂ....ನಿನ್ನ ಹೈಟು ಸ್ವಲ್ಪ ಜಾಸ್ತೀನೇ....
ನೋ ಪ್ರಾಬ್ಲಂ....ನಿನ್ನ ವೇಯ್ಟಿಂಗ್ ಲಿಸ್ಟ್ ನಲ್ಲಿ ನಾನಿದ್ರೂನೂ...
ನೋ ಪ್ರಾಬ್ಲಂ....ನಿನ್ನ ಹಾರ್ಟ್ ನಲ್ಲಿ ಜಾಗ ಕೊಟ್ರೆ, ಲೈಫ್ ಲಾಂಗು ಅಲ್ಲೇ ನಾನು ಜಾಂಡಾ ಊರ್ತೀನೇ...

English summary
Kollywood Actor Dhanush has crooned 'No problem' song for Hat-trick Hero Shivarajkumar's upcoming movie 'Vajrakaya' directed by A.Harsha. 'Vajrakaya' team has released the making song of 'No problem'. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada