For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಕನ್ನಡದ ರ‍್ಯಾಪ್ ಕಿಂಗ್ ಜೊತೆ ಐಂದ್ರಿತಾ 'ಸೌಂದರ್ಯ ಸಮರ'

  By Suneetha
  |

  ಕನ್ನಡ ಚಿತ್ರರಂಗದಲ್ಲಿ ನಟಿಯರಿಗೆ ಸರಿಯಾದ ಸ್ಥಾನಮಾನ-ಗೌರವ ಹಾಗೂ ನಟನೆಗೆ ತಕ್ಕ ಸಂಭಾವನೆ ಸಿಗುತ್ತಿಲ್ಲ. ಸ್ಯಾಂಡಲ್ ವುಡ್ ನಲ್ಲಿ ನಟಿಯರನ್ನು ಬರೀ ಗ್ಲಾಮರ್ ವಸ್ತುಗಳಾಗಿ ಮಾತ್ರ ನೋಡುತ್ತಾರೆ ಅಂತ ಮೊನ್ನೆ ಮೊನ್ನೆ ದೊಡ್ಡ ಬಾಂಬ್ ಸಿಡಿಸಿದ್ದ ನಟಿ ಐಂದ್ರಿತಾ ರೇ ಅವರು ಇದೀಗ ವಿಶಿಷ್ಟ ರೀತಿಯಲ್ಲಿ ಸುದ್ದಿ ಮಾಡಿದ್ದಾರೆ.

  ಹೌದು ನಟಿ ಐಂದ್ರಿತಾ ರೇ ಅವರು ಬಾಲಿವುಡ್ ರೇಂಜ್ ಗೆ ಪಾರ್ಟಿ ಸಾಂಗ್ ಒಂದಕ್ಕೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ ಕ್ಷೇತ್ರದಲ್ಲಿ ರ‍್ಯಾಪ್ ಸಾಂಗ್ ಗೆ ಹೆಜ್ಜೆ ಹಾಕುವುದು ಕಾಮನ್ ಆಗಿದ್ದು, ಇದೀಗ ಆ ಟ್ರೆಂಡ್ ಕನ್ನಡಕ್ಕೂ ಕಾಲಿಟ್ಟಿದೆ. ಕನ್ನಡದ ರ‍್ಯಾಪ್ ಸಾಂಗ್ ಗೆ ನಟಿ ಐಂದ್ರಿತಾ ರೇ ಅವರು ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದ್ದಾರೆ.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

  'ಕಡ್ಡಿಪುಡಿ' ಚಿತ್ರದ 'ಸೌಂದರ್ಯ ಸಮರ' ಸೇರಿದಂತೆ ಹಲವಾರು ಚಿತ್ರಗಳ ಮಾದಕ ಗೀತೆಗಳಿಗೆ ಹೆಜ್ಜೆ ಹಾಕಿರುವ ನಟಿ ಐಂದ್ರಿತಾ ರೇ ಅವರು ಇದೇ ಮೊದಲ ಬಾರಿಗೆ ಕನ್ನಡದ ಪಾರ್ಟಿ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಿದ್ದಾರೆ.[ಐಂದ್ರಿತಾ ಸಿಡಿಸಿದ ಬಾಂಬ್.! ಜಗ್ಗೇಶ್ ಕಡೆಯಿಂದ ಕಾಮೆಂಟ್.!]

  ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ ಅವರು ಹಾಡಿರುವ '3 ಪೆಗ್' ಅನ್ನೋ ಆಲ್ಬಂ ಸಾಂಗ್ ಒಂದರಲ್ಲಿ ಕ್ಯೂಟ್ ಆಂಡಿ ಅವರು ಸಖತ್ ಹಾಟ್ ಆಗಿ ಹೆಜ್ಜೆ ಹಾಕುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸದ್ಯಕ್ಕೆ ಈ ಪಾರ್ಟಿ ಹಾಡು ಕನ್ನಡದಲ್ಲಿ ಸಾಕಷ್ಟು ಟ್ರೆಂಡ್ ಹುಟ್ಟು ಹಾಕಿದೆ.[ನಟಿ ಐಂದ್ರಿತಾ ರೇ ಕೊಟ್ಟ ಏಟಿಗೆ ಕನ್ನಡ ಚಿತ್ರರಂಗದವರ ತಿರುಗೇಟು.!]

  ಬಿಟೌನ್ ನಲ್ಲಿ ಇಂತಹ ಪ್ರಯೋಗಗಳು ಆಗಾಗ್ಗೆ ನಡೆಯುತ್ತಲೇ ಇದ್ದು, ಕನ್ನಡದಲ್ಲಿ ಅಲ್ಲೊಂದು ಇಲ್ಲೊಂದು ಕಂಡುಬಂದಿತ್ತು, ಅದರೆ ಇದೀಗ ಇದೇ ಮೊಟ್ಟ ಮೊದಲ ಬಾರಿಗೆ ಪಾರ್ಟಿ ಹಾಡೊಂದರಲ್ಲಿ ಸ್ಟಾರ್ ನಟಿ ಆಂಡಿ ಎರ್ರಾ-ಬಿರ್ರಿ ಹೆಜ್ಜೆ ಹಾಕಿ ಪಡ್ಡೆ ಹೈಕಳ ನಿದ್ದೆ ಕೆಡುವಂತೆ ಮಾಡಿದ್ದಾರೆ.[ಐಂದ್ರಿತಾಗೂ ಮೊದಲೇ ಸ್ಯಾಂಡಲ್ ವುಡ್ ಬಗ್ಗೆ ಉರಿದುಬಿದ್ದಿದ್ದ ರಮ್ಯಾ.!]

  ಈ ಹಿಂದೆ 'ಹಾಳಾಗೋದೆ' ಎಂಬ ಆಲ್ಬಂ ಹೊರತಂದಿದ್ದ ಗೀತ ಸಾಹಿತಿ, ಹಿನ್ನಲೆ ಗಾಯಕ ಕಮ್ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಈ '3ಪೆಗ್' ಹಾಡನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕನ್ನಡ ಪ್ರೇಕ್ಷಕರು ಈ ಹೊಸ ಪ್ರಯತ್ನಕ್ಕೆ ಶಭಾಷ್ ಎಂದಿದ್ದಾರೆ.

  ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಕನ್ನಡದ ಮೊಟ್ಟ ಮೊದಲ ರ‍್ಯಾಪ್ ಸಾಂಗ್ ನಿಮ್ಮ ಫಿಲ್ಮಿಬೀಟ್ ಕನ್ನಡದಲ್ಲಿ, ಕೇವಲ ನಿಮಗಾಗಿ ನೋಡಿ ಎಂಜಾಯ್ ಮಾಡಿ.....

  English summary
  Watch first Kannada Party song '3PEG' By Rapper Chandan Shetty and Kannada Actress Aindrita Ray. Watch Video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X